Featured

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ; ಫೆ.16ರಂದು ಶ್ರೀ ದೇವರಿಗೆ ಸಮರ್ಪಣೆ – Vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ; ಫೆ.16ರಂದು ಶ್ರೀ ದೇವರಿಗೆ ಸಮರ್ಪಣೆ

ತೆಕ್ಕಟ್ಟೆ: ಜಗನ್ಮಾತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ನಿರ್ಮಾಣ ಕಾರ್ಯ ಕುಂಭಾಶಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ಪೂರ್ಣಗೊಂಡಿದ್ದು, ಫೆ. 15ರಂದು ಸಂಪ್ರದಾಯದಂತೆ ರವಾನೆಯಾಗಲಿದ್ದು, ಫೆ.16ರಂದು ಶ್ರೀ ದೇವರಿಗೆ ಸಮರ್ಪಿತವಾಗಲಿದೆ.

57 ಅಡಿ ಎತ್ತರದ ಬ್ರಹ್ಮರಥ ಕುಂದಾಪುರ ತಾಲೂಕಿನ ಕೋಟೇಶ್ವರದ ರಥಶಿಲ್ಪಿಗಳಾದ ಲಕ್ಷ್ಮೀ ನಾರಾಯಣ ಆಚಾರ್ಯ, ಶಂಕರ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಸುಮಾರು ಒಂದು ವರ್ಷದ ಅನಂತರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಸುಮಾರು 400 ವರ್ಷಗಳ ಹಳೆದಾದ ಬ್ರಹ್ಮರಥದ ಮಾದರಿಯಲ್ಲಿಯೇ ಯಥಾವತ್ತಾಗಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಪುನಃ ನಿರ್ಮಾಣ ಮಾಡಲಾಗಿದೆ.

ಈ ಕಲಾತ್ಮಕ ಬ್ರಹ್ಮರಥದ ಅಳತೆ, ಆಯ, ವಿನ್ಯಾಸ, ಶಿಲ್ಪಕಲಾ ಕೃತಿಗಳನ್ನೇ ಅತ್ಯಂತ ಶ್ರದ್ಧೆ ಹಾಗೂ ಕೌಶಲದಿಂದ ಈ ರಥದಲ್ಲಿ ಅಭಿವ್ಯಕ್ತಿಸಲಾಗಿದೆ. ವಾಸ್ತುಶಾಸ್ತ್ರಜ್ಞ ಮಹೇಶ್‌ ಮುನಿಯಂಗಳ ಅವರ ಮಾರ್ಗದರ್ಶನದಂತೆ ಬ್ರಹ್ಮರಥದ ಅಡಿಪಾಯದಿಂದ ಅಧಿಷ್ಠಾನದ ವರೆಗೆ ಸುಮಾರು 14.7 ಅಡಿ ಎತ್ತರ, ರಥದ ಚಕ್ರ ಸುಮಾರು 8 ಅಡಿ ಎತ್ತರ ಹಾಗೂ ಮಂಟಪ ಹಾಗೂ ಶಿಖರ ಸಹಿತ ಒಟ್ಟು 57 ಅಡಿ ಎತ್ತರ ಹೊಂದಿದ್ದು, ರಥದ ಕುಸುರಿ ಕೆತ್ತನೆ ಕಾರ್ಯದಲ್ಲಿ ಸುಮಾರು 45 ಮಂದಿ ದಾರು ಶಿಲ್ಪಿಗಳು ಅವಿರತವಾಗಿ ಶ್ರಮಿಸಿದ್ದಾರೆ.

ಫೆ.15ಕ್ಕೆ ರಥ ರವಾನೆ ಉದ್ಯಮಿ ದಿ| ಆರ್‌.ಎನ್‌. ಶೆಟ್ಟಿ ಅವರ ಪುತ್ರ ಉದ್ಯಮಿ ಸುನಿಲ್‌ ಆರ್‌. ಶೆಟ್ಟಿ ಅವರು ನೂತನ ಬ್ರಹ್ಮರಥವನ್ನು ಈ ಕ್ಷೇತ್ರಕ್ಕೆ ಕಾಣಿಕೆ ರೂಪವಾಗಿ ಸಮರ್ಪಿಸಲಿದ್ದಾರೆ. ಫೆ.15ರಂದು ಬೆಳಗ್ಗೆ ನೂತನ ರಥವು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ವಾಹನ ಜಾಥಾದ ಮೂಲಕ ಕೊಲ್ಲೂರು ಪುರಪ್ರವೇಶ ಮಾಡಲಿದೆ. ಈ ಹಿಂದೆ ಶ್ರೀ ಕ್ಷೇತ್ರ ಮುರುಡೇಶ್ವರ ದೇಗುಲಕ್ಕೂ ಕೂಡ ನೂತನ ಬ್ರಹ್ಮರಥವನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ.

