Featured

ಕೊಂಕಣ ರೈಲ್ವೆ ಮಾನ್ಸೂನ್‌ ವೇಳಾಪಟ್ಟಿ ಪ್ರಕಟ : ಜೂ. 15ರಿಂದ ಅ. 20ರ ವರೆಗೆ ಜಾರಿಗೆ – vishwanews24

ಕೊಂಕಣ ರೈಲ್ವೆ ಮಾನ್ಸೂನ್‌ ವೇಳಾಪಟ್ಟಿ ಪ್ರಕಟ : ಜೂ. 15ರಿಂದ ಅ. 20ರ ವರೆಗೆ ಜಾರಿಗೆ

ಉಡುಪಿ: ಮುಂಗಾರು ಸವಾಲಿಗೆ ಕೊಂಕಣ ರೈಲ್ವೇ ಸಜ್ಜಾಗುತ್ತಿದ್ದು, ಪ್ರಯಾಣಿಕರ ಸುರಕ್ಷೆಗೆ ವಿಶೇಷ ಕ್ರಮ ತೆಗೆದುಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರು ವೇಳೆಯಲ್ಲಿ ರೈಲು ಸಂಚಾರ ಸಂಬಂಧ ವೇಳಾಪಟ್ಟಿ ಪ್ರಕಟಿಸಿದ್ದು ಜೂ. 15ರಿಂದ ಜಾರಿಗೆ ಬರಲಿದೆ.

ಕೊಂಕಣ ಭಾಗದಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಭಾರೀ ಮಳೆ, ಗುಡ್ಡ ಕುಸಿತ ಹಾಗೂ ಕಠಿನ ಭೌಗೋಳಿಕ ಪರಿಸ್ಥಿತಿಗಳು ರೈಲು ಸಂಚಾರಕ್ಕೆ ಸವಾಲಾಗುತ್ತವೆ. ಈ ಹಿನ್ನೆಲೆ ಯಲ್ಲಿ ಪ್ರಯಾಣಿಕರ ಸುರಕ್ಷೆ ಹಾಗೂ ರೈಲುಗಳ ನಿರಂತರ ಸಂಚಾರಕ್ಕೆ ಆದ್ಯತೆ ನೀಡಿರುವ ಕೊಂಕಣ ರೈಲ್ವೆ ವ್ಯಾಪಕ ಮುಂಗಾರು ಸಿದ್ಧತೆ ಕೈಗೊಂಡಿದೆ.

ಇದನ್ನೂ ಓದಿ: 

ರೈಲ್ವೇ ಮಾರ್ಗದ ವಿವಿಧ ಭಾಗಗಳಲ್ಲಿ ಮೂಲಸೌಕರ್ಯ ಬಲಪಡಿಸುವುದು, ಭೂಸುರಕ್ಷಾ ಕ್ರಮಗಳು, ರಿಯಲ್ ಟೈಮ್ ನಿಗಾವ್ಯವಸ್ಥೆ ತೀವ್ರ ಗಸ್ತು ಹಾಗೂ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ. ಹವಾಮಾನ ಮಾಹಿತಿ ಪಡೆಯಲು ಭಾರತೀಯ ಹವಾಮಾನ ಇಲಾಖೆ ಜತೆ ಕೊಂಕಣ ರೈಲ್ವೆ ನಿಕಟ ಸಮನ್ವಯದಲ್ಲಿದೆ. ಕೆಲವು ರೈಲು ವಿಭಾಗಗಳಲ್ಲಿ ವೇಗ ನಿಯಂತ್ರಣ ಜಾರಿಗೊಳಿಸ ಲಾಗುತ್ತದೆ. ಇದೇ ಕಾರಣಕ್ಕೆ ಜೂ. 15ರಿಂದ ಅ. 20ರ ವರೆಗೆ ವಿಶೇಷ ಮುಂಗಾರು ವೇಳಾಪಟ್ಟಿ ಜಾರಿಯಲ್ಲಿರಲಿದೆ.

ಪ್ರಯಾಣಿಕರು ಪ್ರಯಾಣ ಆರಂಭಿಸುವ ಮೊದಲು ರೈಲುಗಳ ಆಗಮನ ಹಾಗೂ ನಿರ್ಗಮನ ಸಮಯವನ್ನು ಪರಿಶೀಲಿಸಿಕೊಳ್ಳುವಂತೆ ಕೊಂಕಣ ರೈಲ್ವೇ ಮನವಿ ಮಾಡಿದೆ.

ಇದನ್ನೂ ಓದಿ: 

Vishwa News 24

Recent Posts

ಉಡುಪಿ : ಯುವತಿ ನಾಪತ್ತೆ -vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…

6 hours ago

ಪಡುಬಿದ್ರಿ : ವ್ಯಕ್ತಿ ನಾಪತ್ತೆ -vishwanews24

ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…

6 hours ago

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ -vishwanews24

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…

7 hours ago

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ -vishwanews24

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…

8 hours ago

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು -vishwanews24

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು…

11 hours ago

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ -vishwanews24

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…

11 hours ago