Featured

ಕೈಪುಂಜಾಲು ಸಯ್ಯಿದ್ ಅರಬಿ ವಲಿಯುಲ್ಲಾ ಧರ್ಮ ಸಾಮರಸ್ಯ ದರ್ಗಾ:21 ಸೆಪ್ಟೆಂಬರ್ ಸಫರ್ ಝಿಯಾರತ್ ಸಮಾರಂಭ:vishwanews24

ಕೈಪುಂಜಾಲು ಸಯ್ಯಿದ್ ಅರಬಿ ವಲಿಯುಲ್ಲಾ ಧರ್ಮ ಸಾಮರಸ್ಯ ದರ್ಗಾ:21 ಸೆಪ್ಟೆಂಬರ್ ಸಫರ್ ಝಿಯಾರತ್ ಸಮಾರಂಭ:vishwanews24

ಹಿಂದು ಮುಸ್ಲಿಮ್ ಭೇದ ಭಾವ ಇಲ್ಲದೆ ಆಚರಿಸುವ ಝಿಯಾರತ್ ಸಮಾರಂಭ

ಕಾಪು: ಕೈಪುಂಜಾಲು ಸಮುದ್ರ ಕಿನಾರೆಯಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಸಯ್ಯಿದ್ ಅರಭಿ ವಲಿಯುಲ್ಲಾರವರ ದರ್ಗಾದಲ್ಲಿ ವರ್ಷಂಪ್ರತಿ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಸಫರ್ ತಿಂಗಳ ಕೊನೆಯ ಬುಧವಾರದಂದು ನಡೆಸುತ್ತಾ ಬಂದಿರುವ ಸಪರ್‌ ಝಿಯಾರತ್ ಸಮಾರಂಭವು ಇದೇ ಬರುವ ತಾ, 21,09,2022 ಬುಧವಾರ ದಂದು ವಿಜಂಭಣೆಯಿಂದ ದರ್ಗಾದಲ್ಲಿ ನಡೆಯಲಿದೆ ಎಂದು ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲಿಪು ಮಸೀದಿಯ ಆಡಳಿತ ಸಮಿತಿ ಸದಸ್ಯ ಅಮೀರ್ ಹಂಝಾ ತಿಳಿಸಿದರು.

ಕಾಪು-ಪೊಲಿಪುಜಾಮಿಯಾ ಮಸೀದಿಯ ಆಡಳಿತಕ್ಕೆ ಒಳಪಟ್ಟ ಕೈಪುಂಜಾಲ್ ಸಯ್ಯಿದ್ ಅರಬಿ ವಲಿಯುಲ್ಲಾರವರ ದರ್ಗಾದಲ್ಲಿ ವಿಜೃಂಭಣೆಯಿಂದ ನಡೆಯುತ್ತಾ ಬಂದಿರುವ ಸಫರ್ ಝಿಯಾರದ ಸಮಾರಂಭವು, ಕಳೆದ ಎರಡು ವರ್ಷ ಕೊರೋನಾದ ಕಾರಣದಿಂದಾಗಿ ಸಾಂಕೇತಿಕವಾಗಿ ನಡೆಸಿರುತ್ತೇವೆ, ಆದರೆ ಈ ಬಾರಿ ಈ ಮೊದಲಿನಂತೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿದ್ದು, ಬೆಳಗ್ಗೆ 6.00 ಗಂಟೆಗೆ ಪ್ರಾರಂಭವಾದರೆ ಸಂಜೆ 7.00 ಗಂಟೆ ತನಕ ಝಿಯಾರತ್ ಸಮಾರಂಭ ನಡೆಯಲಿದೆ. ಬೆಳಿಗ್ಗೆ 5 ಗಂಟೆಗೆ ಕಾಪು ಖಾಝಿ ಅಲ್ ಹಾಜ್ ಪಿ.ಬಿ.ಅಹ್ಮದ್‌ ಮುಸ್ಲಿಯಾರ್ ರವರು ದುಆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ, ಈ ಕಾರ್ಯಕ್ರಮವನ್ನು ಪೊಲಿಪು ಜಾಮಿಯಾ ಮಸೀದಿಯ ಖತೀಬರಾದ ಮುಹಮ್ಮದ್ ಇರ್ಷಾದ್ ಸಅದಿಯವರು ಉದ್ಘಾಟಿಸಲಿದ್ದಾರೆ. ಈ ಸಮಾರಂಭವು ಪೊಲಿಪು ಜಾಮಿಯಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾದ H.ಅಬುಲ್ಲ ಸೂಪರ್ ಸ್ಟಾರ್’, ‘ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ, ದಿ. H.ಮಹಮ್ಮದ್ ರವರ ಮಗ ಸಫ್ರ್ರಾಝ್ ರವರ ಉಸ್ತುವಾರಿಯಲ್ಲಿ ಈ ಬಾರಿ ಸಯೀದ್ ಅರಭಿ ವಲಿಯುಲ್ಲಾ ರವರ ದರ್ಗಾದಲ್ಲಿ ಆಂತರಿಕ ಜೀರ್ಣೋ ದ್ಧಾರ ಕೂಡ ನಡೆದಿರುತ್ತದೆ. ಇದಕ್ಕೆ ನರೇಂದ್ರ ಶ್ರೀಯಾನ್ ಮತ್ತು ಗುಣವಂತ ಶ್ರೀಯಾನ್ ಹಾಗೂ ಕುಟುಂಬದವರು ತುಂಬು ಸಹಕಾರ ನೀಡಿರುತ್ತಾರೆ.

ಈ ವಾರ್ಷಿಕ ಝಿಯಾರತ್ ಸಮಾರಂಭ ಅಲ್ಲದೇ ಬೇರೆ ದಿನಗಳಲ್ಲಿ ಅಲ್ಲಿಗೆ ಝಿಯಾರತ್ ಗೆ ಬರುವವರಿಗೆ ಸಂಜೆ 6ಗಂಟೆ ತನಕ ಅವಕಾಶ ಮಾತ್ರ ಇರುತ್ತದೆ. ಈ ಸಮಾರಂಭಕ್ಕೆ ಎಲ್ಲರನ್ನೂ ಕೂಡ ಈ ಸಂಧರ್ಭದಲ್ಲಿ ಆಹ್ವಾನಿಸುತ್ತಿದ್ದೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ‌ ಸಂಧರ್ಭದಲ್ಲಿ ಅಧ್ಯಕ್ಷ ಎಚ್ ಅಬ್ದುಲ್ ಸ್ಟಾರ್ , ರಜಾಬ್ ಹಾಜಿ ಮೊಯಿದ್ದಿನ್, ಇಂತಿಯಾಜ್ ಅಹಮ್ಮದ್,ಸರ್ಫರಾಜ್, ಇಲಿಯಾಸ್ , ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

4 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

5 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

5 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

5 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

6 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

6 days ago