Featured

ಕೊರೊನಾ ಲಕ್ಷಣ ಇದ್ರೆ ಮಾಲ್-ಮಾರುಕಟ್ಟೆಗೆ ಹೋಗುವಂತಿಲ್ಲ ; ಥರ್ಮಲ್ ಸ್ಕ್ಯಾನ್ ಕಡ್ಡಾಯ : ಸರ್ಕಾರದಿಂದ  ರೂಲ್ಸ್ ಜಾರಿಗೆ -Vishwanews24

ಕೊರೊನಾ ಲಕ್ಷಣ ಇದ್ರೆ ಮಾಲ್-ಮಾರುಕಟ್ಟೆಗೆ ಹೋಗುವಂತಿಲ್ಲ ; ಥರ್ಮಲ್ ಸ್ಕ್ಯಾನ್ ಕಡ್ಡಾಯ :  ಸರ್ಕಾರದಿಂದ  ರೂಲ್ಸ್ ಜಾರಿಗೆ -Vishwanews24

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಕಠಿಣ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಹೊಸ ಗೈಡ್‍ಲೈನ್ಸ್ ಬಿಡುಗಡೆ ಮಾಡಿದೆ.
ಇನ್ನು ಮುಂದೆ ದಿನಸಿ ಅಂಗಡಿಗಳು, ತರಕಾರಿ ಮಾರುಕಟ್ಟೆ, ಹೋಲ್‍ಸೇಲ್ ಮಾರ್ಕೆಟ್, ಮಾಲ್‍ಗಳಿಗೆ ಹೋಗುವವರಿಗೆ ರಾಜ್ಯ ಆರೋಗ್ಯ ಇಲಾಖೆ ಟಫ್ ರೂಲ್ಸ್ ಜಾರಿಗೆ ತಂದಿದೆ.

ಶೀತ, ಕೆಮ್ಮು, ಜ್ವರದ ಲಕ್ಷಣದವು ಅಂಗಡಿ-ಮಳಿಗೆಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಅಂಗಡಿ-ಮಾಲ್‍ಗಳ ಪ್ರವೇಶ ದ್ವಾರದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ನಡೆಸಿ ರೋಗ ಲಕ್ಷಣ ಇಲ್ಲದವರನ್ನು ಒಳಗೆ ಬಿಡುವಂತೆ ಹೊಸ ಗೈಡ್‍ಲೈನ್ಸ್‍ನಲ್ಲಿ ಸೂಚಿಸಲಾಗಿದೆ.

ಕೊರೊನಾ 2ನೇ ಅಲೆ ಹರಡುವುದನ್ನು ತಡೆಯಲು ಹಾಗೂ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ, ಮಾಲ್‍ಗಳಲ್ಲಿ ಜನಸಂದಣಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಹೊಸ ಗೈಡ್‍ಲೈನ್ಸ್‍ನ ಪ್ರಮುಖ ಅಂಶಗಳು..
1. ಕಡ್ಡಾಯವಾಗಿ 6 ಅಡಿ ಅಥವಾ 2ಮೀಟರ್ ಸಾಮಾಜಿಕ ಅಮತರ ಕಾಯ್ದುಕೊಳ್ಳಬೇಕು. ಅಂಗಡಿ-ಮಾಲ್‍ಗಳಲ್ಲಿ ಗಾಳಿ-ಬೆಳಕಿಗೆ ಸೂಕ್ತ ವ್ಯವಸ್ಥೆ ಮಾಡಬೇಕು.
2. ಈ ರೀತಿಯ ವ್ಯವಸ್ಥೆ ಇಲ್ಲದ ಅಂಗಡಿ-ಮಾಲ್‍ಗಳು ಬದಲಾವಣೆ ಮಾಡಿಕೊಳ್ಳಬೇಕು.
3. ಅಂಗಡಿ ಅಥವಾ ಮಾಲ್‍ಗಳ ಮುಂದೆ ದೈಹಿತ ಅಂತರ ಕಾಯ್ದುಕೊಳ್ಳಲು ವೃತ್ತಾಕಾರದ ಮಾರ್ಕ್‍ಗಳನ್ನು ಹಾಕಬೇಕು
4. ಪ್ರತಿದಿನ ದೈನಂದಿನ ವ್ಯಾಪಾರ ಆರಂಭಿಸುವ ಮೊದಲು ಅಂಗಡಿ-ಮಾಲ್‍ಗಳನ್ನು ಸ್ಯಾನಿಟೈಸ್ ಮಾಡಬೇಕು.
5. ಅಂಡಗಿ-ಮಾಲ್‍ಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಬಾಟಲಿ ಇಡಬೇಕು
6. ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ ಕಾರುಗಳನ್ನು ಸ್ಯಾನಿಟೈಸ್ ಮಾಡಿಯೇ ಬಳಸಬೇಕು.
7. ಮಕ್ಕಳು, ಹಿರಿಯ ನಾಗಕರಿರು ಮಾರುಕಟ್ಟೆ-ಮಾಲ್‍ಗಳಿಗೆ ಪ್ರವೇಶ ನಿಷೇಧಿಸಬೇಕು
8. ಮಾಲ್‍ಗಳಿಗೆ ಬರುವವರು ಮಾಸ್ಕ್ ಜತೆಗೆ ಕೈಗಳಿಗೆ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಬೇಕು
9. ಕೆಮ್ಮುವಾಗ, ಸೀನುವಾಗ ಮೂಗನ್ನು ಟಿಶ್ಯೂ ಪೇಪರ್ ಅಥವಾ ಕರ್ಚೀಪ್ ಬಳಸುವಂತೆ ನೋಡಿಕೊಳ್ಳಬೇಕು.
10. ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಉಗುಳುವುದನ್ನು ನಿಷೇಧಿಸಲಾಗಿದೆ
11. ಮಾಸ್ಕ್ ಧರಿಸದೇ ಬರುವವರಿಗೆ ಉಚಿತವಾಗಿ ಮಾಸ್ಕ್‍ಗಳನ್ನು ವಿತರಿಸಬೇಕು.

 

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

10 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

10 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

11 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

11 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

11 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

12 hours ago