ತಂತ್ರಜ್ಞಾನ ಬಳಸಿಕೊಂಡು ಯಥಾವತ್‌ ಪುನಃನಿರ್ಮಾಣ ರಥ ದೇಗುಲದ ಪ್ರತೀಕ, ರಥ ನಿರ್ಮಾಣ ಕಾರ್ಯವು ಒಂದು ದೇಗುಲದ ನಿರ್ಮಾಣದಂತೆ ಅತ್ಯಂತ ವಿಧಿ ವಿಧಾನಗಳೊಂದಿಗೆ ನೆರವೇರುತ್ತದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಸುಮಾರು 400 ವರ್ಷಗಳ ಹಳೆದಾದ ಬ್ರಹ್ಮರಥ ಶಿಥಿಲಗೊಂಡಿರುವ ಪರಿಣಾಮ ಅದೇ ಮಾದರಿಯಲ್ಲಿಯೇ ಯಥಾವತ್ತಾಗಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಪುನರ್‌ ನಿರ್ಮಾಣ ಮಾಡಲು ಅವಕಾಶ ದೊರೆತಿದೆ. ಹಳೆಯದಾದ ರಥವನ್ನು ಸ್ವತ್ಛಗೊಳಿಸಿ, ಸ್ಕ್ಯಾನರ್‌ ಮೂಲಕ ಸ್ಕ್ಯಾನ್‌ ಮಾಡಿ ಅದೇ ಶಿಲ್ಪಕಲಾ ಪ್ರಕಾರಗಳನ್ನು ಅಳವಡಿಕೆ ಮಾಡಲಾಗಿದೆ. ಅಚ್ಚು ಮರ ಹಾಗೂ ಚಕ್ರವನ್ನು ಭೋಗಿ ಮರ ಮತ್ತೆ ಉಳಿದ ಭಾಗವನ್ನು ಸಂಪೂರ್ಣ ಸಾಗುವಾನಿ ಮರಗಳನ್ನು ಬಳಸಲಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೇ ಅತೀ ಎತ್ತರದ ಬನವಾಸಿಯ ಬ್ರಹ್ಮರಥ ಹಾಗೂ ಅಯೋಧ್ಯೆಯ ಶ್ರೀರಾಮ ಮಂದಿರ ಬೃಹತ್‌ ರಥವನ್ನು ನಿರ್ಮಾಣ ಮಾಡಲಿದ್ದೇವೆ.
– ಕೋಟೇಶ್ವರ ರಾಜಗೋಪಾಲ ಆಚಾರ್ಯ, ರಥಶಿಲ್ಪಿಗಳು

148 ಬ್ರಹ್ಮರಥ ನಿರ್ಮಾಣ
ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರು ಸುಮಾರು 148 ರಥವನ್ನು ದೇವಸ್ಥಾನಗಳಿಗೆ ನಿರ್ಮಿಸಿಕೊಟ್ಟಿರುವುದು ವಿಶೇಷ. ಇವರ ಕಲಾ ಸಾಧನೆಗೆ ರಾಜ್ಯ, ರಾಷ್ಟ್ರ, ಶಿಲ್ಪಕಲಾ ಅಕಾಡೆಮಿ, ರಾಷ್ಟ್ರೀಯ ಶಿಲ್ಪಗುರು ಹಾಗೂ ಜಕಣಾಚಾರಿ ಪ್ರಶಸ್ತಿ ಪುರಸ್ಕೃತಗೊಂಡಿದೆ. ಇವರ ಶಿಲ್ಪ ಕಲಾಕಾರ ದಿಂದ ಅರಳಿ ನಿಂತ ಶ್ರೀ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಬ್ರಹ್ಮರಥ ಕಲಾ ನೈಪುಣ್ಯತೆಯ ಕೈಗನ್ನಡಿ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago