ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಕಠಿಣ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಹೊಸ ಗೈಡ್‍ಲೈನ್ಸ್ ಬಿಡುಗಡೆ ಮಾಡಿದೆ.
ಇನ್ನು ಮುಂದೆ ದಿನಸಿ ಅಂಗಡಿಗಳು, ತರಕಾರಿ ಮಾರುಕಟ್ಟೆ, ಹೋಲ್‍ಸೇಲ್ ಮಾರ್ಕೆಟ್, ಮಾಲ್‍ಗಳಿಗೆ ಹೋಗುವವರಿಗೆ ರಾಜ್ಯ ಆರೋಗ್ಯ ಇಲಾಖೆ ಟಫ್ ರೂಲ್ಸ್ ಜಾರಿಗೆ ತಂದಿದೆ.
ಶೀತ, ಕೆಮ್ಮು, ಜ್ವರದ ಲಕ್ಷಣದವು ಅಂಗಡಿ-ಮಳಿಗೆಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಅಂಗಡಿ-ಮಾಲ್‍ಗಳ ಪ್ರವೇಶ ದ್ವಾರದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ನಡೆಸಿ ರೋಗ ಲಕ್ಷಣ ಇಲ್ಲದವರನ್ನು ಒಳಗೆ ಬಿಡುವಂತೆ ಹೊಸ ಗೈಡ್‍ಲೈನ್ಸ್‍ನಲ್ಲಿ ಸೂಚಿಸಲಾಗಿದೆ.
ಕೊರೊನಾ 2ನೇ ಅಲೆ ಹರಡುವುದನ್ನು ತಡೆಯಲು ಹಾಗೂ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ, ಮಾಲ್‍ಗಳಲ್ಲಿ ಜನಸಂದಣಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಹೊಸ ಗೈಡ್‍ಲೈನ್ಸ್‍ನ ಪ್ರಮುಖ ಅಂಶಗಳು..
1. ಕಡ್ಡಾಯವಾಗಿ 6 ಅಡಿ ಅಥವಾ 2ಮೀಟರ್ ಸಾಮಾಜಿಕ ಅಮತರ ಕಾಯ್ದುಕೊಳ್ಳಬೇಕು. ಅಂಗಡಿ-ಮಾಲ್‍ಗಳಲ್ಲಿ ಗಾಳಿ-ಬೆಳಕಿಗೆ ಸೂಕ್ತ ವ್ಯವಸ್ಥೆ ಮಾಡಬೇಕು.
2. ಈ ರೀತಿಯ ವ್ಯವಸ್ಥೆ ಇಲ್ಲದ ಅಂಗಡಿ-ಮಾಲ್‍ಗಳು ಬದಲಾವಣೆ ಮಾಡಿಕೊಳ್ಳಬೇಕು.
3. ಅಂಗಡಿ ಅಥವಾ ಮಾಲ್‍ಗಳ ಮುಂದೆ ದೈಹಿತ ಅಂತರ ಕಾಯ್ದುಕೊಳ್ಳಲು ವೃತ್ತಾಕಾರದ ಮಾರ್ಕ್‍ಗಳನ್ನು ಹಾಕಬೇಕು
4. ಪ್ರತಿದಿನ ದೈನಂದಿನ ವ್ಯಾಪಾರ ಆರಂಭಿಸುವ ಮೊದಲು ಅಂಗಡಿ-ಮಾಲ್‍ಗಳನ್ನು ಸ್ಯಾನಿಟೈಸ್ ಮಾಡಬೇಕು.
5. ಅಂಡಗಿ-ಮಾಲ್‍ಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಬಾಟಲಿ ಇಡಬೇಕು
6. ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ ಕಾರುಗಳನ್ನು ಸ್ಯಾನಿಟೈಸ್ ಮಾಡಿಯೇ ಬಳಸಬೇಕು.
7. ಮಕ್ಕಳು, ಹಿರಿಯ ನಾಗಕರಿರು ಮಾರುಕಟ್ಟೆ-ಮಾಲ್‍ಗಳಿಗೆ ಪ್ರವೇಶ ನಿಷೇಧಿಸಬೇಕು
8. ಮಾಲ್‍ಗಳಿಗೆ ಬರುವವರು ಮಾಸ್ಕ್ ಜತೆಗೆ ಕೈಗಳಿಗೆ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಬೇಕು
9. ಕೆಮ್ಮುವಾಗ, ಸೀನುವಾಗ ಮೂಗನ್ನು ಟಿಶ್ಯೂ ಪೇಪರ್ ಅಥವಾ ಕರ್ಚೀಪ್ ಬಳಸುವಂತೆ ನೋಡಿಕೊಳ್ಳಬೇಕು.
10. ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಉಗುಳುವುದನ್ನು ನಿಷೇಧಿಸಲಾಗಿದೆ
11. ಮಾಸ್ಕ್ ಧರಿಸದೇ ಬರುವವರಿಗೆ ಉಚಿತವಾಗಿ ಮಾಸ್ಕ್‍ಗಳನ್ನು ವಿತರಿಸಬೇಕು.
ಉಡುಪಿ : ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ…
ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ – ನಾಲ್ಕು ವರ್ಷದ ಬಾಲಕಿ ದುರ್ಮರಣ ಚಾಮರಾಜನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ಕು…
ಉಡುಪಿ : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಜಿಲ್ಲೆಯ ಮನೆಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ ಉಡುಪಿ:…
ಆರ್ಎಸ್ಎಸ್ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…
ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…