ನವದೆಹಲಿ: ಕೊಂಕಣ ರೈಲ್ವೆ ವಲಯ ಅತ್ಯಂತ ಮಹತ್ವಪೂರ್ಣವಾಗಿದ್ದು, ಈ ಭಾಗದಲ್ಲಿ ಜೋಡಿ ಮಾರ್ಗ ನಿರ್ಮಾಣ, ರೈಲು ಹಳಿ ಬಲಪಡಿಸುವುದು ಸೇರಿದಂತೆ ಒಟ್ಟು ಸಾಮರ್ಥ್ಯ ಬಲಪಡಿಸಲು ವಿಸ್ತೃತ ಯೋಜನಾ ವರದಿ ರೂಪಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಉತ್ತರ ನೀಡಿದ ಅವರು, “ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಕೇರಳ ರಾಜ್ಯಗಳು ಕೊಂಕಣ ರೈಲ್ವೆ ವಲಯದ ಭಾಗೀದಾರರಾಗಿದ್ದು, ತಮ್ಮ ಪಾಲಿನ ಅಗತ್ಯ ಕೊಡುಗೆ ನೀಡಬೇಕಿದೆ. ರೈಲು ಮಾರ್ಗದಲ್ಲಿ ವನ್ಯಮೃಗ ಸಂಘರ್ಷ ತಪ್ಪಿಸಲು ಅಂಡರ್ ಪಾಸ್, ಓವರ್ ಬ್ರಿಡ್ಜ್ ನಿರ್ಮಾಣದ ಜೊತೆಗೆ ಆಪ್ಟಿಕಲ್ ಫೈಬರ್ ಕೇಬಲ್ ಹಾಗೂ ಎಐ ಕ್ಯಾಮರಾ ಆಧಾರಿತ ಎರಡು ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ” ಎಂದು ತಿಳಿಸಿದರು.
ಇದನ್ನೂ ಓದಿ:
“ರೈಲು ಅಪಘಾತ ತಪ್ಪಿಸುವ ಕವಚ್ ತಂತ್ರಜ್ಞಾನ ಅತ್ಯಾಧುನಿಕ ಹಾಗೂ ಸಂಕೀರ್ಣವಾಗಿದ್ದು, 2016ರಲ್ಲಿ ಯೋಜನೆ ಆರಂಭಿಸಲಾಯಿತು. 2024ರ ಜುಲೈ ನಲ್ಲಿ ಅಂತಿಮ ವಿನ್ಯಾಸ ರೂಪುಗೊಂಡಿದ್ದು, ಇದು ಜಾಗತಿಕ ಶ್ಲಾಘನೆಗೆ ಪಾತ್ರವಾಗಿದೆ. ಕವಚ್ ತಂತ್ರಜ್ಞಾನದಲ್ಲಿ 5 ಭಾಗಗಳಿದ್ದು, ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ಆರಂಭಿಕ ಹಂತವಾಗಿದ್ದು, ಈಗಾಗಲೆ 8,570 ಕಿಲೋ ಮೀಟರ್ ಮಾರ್ಗಗಳಲ್ಲಿ ಇದನ್ನು ಅಳವಡಿಸಲಾಗಿದೆ. ಇದಲ್ಲದೆ 1,100 ಕಿಲೋ ಮೀಟರ್ ಗೂ ಹೆಚ್ಚು ಮಾರ್ಗದಲ್ಲಿ ದೂರಸಂಪರ್ಕ ಗೋಪುರ ಅಳವಡಿಸಲಾಗಿದ್ದು, 767 ರೈಲು ನಿಲ್ದಾಣಗಳಲ್ಲಿ ದತ್ತಾಂಶ ಕೇಂದ್ರ ಸ್ಥಾಪಿಸಲಾಗಿದೆ. 6,776 ಕಿಲೋ ಮೀಟರ್ ಮಾರ್ಗದಲ್ಲಿ ಹಳಿ ಪಕ್ಕದ ಸಾಧನ – ಸಲಕರಣೆ ಅಳವಡಿಸುವಿಕೆ ಕಾರ್ಯ ಪೂರ್ಣಗೊಂಡಿದೆ” ಎಂದು ಮಾಹಿತಿ ನೀಡಿದರು.
