ಮುಂಬೈ: ಮುಂಬರುವ ಮುಂಗಾರು (ಮಳೆಗಾಲ) ಋತುವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರೈಲ್ವೆ ವಲಯವು ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಒಟ್ಟು 40 ಪ್ರಮುಖ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಈ ಹೊಸ ಪಟ್ಟಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ತೇಜಸ್ ಎಕ್ಸ್‌ಪ್ರೆಸ್ ಮತ್ತು ದುರಂತೋ ಎಕ್ಸ್‌ಪ್ರೆಸ್‌ನಂತಹ ಪ್ರೀಮಿಯಂ ರೈಲುಗಳ ಸಮಯ ಹಾಗೂ ಸಂಚಾರದ ದಿನಗಳೂ ಬದಲಾಗಿದ್ದು, ಜೂನ್‌ನಿಂದ ಅಕ್ಟೋಬರ್‌ವರೆಗಿನ ಮಳೆಗಾಲದ ಅವಧಿಗೆ ಇದು ಅನ್ವಯಿಸಲಿದೆ.
ಜೂನ್ 15 ರಿಂದ ಅಕ್ಟೋಬರ್ 20 ರವರೆಗೆ ಹೊಸ ವೇಳಾಪಟ್ಟಿ ಜಾರಿ
ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಡಾ. ಸ್ವಪ್ನಿಲ್ ನಿಲಾ ಅವರು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, “ಸೆಂಟ್ರಲ್ ರೈಲ್ವೆ ಮಾರ್ಗವಾಗಿ ಪ್ರಾರಂಭವಾಗುವ, ಕೊನೆಗೊಳ್ಳುವ ಅಥವಾ ಹಾದುಹೋಗುವ ಕೊಂಕಣ ಮಾರ್ಗದ ರೈಲುಗಳ ‘ಮುಂಗಾರು ವೇಳಾಪಟ್ಟಿ’ಯು 15.06.2026 ರಿಂದ ಜಾರಿಗೆ ಬರಲಿದ್ದು, 20.10.2026 ರವರೆಗೆ ಚಾಲ್ತಿಯಲ್ಲಿರಲಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮುನ್ನ ಪರಿಷ್ಕೃತ ರೈಲು ವೇಳಾಪಟ್ಟಿ ಮತ್ತು ಲೈವ್ ಸ್ಟೇಟಸ್ ಪರಿಶೀಲಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ. ಪ್ರಯಾಣಿಕರು ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ ಅಧಿಕೃತ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ ವೆಬ್‌ಸೈಟ್ ಅಥವಾ ಮೊಬೈಲ್‌ನಲ್ಲಿ ಲಭ್ಯವಿರುವ NTES ಆ್ಯಪ್ ಅನ್ನು ಬಳಸಲು ಸೂಚಿಸಲಾಗಿದೆ.
ಇದನ್ನೂ ಓದಿ:
ಸಿಎಸ್‌ಎಂಟಿ – ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 22229): ಸಾಮಾನ್ಯವಾಗಿ ವಾರದಲ್ಲಿ 6 ದಿನ (ಶುಕ್ರವಾರ ಹೊರತುಪಡಿಸಿ) ಚಲಿಸುವ ಈ ರೈಲು, ಮುಂಗಾರು ಅವಧಿಯಲ್ಲಿ (15/06/2026 ರಿಂದ 19/10/2026) ವಾರಕ್ಕೆ ಕೇವಲ 3 ದಿನ ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಸಂಚರಿಸಲಿದೆ.
ಮಡಗಾಂವ್ – ಸಿಎಸ್‌ಎಂಟಿ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 22230): ವಾರದಲ್ಲಿ 6 ದಿನ ಓಡುತ್ತಿದ್ದ ಈ ರೈಲು, ಮಳೆಗಾಲದ ಅವಧಿಯಲ್ಲಿ (16/06/2026 ರಿಂದ 20/10/2026) ವಾರಕ್ಕೆ ಮೂರು ದಿನ ಅಂದರೆ ಮಂಗಳವಾರ, ಗುರುವಾರ ಮತ್ತು ಶನಿವಾರ ಮಾತ್ರ ಚಲಿಸಲಿದೆ.
ಸಿಎಸ್‌ಎಂಟಿ – ಮಡಗಾಂವ್ ತೇಜಸ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 22119): ಮೂಲತಃ ವಾರದಲ್ಲಿ 5 ದಿನ (ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ) ಸಂಚರಿಸುತ್ತಿದ್ದ ಈ ರೈಲು, ಜೂನ್ 16 ರಿಂದ ಅಕ್ಟೋಬರ್ 20 ರವರೆಗೆ ವಾರಕ್ಕೆ 3 ದಿನ ಅಂದರೆ ಮಂಗಳವಾರ, ಗುರುವಾರ ಮತ್ತು ಶನಿವಾರ ಓಡಲಿದೆ.
