Featured

ಕೈಗಾರಿಕ ಕ್ಷೇತ್ರದಲ್ಲಿ ಸ್ವಾವಲಂಬನೆ ಹಾಗೂ ದೇಶದ ಪ್ರಗತಿ: ಲಾಲಾಜಿ ಮೆಂಡನ್ -Vishwanews24

ಕೈಗಾರಿಕ ಕ್ಷೇತ್ರದಲ್ಲಿ ಸ್ವಾವಲಂಬನೆ ಹಾಗೂ ದೇಶದ ಪ್ರಗತಿ: ಲಾಲಾಜಿ ಮೆಂಡನ್ -Vishwanews24

ಉಡುಪಿ, : ನಮ್ಮ ದೇಶಕ್ಕೆ ಈ ಹಿಂದೆ ಶೇ. 70 ರಷ್ಟು ಯುದ್ಧ ಸಾಮಾಗ್ರಿಗಳ ಬಿಡಿ ಭಾಗವನ್ನು ನಾವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಬಾರತೀಯ ಕೈಗಾರಿಕಾ ಸಂಸ್ಥೆಗಳಿAದಲೇ ಸೇನಾ ಸಾಮಾಗ್ರಿಗಳು ಹಾಗೂ ಇತರ ಕೈಗಾರಿಕಾ ಬಿಡಿ ಭಾಗಗಳನ್ನು ತಯಾರಿಸುತ್ತಿರುವುದರಿಂದ ಕೈಗಾರಿಕರಣ ಕ್ಷೇತ್ರದಲ್ಲಿ ದೇಶವು ಪ್ರಗತಿಯತ್ತ ಸಾಗುವುದನ್ನು ತಿಳಿಸುತ್ತದೆ ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ತಿಳಿಸಿದರು.

ಅವರು ಇಂದು, ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿರುವ 150 ಐ.ಟಿ.ಐ ಗಳ ಲೋಕಾರ್ಪಣೆ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವರ್ಚುವಲ್ ಕಾರ್ಯಕ್ರಮವನ್ನು, ಮಣಿಪಾಲದ ಪ್ರಗತಿ ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೈಗಾರಿಕಾ ಕ್ಷೇತ್ರಕ್ಕೆ ಬೇಕಾದ ಬೆಂಬಲವನ್ನು ಸರ್ಕಾರ ಈಗಾಗಲೇ ನೀಡುತ್ತಿದ್ದು, ಜಿಲ್ಲೆಯ ಸರ್ಕಾರಿ ಕೈಗಾರಿಕಾ ಸಂಸ್ಥೆಗೆ ಇನ್ನೂ ಹೆಚ್ಚಿನ ಆಧುನಿಕ ಸೌಕರ್ಯಗಳು ಬೇಕಾಗಿದ್ದು, ಸರಕಾರದಿಂದ ನೀಡುವ ಭರವಸೆ ನೀಡಿದರು.

ಕೈಗಾರಿಕ ತರಬೇತಿ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಮಾಹಿತಿಯ ಕೊರತೆ ಇದ್ದು, ಈ ಕ್ಷೇತ್ರಕ್ಕೆ ಅಧ್ಯಯನ ಮಾಡಲು ಬರುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮುಗಿಸಿದ ಕೂಡಲೇ ಉದ್ಯೋಗ ದೊರೆಯುವ ಕ್ಷೇತ್ರದಲ್ಲಿ ಒಂದಾಗಿದೆ

ಪ್ರಸ್ತುತ ದಿನಗಳಲ್ಲಿ ಎಲೆಕ್ಟಾನಿಕ್ ವಾಹನಗಳಿಗೆ ಭಾರೀ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಐ.ಟಿ.ಐ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದ ಅವರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವಲ್ಲಿ ಅನುಕೂಲವಾಗಲೆಂದು ಅನೇಕ ಯೋಜನೆಗಳನ್ನು ಸರಕರ ರೂಪಿಸಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಸರಕಾರಿ ಕೈಗಾರಿಕ ಸಂಸ್ಥೆಯ ಸದಸ್ಯ ಗುಜ್ಜಾಡಿ ಪ್ರಭಾಕರ ನಾಯಕ್ ಮಾತನಾಡಿ, ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಯಲ್ಲಿ ಸರಕಾರ ಐ.ಟಿ.ಐ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ವಿದ್ಯಾರ್ಥಿಗಳೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ವಿದ್ಯಾಭ್ಯಾಸವನ್ನು ಮಾಡಿದರೇ ದೇಶದ ಅಭಿವೃದ್ಧಿ ಕೂಡ ಸಾಧ್ಯ ಎಂದರು.

