44 ವರ್ಷದ ವಿಧವೆಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆ ದಿನವೇ ಆತನ ಮೇಲೆ ಆಸಿಡ್ ದಾಳಿಗೆ ಯತ್ನಿಸಿದ್ದು, ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಆಂಧ್ರಪ್ರದೇಶದ ನಂಡಲೂರಿನಲ್ಲಿ ನಡೆದಿದೆ. ಘಟನೆ ನಂತರ ಯುವಕನ ವಿವಾಹ ಕಾರ್ಯಕ್ರಮ ರದ್ದಾಗಿದೆ. ಆಸಿಡ್ ದಾಳಿ ನಡೆಸಿದ ಆರೋಪಿ ಮಹಿಳೆ ಸಾಫ್ಟ್‌ವೇರ್ ಎಂಜಿನಿಯರ್ ಜಯಾ. ಈಕೆಗೆ 22 ವರ್ಷದ ಮಗನಿದ್ದಾನೆ. ಇನ್ನೂ ಆಸಿಡ್ ದಾಳಿಗೆ ಒಳಗಾದ ಮಾಜಿ ಪ್ರಿಯಕರ ಶೇಖ್ ಸೈಯದ್ (32), ಮದುವೆಯಾಗಲು ತಯಾರಾಗಿದ್ದ. ತನ್ನೊಂದಿಗೆ ಎಲ್ಲಾ ಮುಗಿದ ಮೇಲೆ ಕೈಕೊಟ್ಟನೆಂದು ಆಸಿಡ್ ದಾಳಿಗೆ ಮುಂದಾಗಿದ್ದಾಳೆ.
ಸಯ್ಯದ್ ಮತ್ತು ಜಯಾ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಕಳೆದ 3 ವರ್ಷಗಳಲ್ಲಿ ಸೈಯ್ಯದ್ ಡ್ರೈವರ್ ಕೆಲಸಕ್ಕಾಗಿ ಕುವೈತ್‌ಗೆ ತೆರಳಿದ್ದ. ಭಾರತಕ್ಕೆ ಮರಳಿದ ನಂತರ ಜಯಾಳ ಸಂಪರ್ಕವನ್ನು ಬಿಟ್ಟು, ಇದೇ ಆಗಸ್ಟ್ 11ರಂದು ಬೇರೊಬ್ಬ ಮಹಿಳೆಯೊಂದಿಗೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ. ಮದುವೆ ನಿಲ್ಲಿಸುವ ಸಲುವಾಗಿ ಜಯಾ ಕೂಡ ಅಲ್ಲಿಗೆ ಬಂದಿದ್ದಳು. ಆದ್ರೆ ಸಯ್ಯದ್ ಆಕೆಯೊಂದಿಗೆ ಇರಲ್ಲ ಎಂದು ಹೇಳಿದ. ಇದರಿಂದ ಕೋಪಗೊಂಡ ಮಹಿಳೆ ಬಾತ್‌ರೂಮ್ ಕ್ಲೀನರ್ ಆಸಿಡ್ ತಂಡು ಅವನ ಮೇಲೆ ಎರಚಿದ್ದಾಳೆ. ಆದ್ರೆ ಅವನು ತಪ್ಪಿಸಿಕೊಂಡಿದ್ದರಿಂದ ಸಯ್ಯದ್ ಚಿಕ್ಕಮ್ಮನಿಗೆ ಆಸಿಡ್ ತಾಗಿದೆ. ಇದೇ ಕೋಪದಿಂದ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಸಯ್ಯದ್ ಜಯಾಳಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾತ್ ರೂಂ ಕ್ಲೀನಿಂಗ್ ಆಸಿಡ್ ಆಗಿದ್ದರಿಂದ ಸೈಯದ್ ಚಿಕ್ಕಮ್ಮನಿಗೆ ಗಂಭೀರ ಗಾಯಗಳಾಗಿಲ್ಲ. ಇಯ್ಯ ಜಯಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಇಬ್ಬರ ವಿರುದ್ಧವೂ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…