Featured

ಕೊಲ್ಲೂರು: ಶ್ರೀ ಮೂಕಾಂಬಿಕಾ ದೇಗುಲದ ನೂತನ ರಥ ಲೋಕಾರ್ಪಣೆಗೆ ಸಿದ್ಧ – Vishwanews24

ಕೊಲ್ಲೂರು: ಶ್ರೀ ಮೂಕಾಂಬಿಕಾ ದೇಗುಲದ ನೂತನ ರಥ ಲೋಕಾರ್ಪಣೆಗೆ ಸಿದ್ಧ

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಪುರಾತನ ರಥವನ್ನು ಬದಲಾಯಿಸಿ ನೂತನ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧವಾಗಿದೆ.

ಮುರ್ಡೇಶ್ವರದ ಖ್ಯಾತ ಉದ್ಯಮಿ ದಿ| ಆರ್‌.ಎನ್‌. ಶೆಟ್ಟಿ ಅವರ ಪುತ್ರ ಉದ್ಯಮಿ ಸುನಿಲ್‌ ಶೆಟ್ಟಿ ಅವರು ಒಂದು ಕೋಟಿ ರೂ. ವೆಚ್ಚದಲ್ಲಿ ನೂತನ ರಥ ನಿರ್ಮಾಣದ ವೆಚ್ಚ ಭರಿಸಿರುತ್ತಾರೆ.

ಕೋಟೇಶ್ವರದ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಜನವರಿ ಅಥವಾ ಫೆಬ್ರವರಿಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ಮಾರ್ಚ್‌ನಲ್ಲಿ ನಡೆಯಲಿರುವ ದೇಗುಲದ ರಥೋತ್ಸವದಲ್ಲಿ ನೂತನ ರಥ ಬಳಸುವ ಬಗ್ಗೆ ಯೋಜನೆ ರೂಪಿಸಲಾಗಿದೆ.

ದೇಗುಲದಲ್ಲಿ ಈ ವರೆಗೆ ಬಳಸುತ್ತಿದ್ದ ರಥವು ಕೆಳದಿ ಅರಸರ ಕಾಲದ್ದಾಗಿದ್ದು, 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಆ ರಥದಲ್ಲಿದ್ದ ಶಿಲ್ಪಕಲೆಯಲ್ಲಿ ಯಾವುದೇ ಬದಲಾವಣೆಯಾಗದಂತೆ ನೂತನ ರಥದಲ್ಲಿ ಕೂಡ ರೂಪಿಸಿರುವುದು ರಥ ಶಿಲ್ಪಿಗಳ ಕೈಚಳಕವನ್ನು ಎತ್ತಿಹಿಡಿದಿದೆ.

ಹಳೆಯ ರಥ ಸಂರಕ್ಷಣೆ
400 ವರ್ಷಗಳ ಇತಿಹಾಸ ಹೊಂದಿರುವ ಹಳೆ ರಥವನ್ನು ದೇಗುಲದ ಆನೆಬಾಗಿಲಿನ ಬಳಿ ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡಿ ಪಾರದರ್ಶಕ ಫ್ರೇಮ್‌ ಬಳಸಿ ಭಕ್ತರ ವೀಕ್ಷಣೆಗೆ ಇಡಲಾಗುವುದು ಎಂದು ದೇಗುಲದ ಕಾರ್ಯನಿರ್ವಹಣಾ ಕಾರಿ ಮಹೇಶ ತಿಳಿಸಿದ್ದಾರೆ.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

17 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

18 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

19 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

19 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

19 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

19 hours ago