ಉಡುಪಿ

ಉಡುಪಿ : ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ  : ಡಿ. ಕೆ. ಶಿವಕುಮಾರ್ – vishwanews24

ಉಡುಪಿ : 2028 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ  ಮತ್ತೆ ಅಧಿಕಾರಕ್ಕೆ : ಡಿ. ಕೆ. ಶಿವಕುಮಾರ್ ಉಡುಪಿ :

ಉಡುಪಿ, : ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಯ ಮಾತಿನಂತೆ ನಮ್ಮ ಸರಕಾರವು ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರದ ಮೊದಲ ಸಂಪುಟ ಸಭೆನಲ್ಲಿಯೆ ಆ ಎಲ್ಲ ಐದು ಭರವಸೆಗಳನ್ನು ಜಾರಿ ಮಾಡಿದೆವು. ಕೊಟ್ಟ ಮಾತನ್ನು ಉಳಿಸಿಕೊಂಡೆವು, ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕಾರ್ಕಳ ಗಾಂಧಿಮೈದಾನದಲ್ಲಿ ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ವೇದಿಕೆಯಲ್ಲಿ ಕಾರ್ಕಳ ಬ್ಲಾಕ್ ಹಾಗೂ ಹೆಬ್ರಿ ಬ್ಲಾಕ್ ಆಯೋಜಿಸಿದ ಕುಟುಂಬೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು.

ಕಮಲ ಕೆಸರಿನಲ್ಲಿದ್ದರೇನೆ ಚೆಂದ, ತೆನೆ ಹೊತ್ತ ಮಹಿಳೆ ಹೊಲದಲ್ಲಿದ್ದರೇನೆ ಚೆಂದ, ದಾನ ಧರ್ಮ ಮಾಡುವ ಕೈ ಆಡಳಿತ ಮಾಡಬೇಕು ಎಂದು ನಾನು ಹೇಳುತ್ತಲೇ ಬಂದವನು ,ಅದೇ ಪ್ರಕಾರ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ತಿಂಗಳಿಗೆ ಎರಡು ಸಾವಿರ ಪಿಂಚಣಿ ಮತ್ತು ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಿದ್ದೇವೆ. ನಮ್ಮ ಮಾತಿಗೆ ನಾವು ಬದ್ಧರಾಗಿದ್ದೇವೆ .

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದವರ ಪರಿಸ್ಥಿತಿ ಏನಾಯಿತೆನ್ನುವುದನ್ನು ಸ್ವತಃ ಸುಧಾಕರ್ ಹೇಳಿದ್ದಾರೆ. ಆ ರೀತಿ ಸಮಾಧಿಯಾಗುತ್ತಿರುವವರ ಹೆಸರಿನ ಪಟ್ಟಿಯೊ ನನ್ನಲ್ಲಿ ಇದೆ, ಅದನ್ನು ಅಧಿವೇಶನದ ವೇಳೆ ಹೇಳಲಿಕ್ಕಿದ್ದೇನೆ. ಜನರು ಹೇಳಿಕೊಂಡು ಕೊಂಡಾಡುವಂತಹ ಕೆಲಸವನ್ನು ಬಿಜೆಪಿಯವರು ಮಾಡಿಲ್ಲ. ನಾವು ಮಾಡಿರುವ ಜನಪರ ಕೆಲಸ ನಿಮಗೆ ಹಿಡಿಸಲಿಲ್ಲವೆಂದಾದರೆ ಕಾಂಗ್ರೆಸ್ಸಿನವರು ಮಾಡಿದ ಕಾರ್ಯಕ್ರಮ ನಮಗೆ ಬೇಡ ಎಂದು ಬಸ್ಸಲ್ಲಿ ಟಿಕೆಟ್ ಖರೀದಿಸಿ,ತಿಂಗಳ ಪಿಂಚಣಿ ತಗೊಂಡಿದ್ದೆಲ್ಲವನ್ನೂ ಮರಳಿಸಿ,ಮನೆಯ ವಿದ್ಯುತ್ ಬಿಲ್ ಬಾಕಿ ಸಮೇತ ಪಾವತಿಸಿ ನಿಮ್ಮ ನೈಜ ವಿರೊಧವನ್ನು ತೋರಿಸಿಕೊಟ್ಟು ಬದ್ಧತೆಯನ್ನು ಸಾಬೀತುಪಡಿಸಿ ಎಂದು ಬಿಜೆಪಿಯವರ ಬದ್ಧತೆಗೆ ಸವಾಲೆಸೆದರು.

ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಿ ಬೈಲೂರಿನ ಪರಶುರಾಮ ಥೀಮ್ ಪಾರ್ಕಿನ ಅವಸ್ಥೆಯನ್ನು ಕೂಡಾ ತೋರಿಸುವ ವ್ಯವಸ್ಥೆ ಮಾಡಿ. ಮುಂದಿನ ವಿಧಾನಸಭಾ ಚುನಾವಣೆ ವೇಳೆ ಅದೇ ಅರೆಬರೆ ಥೀಮ್ ಪಾರ್ಕನ್ನು ತೋರಿಸುತ್ತಲೇ ಮತ ಪಡೆಯಿರಿ. ಈ ಭೂಮಿಲ್ಲಿ ಜನ್ಮಕ್ಕೆ ಬರುವಾಗ ಯಾರೂ ಜಾತಿ ಕೇಳಲಿಲ್ಲ. ಈ ಜಾತಿಯನ್ನು ಎತ್ತಿಕಟ್ಟಿರುವುದೇ ಬಿಜೆಪಿಯವರು ಎಂದರು.

ಕಳೆದ ವಿಧಾನಸಭಾ ಚುನಾವಣೆನಲ್ಲಿ ಸೋತವರೆಲ್ಲರನ್ನೂ ಕರೆಸಿ ಸಭೆ ನಡೆಸಿದ್ದೇನೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸೋತವರು,ಜಿಲ್ಲಾ ಹಾಗೂ ತಾಲೂಕು ಮತ್ತು ಬ್ಲಾಕ್ ಮಟ್ಟದ ಮತ್ತು ಎಲ್ಲ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎಲ್ಲರೂ ಸಭೆ ಸೇರಿ ಯಾರೆಲ್ಲ ಕಾರ್ಯಕರ್ತರಿಗೆ ಸರಕಾರದ ಸಮಿತಿಗಳಲ್ಲಿ ನೇಮಕಾತಿ ಮಾಡಿದೆ ಅವರನ್ನೆಲ್ಲರನ್ನೂ ಸಭೆ ಸೇರಿಸಿ ಸನ್ಮಾನ ಮಾಡಬೇಕು. ಬಾಕಿ ಸಮಿತಿಗಳಿಗೆ ನೇಮಕವನ್ನೂ ಪೂರ್ತಿ ಮಾಡುತ್ತೇವೆ. ಯಾರನ್ನೆಲ್ಲ ಗುರುತಿಸುವಲ್ಲಿ ಲೋಪವಾಗಿದೆ ಎಂದು ಎಲ್ಲವನ್ನೂ ಗುರುತಿಸಬೇಕು. ಮುಂದಿನ ಮಾರ್ಚ್ ತಿಂಗಳಲ್ಲಿ ರಾಜ್ಯದಲ್ಲಿ ಅದೇ ಕಾರ್ಯಕ್ರಮದ ಆಚರಣೆಯ ವಾರವನ್ನಾಗಿ ಮಾಡಲಿಕ್ಕಿದೆ. ಇದು ನನ್ನ ಆದೇಶವಲ್ಲ ಹೈಕಮಾಂಡ್ ಸೂಚನೆ. ಕರಾವಳಿಯ ಭಾಗವನ್ನು ಒಂದು ಹೊಸತಾದ ಪ್ರವಾಸೋದ್ಯಮಕ್ಕೆ ಪರಿವರ್ತನೆಗೊಳಿಸುವುದಕ್ಕಿದೆ. ಉದ್ಯೋಗ ಸೃಷ್ಠಿಯಾಗುವಂತಹ ಹೊಸ ನಿರ್ಮಾಣಗಳ ಬಗ್ಯೆ ಈಗಾಗಲೇ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಡಿ .ಕೆ.ಶಿವಕುಮಾರ್ ಹೇಳಿದರು.

ತಾನು ಮೊಯ್ಲಿಯವರ ಶಿಷ್ಯನಾಗಿ ಅವರನ್ನು ಸನ್ಮಾನಿಸುವ ಘನಕಾರ್ಯವನ್ನು ಮಾಡಲು ಒಪ್ಪಿಕೊಳ್ಳುತ್ತಿರಲಿಲ್ಲ ಬದಲಾಗಿ, ಕೆ ಪಿ ಸಿ ಸಿ ಅಧ್ಯಕ್ಷನ ನೆಲೆಯಲ್ಲಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸುವ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನ್ನ ರಾಜಕೀಯ ಏಳಿಗೆಯಲ್ಲಿ ಅವರ ಆಶೀರ್ವಾದ ಅಪಾರವೂ, ಪ್ರಮುಖವೂ ಆಗಿದೆ ಎಂದು ಮೊಯ್ಲಿಯವರನ್ನು ಕೊಂಡಾಡಿದರು.

Vishwa News 24

Recent Posts

ಉಡುಪಿ : ಬಾಲಕಿ ನಾಪತ್ತೆ -vishwanews24

ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…

7 hours ago

ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಉಬರ್’ ಸೇವೆ ಆರಂಭ -vishwanews24

ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…

10 hours ago

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ -vishwanews24

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…

13 hours ago

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ -vishwanews24

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…

14 hours ago

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ -vishwanews24

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…

14 hours ago

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ -vishwanews24

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…

14 hours ago