Featured

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ

ಉಡುಪಿ: ಬೈಂದೂರು ತಾಲೂಕು ಕೊಲ್ಲೂರು ಗ್ರಾಮ ವ್ಯಾಪ್ತಿಯ ದಳಿ ಎಂಬಲ್ಲಿ ಮೇ 17ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮಹಿಳಾ ಯಾತ್ರಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತಪಟ್ಟ ಮಹಿಳೆಯೊಬ್ಬರ ಮೈಮೇಲಿನ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಕೊಲ್ಲೂರು ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026 ರಂತೆ ರಸ್ತೆ ಅಪಘಾತ ಪ್ರಕರಣ ದಾಖಲಾಗಿತ್ತು. ಬಳಿಕ ಘಟನಾ ಸ್ಥಳದಲ್ಲಿ ಮೃತಪಟ್ಟ ಮಹಿಳೆಯ ಮೈಮೇಲಿನ ಚಿನ್ನಾಭರಣಗಳನ್ನು ಯಾರೋ ಕಳವು ಮಾಡಿರುವ ಬಗ್ಗೆ ಶ್ರೀಕುಮಾರ ಎಂಬವರು ನೀಡಿದ ದೂರಿನ ಮೇರೆಗೆ ಅಪರಾಧ ಕ್ರಮಾಂಕ 38/2026 ಕಲಂ 303(2) BNS ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: 

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ ಅವರ ಮಾರ್ಗದರ್ಶನದಲ್ಲಿ ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಯ ಎಂ. ಕೊರ್ಲಹಳ್ಳಿ ನೇತೃತ್ವದ ತಂಡ ತಕ್ಷಣ ಕಾರ್ಯಾಚರಣೆ ನಡೆಸಿತು. ಸಿಸಿಟಿವಿ ದೃಶ್ಯಗಳು, ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದ ಫೋಟೋಗಳು ಹಾಗೂ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಆರೋಪಿಯಾದ ಹೇಮಂತ (40), ತಂದೆ ನರಸಿಂಹ ಶೆಟ್ಟಿ, ಕಲ್ಯಾಣಿಗುಡ್ಡೆ ನಿವಾಸಿ, ಕೊಲ್ಲೂರು ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ಸುಮಾರು 3.910 ಗ್ರಾಂ ತೂಕದ ಉಂಗುರ (ಅಂದಾಜು ಮೌಲ್ಯ 57 ಸಾವಿರ), 3.450 ಗ್ರಾಂ ತೂಕದ ಬಳೆ (750 ಸಾವಿರ) ಹಾಗೂ 7.160 ಗ್ರಾಂ ತೂಕದ ಸರ (F1 ಲಕ್ಷ) ಸೇರಿದಂತೆ ಒಟ್ಟು ಸುಮಾರು 12.07 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: 

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.ಈ ಕಾರ್ಯಾಚರಣೆಯಲ್ಲಿ ನಾಗೇಂದ್ರ ಹೆಚ್‌ಸಿ, ಲಕ್ಷ್ಮಣ ಗಾಣಿಗ ಹೆಚ್ಚಿಸಿ, ರಾಘವೇಂದ್ರ ಹೆಚ್‌ಸಿ ಹಾಗೂ ನಾಗರಾಜ ಪಿಸಿ ಪಾಲ್ಗೊಂಡಿದ್ದರು.

Vishwa News 24

Recent Posts

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್  – vishwanews24

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…

15 minutes ago

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ – vishwanews24

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…

34 minutes ago

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ – vishwanews24

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…

40 minutes ago

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ – vishwanews24

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…

55 minutes ago

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ – vishwanews24

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…

1 hour ago

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ – vishwanews24

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ ಕಾರವಾರ: ಕಪ್ಪೆಚಿಪ್ಪು ತೆಗೆಯಲು ಹೋಗಿ ಸಾವನ್ನಪ್ಪಿದ್ದ 11 ಮಂದಿಯ…

3 hours ago