Featured

ಕೊಲ್ಲೂರು: ಅರಶಿನಗುಂಡಿ ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದ ಶರತ್ ಮೃತದೇಹ ವಾರದ ಬಳಿಕ ಪತ್ತೆ – Vishwanews24

ಕೊಲ್ಲೂರು: ಅರಶಿನಗುಂಡಿ ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದ ಶರತ್ ಮೃತದೇಹ ವಾರದ ಬಳಿಕ ಪತ್ತೆ

ಕುಂದಾಪುರ: ಕೊಲ್ಲೂರಿನ ಅರಶಿನ ಗುಂಡಿ ಜಲಪಾತ ವೀಕ್ಷಣೆ ಮಾಡಲು ಹೋಗಿ ಜಾರಿ ಬಿದ್ದು ನೀರುಪಾಲಾಗಿದ್ದ ಭದ್ರಾವತಿ ಮೂಲದ ಯುವಕ ಶರತ್ ಮೃತದೇಹ ವಾರದ ಬಳಿಕ ಪತ್ತೆಯಾಗಿದೆ.

ಜುಲೈ 23ರಂದು ಕೊಲ್ಲೂರು ಸಮೀಪದ ಅರಣ್ಯ ಪ್ರದೇಶದಲ್ಲಿರುವ ಅರಶಿನ ಗುಂಡಿ ಜಲಪಾತ ನೋಡಲು 23 ವರ್ಷದ ಶರತ್ ಕುಮಾರ್ ಸ್ನೇಹಿತನೊಂದಿಗೆ ಹೋಗಿದ್ದರು. ಜಲಪಾತದ ಪಕ್ಕದ ಬಂಡೆ ಕಲ್ಲಿನ ಮೇಲೆ ನಿಂತಿದ್ದು ಅವರು ಜಾರಿ ನೀರಿಗೆ ಬಿದ್ದಿದ್ದರು.

ಶರತ್ ಹುಡುಕಾಟಕ್ಕೆ ಹಲವು ತಂಡಗಳು ವಾರಗಳ ಕಾಲ ಶ್ರಮ ವಹಿಸಿದ್ದವು. ಆದರೆ ತೀವ್ರ ಮಳೆ ಮತ್ತು ನೀರಿನ ರಭಸದ ಕಾರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು. ಇದೀಗ ವಾರದ ಬಳಿಕ ಜುಲೈ 30ರಂದು ಬಿದ್ದ ಜಾಗದಿಂದ ಹತ್ತು ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಕೊಲ್ಲೂರು ಪೊಲೀಸರು, ರಾಜ್ಯ ವಿಪತ್ತು ನಿರ್ವಹಣ ತಂಡ (ಎಸ್‌ಡಿಆರ್‌ಎಫ್‌), ಅರಣ್ಯ ಇಲಾಖೆ ಸಿಬಂದಿ, ಅಗ್ನಿ ಶಾಮಕ ದಳದ ಸಿಬಂದಿ, ಸ್ಥಳೀಯರು, ಶರತ್‌ ಅವರ ಸ್ನೇಹಿತರು, ಸಂಬಂಧಿಕರು ಪ್ರತೀ ದಿನ ಹಗಲಿಡೀ ನಿರಂತರ ಹುಡುಕಾಟ ನಡೆಸಿದ್ದರು. ಈಶ್ವರ್ ಮಲ್ಪೆ, ಜ್ಯೋತಿರಾಜ್ ತಂಡವೂ ಹುಡುಕಾಟ ನಡೆಸಿತ್ತು.

ಶರತ್‌ ಪತ್ತೆಗಾಗಿ ಜಲಪಾತ ಹರಿದು ಬರುವ ಬೇರೆ ಬೇರೆ ಕಡೆಗಳಲ್ಲಿ ಸಾಗರ ಬಾರಕೂರು ಅವರ ನೇತೃತ್ವದಲ್ಲಿ ಡ್ರೋನ್‌ ಕೆಮರಾದ ಮೂಲಕ ಹುಡುಕುವ ಪ್ರಯತ್ನ ಮಾಡಲಾಗಿತ್ತು

Vishwa News 24

Recent Posts

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ -vishwanews24

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…

6 hours ago

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

12 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

12 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

13 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

13 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

14 hours ago