Featured

ಕೊಟ್ಟಾರ ಚೌಕಿ ಸರ್ಕಲ್ ಗೆ ಕ್ಯಾಪ್ಟನ್ ಪ್ರಾಂಜಲ್ ಹೆಸರು: ಶಾಸಕ ಭರತ್ ಶೆಟ್ಟಿ – vishwanews24

ಕೊಟ್ಟಾರ ಚೌಕಿ ಸರ್ಕಲ್ ಗೆ ಕ್ಯಾಪ್ಟನ್ ಪ್ರಾಂಜಲ್ ಹೆಸರು: ಶಾಸಕ ಭರತ್ ಶೆಟ್ಟಿ

ಸುರತ್ಕಲ್: ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿಸುವ ಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್ ಗೆ ಇಡಲಾಗುವುದು ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.

ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.‌ ಇದರ ಜೊತೆಗೆ ಮಂಗಳೂರಿನಲ್ಲಿ ಕಲಿತು, ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ. ಪ್ರಾಂಜಲ್ ಹೆಸರಿಡುವುದು ಸೂಕ್ತವಾಗಿದೆ. ಈ ಬಗ್ಗೆ ಮಂಗಳೂರು ಪಾಲಿಕೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಸೂಚನೆ ನೀಡಲಾಗುದು ಎಂದು ತಿಳಿಸಿದ್ದಾರೆ.

ಉತ್ತಮ ಜೀವನಕ್ಕಾಗಿ ಲಕ್ಷಾಂತರ ರೂ. ವೇತನ ಬರುವ ಬೇರೆ ಉದ್ಯೋಗವನ್ನು ಆರಿಸುವ ಬದಲು ಬಾಲ್ಯದಿಂದಲೇ ಸೇನೆಗೆ ಸೇರಿ ದೇಶ ಸೇವೆ ಮಾಡುವ ಕ್ಯಾಪ್ಟನ್ ಪ್ರಾಂಜಲ್ ಅವರ‌ ನಿರ್ಧಾರ, ಅವರ ಸಾಹಸಗಾಥೆ ಯುವಶಕ್ತಿಗೆ ಪ್ರೇರಣೆಯಾಗಿದೆ. ಅವರ ಕುಟುಂಬಕ್ಕೆ ಅನಿರೀಕ್ಷಿತ ಆಘಾತವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಶಾಸಕ ಭರತ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ

Vishwa News 24

Recent Posts

ಮೇ 1 ರಿಂದ ಶಿವಮೊಗ್ಗ – ಬೆಂಗಳೂರು ವಿಮಾನ ಹಾರಾಟ ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ರಾಘವೇಂದ್ರ ಒತ್ತಾಯ – vishwanews24

ಮೇ 1 ರಿಂದ ಶಿವಮೊಗ್ಗ - ಬೆಂಗಳೂರು ವಿಮಾನ ಹಾರಾಟ ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ರಾಘವೇಂದ್ರ ಒತ್ತಾಯ ಶಿವಮೊಗ್ಗ:…

7 minutes ago

ಬೆಳ್ತಂಗಡಿ: ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತ್ಯು – vishwanews24

ಬೆಳ್ತಂಗಡಿ: ನಾಯಿ ಅಡ್ಡ ಬಂದು ಆಟೋ ಪಲ್ಟಿ ; ಚಾಲಕ ಸಾವು ಬೆಳ್ತಂಗಡಿ: ನಾಯಿ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ…

27 minutes ago

ಉಡುಪಿ: ಬ್ಯಾಡ್ಮಿಂಟನ್‌ ತಾರೆ ಆಯುಷ್ ಶೆಟ್ಟಿಗೆ ಮುಖ್ಯಮಂತ್ರಿಯಿಂದ ಗೌರವಾರ್ಪಣೆ – vishwanews24

ಉಡುಪಿ: ಬ್ಯಾಡ್ಮಿಂಟನ್‌ ತಾರೆ ಕಾರ್ಕಳದ ಆಯುಷ್ ಶೆಟ್ಟಿಗೆ ಮುಖ್ಯಮಂತ್ರಿಯಿಂದ ಗೌರವಾರ್ಪಣೆ ಉಡುಪಿ: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ…

34 minutes ago

ಎಸ್‌ ಎಸ್‌ ಎಲ್‌ ಸಿ ಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬೇಡ, ಅಂಕವನ್ನೇ ಕೊಡಿ : ಹೈಕೋರ್ಟ್ – vishwanews24

ಎಸ್‌ಎಸ್‌ ಎಲ್‌ಸಿ ಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬೇಡ, ಅಂಕವನ್ನೇ ಕೊಡಿ : ಹೈಕೋರ್ಟ್ ಬೆಂಗಳೂರು : ಪ್ರಸಕ್ತ ಸಾಲಿನಿಂದಲೇ…

2 hours ago

ನಮ್ಮ ತಂದೆ ಸಿಎಂ ಆಗಿರುವವರೆಗೂ ನಾನು ಸಚಿವ ಸ್ಥಾನ ಕೇಳುವುದಿಲ್ಲ : ಯತೀಂದ್ರ ಸಿದ್ದರಾಮಯ್ಯ – vishwanews24

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ,  ನಮ್ಮ ತಂದೆಯೇ 5 ವರ್ಷ ಸಿಎಂ : ಮತ್ತೊಮ್ಮೆ ತಂದೆಯ ಪರ ಯತೀಂದ್ರ …

2 hours ago

ಉಡುಪಿ : ದ್ವಿತೀಯ ಪಿ.ಯು.ಸಿ ಪರೀಕ್ಷೆ -2 : ನೋಂದಣಿಗೆ ಅವಕಾಶ – vishwanews24

ಉಡುಪಿ : ದ್ವಿತೀಯಪಿ.ಯು.ಸಿಪರೀಕ್ಷೆ -2 : ಏ. 17 ರ ವರೆಗೆ ನೋಂದಣಿಗೆಅವಕಾಶ   ಉಡುಪಿ : 2026 ನೇ ಸಾಲಿನ…

2 hours ago