ಹೊಸ ಆವಿಷ್ಕಾರದ, ತಾಂತ್ರಿಕತೆಯ ಹಾಗೂ ಹೊಸತನದ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ಇದರಿಂದ ಅನ್ವೇಷಣೆಗಳು ಹೆಚ್ಚಾದಂತೆ ಯುವಕರು ಉದ್ಯೋಗಸ್ಥರಾಗುತ್ತಾರೆ. ಶಿಕ್ಷಣದ ಉದ್ದೇಶ ಕೇವಲ ಕಲಿಕೆಯಲ್ಲದೇ ಮುಖ್ಯವಾಗಿ ಯುವ ಜನಾಂಗಕ್ಕೆ ಉದ್ಯೋಗ ನೀಡುವುದು ಎಂದು ತಿಳಿಸಿದರು.

ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಸದಸ್ಯ ವಿಶ್ವನಾಥ ಭಟ್, ಐ.ಟಿ.ಐ ಸಂಸ್ಥೆಗೆ ಸುಸಜ್ಜಿತ ಹಾಸ್ಟೆಲ್, ಉತ್ತಮ ರಸ್ತೆ ಸಂಪರ್ಕ ಹಾಗೂ ಬಸ್ ವ್ಯವಸ್ಥೆಗಳ ಮಾಡುವ ಕುರಿತು ಶಾಸಕರಿಗೆ ಮನವಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯ ರಾಮಕೃಷ್ಣ ಪೈ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಜಗದೀಶ್ ಸ್ವಾಗತಿಸಿ, ಸತೀಶ್ ನಿರೂಪಿಸಿ, ಶಿಕ್ಷಕಿ ಅನಿತಾ ವಂದಿಸಿದರು.

Vishwa News 24

Recent Posts

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್ -vishwanews24

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್  ಅಂತರರಾಷ್ಟ್ರೀಯ ಕ್ರಿಕೆಟ್‌ಗೆ…

4 hours ago

ಕೊಲ್ಲೂರು ಮೂಕಾಂಬಿಕೆಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್‌ – vishwanews24

ಕೊಲ್ಲೂರು ಮೂಕಾಂಬಿಕೆಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್‌ ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ…

5 hours ago

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ : ಸಿದ್ದರಾಮಯ್ಯ ಸ್ಪಷ್ಟನೆ – vishwanews24

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ : ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಹಿಂದುಳಿದ ವರ್ಗಗಳ ಇಲಾಖೆಯಿಂದ ಅನುದಾನ…

5 hours ago

ಧರ್ಮಸ್ಥಳ ವಿಚಾರದಲ್ಲಿ ಸನ್ನಿಧಿಗೆ ಕಳಂಕ ತರುವ ಬಹಳ ದೊಡ್ಡ ಷಡ್ಯಂತ್ರ : ವಿಜಯೇಂದ್ರ ಆರೋಪ – vishwanews24

ಧರ್ಮಸ್ಥಳ ವಿಚಾರದಲ್ಲಿ ಸನ್ನಿಧಿಗೆ ಕಳಂಕ ತರುವ ಬಹಳ ದೊಡ್ಡ ಷಡ್ಯಂತ್ರ : ವಿಜಯೇಂದ್ರ ಆರೋಪ ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿಯ…

5 hours ago

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್  – vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ವಿಜಯ್  ಕೊಲ್ಲೂರು : ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಇಂದು ಕೊಲ್ಲೂರು ಶ್ರೀ…

6 hours ago

ಛಾಯಾಗ್ರಾಹಕ ಅನೀಶ್ ಕಾಪು ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರಧಾನ – vishwanews24

ಛಾಯಾಗ್ರಾಹಕ ಅನೀಶ್ ಕಾಪು ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರಧಾನ ಸನ್ನಿಧಿ ಸ್ಟುಡಿಯೋ ಶ್ರೀಯುತ ಅನೀಶ್ ಕಾಪು ಇವರು ಫೋಟೋಗ್ರಫಿ…

7 hours ago