ಅಂತರ್ಜಾಲ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನದಡಿ ಅಂತರ್ಜಾಲ ಸೌಲಭ್ಯ ವಿಸ್ತರಣೆ, ಕಡಿಮೆ ದರದಲ್ಲಿ ಅಂತರ್ಜಾಲ ಒದಗಿಸುವುದು ಹಾಗೂ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ” ಎಂದರು.
ಇದನ್ನೂ ಓದಿ:
“2014ರಲ್ಲಿ ದೇಶದಲ್ಲಿ ಕೇವಲ 25 ಕೋಟಿ ಅಂತರ್ಜಾಲ ಬಳಕೆದಾರರಿದ್ದು, ಪ್ರಸ್ತುತ 103 ಕೋಟಿಗೂ ಹೆಚ್ಚು ನಾಗರಿಕರು ಅಂತರ್ಜಾಲ ಬಳಸುತ್ತಿದ್ದಾರೆ. ಅಂತರ್ಜಾಲ ದರ ಜಗತ್ತಿನಲ್ಲೇ ಭಾರತದಲ್ಲಿ ಅತಿ ಕಡಿಮೆ ಇದ್ದು, ಪ್ರತಿ ಒಂದು ಜಿಬಿ ಅಂತರ್ಜಾಲದ ಜಾಗತಿಕ ಸರಾಸರಿ ದರ 2.59 ಡಾಲರ್ ಇದ್ದರೆ, ಭಾರತದಲ್ಲಿ 0.08 ಡಾಲರ್ ಇದೆ. ಕೃತಕ ಬುದ್ಧಿಮತ್ತೆ – ಎಐ ತಂತ್ರಜ್ಞಾನದಲ್ಲಿ ಭಾರತ ಅಗ್ರ ಮೂರು ರಾಷ್ಟ್ರಗಳ ಪೈಕಿ ಒಂದಾಗಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಸರ್ವಂ’ ಸೂಪರ್ ಕಂಪ್ಯೂಟರ್ ಜಾಗತಿಕ ಅತ್ಯುತ್ತಮ ಮಾದರಿ ಎನಿಸಿದೆ” ಎಂದು ವಿವರಿಸಿದರು.
ಉಡುಪಿ : ಮೇ 5 ರಂದು ನೇರ ಸಂದರ್ಶನ ಉಡುಪಿ : ಉದ್ಯೋಗ ಆಕಾಂಕ್ಷಿಗಳಿಗೆ ಮೇ 5 ರಂದು ಬೆಳಗ್ಗೆ…
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ ಉಡುಪಿ : ಮಾಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ…
ಮೋದಿ ದುರಾಡಳಿತದ ವಿರುದ್ಧ ಮಾತಾಡಲು ಬಿಜೆಪಿಗರಿಗೆ ಸವಾಲು.. ಬಿಜೆಪಿಯ ಬಡಜನ ವಿರೋಧಿ ಬಣ್ಣ ಮತ್ತೆ ಬಯಲು.. ವಾಣಿಜ್ಯ ಸಿಲಿಂಡರ್ ದರ…
ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು ಕಾರವಾರ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ…
ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಪರಾರಿ: ಮಕ್ಕಳಿಬ್ಬರನ್ನು ಕೊಲೆಗೈದು ನೇಣಿಗೆ ಶರಣಾದ ಪತಿ ಕುಣಿಗಲ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ…
NDMAಯಿಂದ ಬರುತ್ತೆ ತುರ್ತು ಎಚ್ಚರಿಕೆ ಸಂದೇಶ.. ನಿಮ್ಮ ಮೊಬೈಲ್ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. ನಿಮ್ಮ ಮೊಬೈಲ್ ಫೋನ್…