ಮಡಗಾಂವ್ – ಸಿಎಸ್‌ಎಂಟಿ ತೇಜಸ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 22120): ವಾರದಲ್ಲಿ 5 ದಿನ (ಸೋಮವಾರ ಮತ್ತು ಗುರುವಾರ ಹೊರತುಪಡಿಸಿ) ಸಂಚರಿಸುತ್ತಿದ್ದ ಈ ರೈಲು, ಜೂನ್ 17 ರಿಂದ ಅಕ್ಟೋಬರ್ 18 ರವರೆಗೆ ವಾರಕ್ಕೆ 3 ದಿನ ಅಂದರೆ ಬುಧವಾರ, ಶುಕ್ರವಾರ ಮತ್ತು ಭಾನುವಾರ ಮಾತ್ರ ಸಂಚರಿಸಲಿದೆ.
ಇದನ್ನೂ ಓದಿ:
ಎಲ್‌ಟಿಟಿ – ಮಡಗಾಂವ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 11099): ವಾರದಲ್ಲಿ 4 ದಿನ (ಮಂಗಳವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ) ಚಲಿಸುತ್ತಿದ್ದ ಈ ರೈಲು, ಮುಂಗಾರು ಅವಧಿಯಲ್ಲಿ (19/06/2026 ರಿಂದ 18/10/2026) ವಾರಕ್ಕೆ ಕೇವಲ 2 ದಿನ ಅಂದರೆ ಶುಕ್ರವಾರ ಮತ್ತು ಭಾನುವಾರ ಮಾತ್ರ ಕಾರ್ಯನಿರ್ವಹಿಸಲಿದೆ.
ಮಡಗಾಂವ್ – ಎಲ್‌ಟಿಟಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 11100): ವಾರದಲ್ಲಿ 4 ದಿನ (ಮಂಗಳವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ) ಓಡುತ್ತಿದ್ದ ಈ ರೈಲು, ಜೂನ್ 20 ರಿಂದ ಅಕ್ಟೋಬರ್ 19 ರವರೆಗೆ ವಾರಕ್ಕೆ 2 ದಿನ ಅಂದರೆ ಶನಿವಾರ ಮತ್ತು ಸೋಮವಾರ ಮಾತ್ರ ಸಂಚರಿಸಲಿದೆ.
ಬೆಂಗಳೂರಿಗರೇ ಗಮನಿಸಿ: ನೂತನ ಸಿಎಂ ಆಗಿ ಡಿ.ಕೆ.ಶಿ ಪದಗ್ರಹಣದ ಹಿನ್ನೆಲೆ ನಾಳೆ ನಗರದ ಈ ರಸ್ತೆಗಳ ಸಂಚಾರದಲ್ಲಿ ಮಾರ್ಪಾಡು ಬೆಂಗಳೂರು:…
BREAKING : ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ `ಕೆ.ಅಣ್ಣಾಮಲೈ’ ರಾಜೀನಾಮೆ ಚೆನ್ನೈ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು…
ಯಾವುದೇ ಹುದ್ದೆಯ ಆಕಾಂಕ್ಷೆ ಹೊಂದಿಲ್ಲ ; ನನಗೆ ಖಾತೆ ಮುಖ್ಯವಲ್ಲ , ಕೆಲಸ ಮುಖ್ಯ : ಯುಟಿ ಖಾದರ್ ಮಂಗಳೂರು:…
ಕಠಿಣ ಕಾನೂನು ಕ್ರಮ ಕೈಗೊಳ್ಳದ ಕಾರಣ ಅಪರಾಧವೆಸಗುವುದು ಸುಲಭವಾಗಿದೆ .. ಬೆಂಗಳೂರು: ಕೈ-ಕಾಲು ಕತ್ತರಿಸುವಂತಹ ಶಿಕ್ಷೆ ವಿಧಿಸಿದರೆ ಮಾತ್ರ ಜನರು…
ವಿದ್ಯಾರ್ಥಿ ನಾಯಕನಿಂದ, ಸಿಎಂ ಗದ್ದುಗೆವರೆಗೆ ಡಿಕೆಶಿ ರೋಚಕ ಪಯಣ ಬೆಂಗಳೂರು: ರಾಜ್ಯದ ನೂತನ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು…
ಕಾಪು: ಜೂನ್ 12ರಿಂದ 14ರವರೆಗೆ ಮೂರು ದಿನ ಹಲಸು, ಮಾವು ಮೇಳ ಕಾಪು : ಶಕ್ತಿ ಇವೆಂಟ್ ಪ್ರಾಯೋಜಕತ್ವದಲ್ಲಿ ಇಲ್ಲಿನ…