ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಅಣ್ಣಾಮಲೈ
ಬೆಳಗಾವಿ: ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಅವರ ಮುಂದಿನ ನಡೆ ಏನು ಅನ್ನೋ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು.ಅಣ್ಣಾಮಲೈ ರಾಜಕೀಯಕ್ಕೆ ಬರ್ತಾರೆ ಅಂತಲೂ ಹೇಳಲಾಗುತ್ತಿತ್ತು. ಆದ್ರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ.ಇದೀಗ ಅಣ್ಣಾಮಲೈ ಅವರು ರಾಜಕೀಯಕ್ಕೆ ಬರೋದು ಪಕ್ಕಾ ಆಗಿದೆ. ಈ ಬಗ್ಗೆ ಖುದ್ದು ಅವರೇ ಮಾತನಾಡಿದ್ದಾರೆ.
ಬೆಳಗಾವಿ ಅನ್ನೋ ಫೇಸ್ಬುಕ್ ಪೇಜ್ನ ಲೈವ್ನಲ್ಲಿ ಮಾತನಾಡುವಾಗ ತಾವು ರಾಜಕೀಯಕ್ಕೆ ಎಂಟ್ರಿ ಕೊಡೋದಾಗಿ ಅಣ್ಣಾಮಲೈ ತಿಳಿಸಿದ್ದಾರೆ. ಸುಮಾರು ಒಂದೂ ಕಾಲು ಗಂಟೆಯ ಲೈವ್ನಲ್ಲಿ ಆರಂಭದಲ್ಲೇ ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.ತಮಿಳುನಾಡಿನಲ್ಲಿ ನಾವೊಂದು ಫೌಂಡೇಷನ್ ಆರಂಭಿಸುತ್ತಿದ್ದೇವೆ. ಇದು ಗ್ರಾಮೀಣ ಭಾಗದಲ್ಲಿ ಲೀಡರ್ಶಿಪ್ ಬಗ್ಗೆ ಕಾರ್ಯ ನಿರ್ವಹಿಸಲಿದೆ.
ನಾನು ತಮಿಳುನಾಡು ರಾಜಕೀಯಕ್ಕೂ ಬರುತ್ತಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. 2021ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಅದರಲ್ಲಿ ಸ್ಪರ್ಧಿಸಬೇಕು ಅನ್ನೋ ಇಚ್ಛೆ ಇದೆ. ರಾಜಕೀಯಕ್ಕೆ ಹೋಗಿ ಒಂದಷ್ಟು ಬದಲಾವಣೆ ಮಾಡಬೇಕು ಅಂತಿದೆ.ಇದು ಅಣ್ಣಾಮಲೈ ತಮ್ಮ ಮುಂದಿನ ನಡೆ ಬಗ್ಗೆ ನೀಡಿರುವ ಮಾಹಿತಿ. ಈ ಮೂಲಕ ತಮಗೆ ರಾಜಕೀಯಕ್ಕೆ ಬರುವ ಆಸೆ ಇದೆ ಅಂತ ಹೇಳಿದ್ದಾರೆ.ಅಲ್ಲದೆ, ಮುಂದಿನ ಚುನಾವಣೆಯಲ್ಲಿಯೇ ಸ್ಪರ್ಧಿಸುವ ಬಗ್ಗೆಯೂ ಚಿಂತನೆ ನಡೆಸಿರೋದಾಗಿ ಅವರು ತಿಳಿಸಿದ್ದಾರೆ.
ಉಡುಪಿ: ಡಿಕೆಶಿ ಸಂಪುಟದಲ್ಲಿ ಜಾರ್ಜ್ ಗೆ ಉಪ ಮುಖ್ಯಮಂತ್ರಿ, ಐವನ್ ಗೆ ಸಚಿವ ಸ್ಥಾನ ನೀಡಲು ಕಥೊಲಿಕ್ ಸಭಾ ಆಗ್ರಹ…
ಮಲೇಷ್ಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧ.. ನಿಯಮ ಉಲ್ಲಂಘಸಿದ್ರೆ 23.95 ಕೋಟಿ ರೂ. ದಂಡ ಕೌಲಾಲಂಪುರ್: 16…
ಸುವೇಂಧು ಸಂಪುಟ ವಿಸ್ತರಣೆ: ಬಂಗಾಳದ ನೂತನ ಸಚಿವರಾಗಿ 35 ಶಾಸಕರಿಂದ ಪ್ರಮಾಣ ಸ್ವೀಕಾರ ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು…
ಬೆಂಗಳೂರು – ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ರದ್ದು ಮಂಗಳೂರು : ಜೂನ್ 3ರಂದು ನಿಗದಿಯಾಗಿದ್ದ ಬಹು…
ಕಾಪು: ರಸ್ತೆ ಬದಿಯ ಮೈಲುಗಲ್ಲು ಹಾಗೂ ಸ್ಕೂಟರ್‌ಗೆ ಕಾರು ಢಿಕ್ಕಿ: ಚಾಲಕನಿಗೆ ಗಾಯ ಕಾಪು : ಕಾರೊಂದು ರಸ್ತೆ ಬದಿಯ…
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 42 ರೂ. ಏರಿಕೆ ನವದೆಹಲಿ : ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ದೇಶದ…