ಕಾಪು: ಕೊರೋನಾ ಎಂಬ ಮಹಾಮಾರಿ ರೋಗದಿಂದ ಭಾರತ ಲಾಕ್ಡೌನ್ ಆಗಿದ್ದು ರಾಜ್ಯ ಮಾತ್ರವಲ್ಲದೆ ಮಂಬಯಿಯ ಜನ ಜೀವನವೂ ಅಸ್ತವ್ಯಸ್ತವಾಗಿದೆ.ವಿಶೇಷವಾಗಿ ತುಳುನಾಡಿನ ಅನೇಕ ಮಂದಿ ಉದ್ಯೋಗಕ್ಕಾಗಿ ಮುಂಬಯಿ ಹಾದಿಹಿಡಿದ ಕುಟುಂಬಗಳು ಕೊರೋನಾ ಲಾಕ್ಡೌನ್ ಸಮಸ್ಯೆಯಿಂದ ತವರಿಗೆ ಮರಳಲು ಹರಸಾಹಸ ಪಡುತ್ತಿರುವುದನ್ನ ಮನಗಂಡ ಪಡುಬಿದ್ರಿ ಬಂಟರ ಸಂಘದ ಅದ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ,ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಐಕಳ ಬಾವ ಡಾ ದೇವಿಪ್ರಸಾದ್ ಶೆಟ್ಟಿ ಮುಂಬಯಿಯಲ್ಲಿರುವ ತುಳುನಾಡಿ£ ಜನತೆಯ ಸ್ಪಂದಿಸುವ ದೃಷ್ಟಿಯಿಂದ ಯಾವುದೇ ಸಮಸ್ಯೆಯಾದರೂ ಕೂಡ ನೇರವಾಗಿ ಸಂಪರ್ಕಿಸಲು ತಿಳಿಸಿರುತ್ತಾರೆ.
ಮುಂಬಯಿAದ ವಾಪಸ್ಸಾಗುವ ಸಮಯದಲ್ಲಿ ಅಥಾವ ವಾಸಿಸುತ್ತಿರುವ ಭಾಗದಲ್ಲಿ ಪಡಿತರ ಅಥಾವ ಆರೋಗ್ಯದ ವಿಚಾರದಲ್ಲಿ ಯಾವುದಾದರೂ ಸಮಸ್ಯೆ ಬಂದರೂ ಕೂಡ ಸಂಪರ್ಕಿಸಬಹುದಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರೀಯೆ ನೀಡಿದ ಅವರು” ಮುಂಬಯಿಯಲ್ಲಿ ವಾಸಿಸುತ್ತಿರುವವ ತುಳುನಾಡಿನ ಜನತೆಯ ಕಷ್ಟಕ್ಕೆ ನಾವುಗಳು ಸ್ಪಂದಿಸುವುದು ಧರ್ಮ ಮತ್ತು ಕರ್ತವ್ಯ, ತುಳುನಾಡಿನ ಅಭಿವೃದ್ದಿಯಲ್ಲಿ ಮಹತ್ತರವಾದ ಕೊಡುಗೆ ನೀಡಿದ ಹೃದಯ ಶ್ರೀಮಂತಿಕೆಯ ಬಂಧುಗಳ ಸಂಕಷ್ಟಕ್ಕೆ ಈಗಾಗಲೇ ನಿರಂತರವಾಗಿ ನಮ್ಮ ಊರಿನ ಬಂಧುಗಳನ್ನ ವಾಪಸ್ಸು ಕರೆಸಿಕೊಳ್ಳಲು ಕರ್ನಾಟಕ ರಾಜ್ಯ ಸರಕಾರದೊಂದಿಗೆ
ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೂ ಅದರ ಜತೆಗೆ ಮಹರಾಷ್ಟçದ ಸಂಸದರ ಜತೆ ಕೂಡ ಈ ಬಗ್ಗೆ ಚರ್ಚಿಸಿದ್ದೇವೆ ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ನಿಮ್ಮ ಆರೋಗ್ಯ ರಕ್ಷಣೆಗೆ ನಾವು ಸಿದ್ಧರಿದ್ದೆವೆ ಆದಷ್ಟು ಶೀಘ್ರವಾಗಿ ಊರಿಗೆ ವಾಪಸ್ಸು ಕರೆಸಿಕೊಳ್ಳುವ ಜವಬ್ಧಾರಿ ನಮಗಿದೆ ಯಾವುದೇ ಸಂದರ್ಭದಲ್ಲಿ ಸಮಸ್ಯೆಯಾದರೂ ಕೂಡ ನೇರವಾಗಿ ನನ್ನ ವೈಯಕ್ತಿಕ ಸಂಖ್ಯೆಯನ್ನು 9448026893 ಸಂಪರ್ಕಿಸಬಹುದು ಎಂದರು”
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…