Featured

ಕೋಟೇಶ್ವರದಿಂದ ಹೆಜಮಾಡಿಯವರೆಗೆ 26ಕಿ.ಮೀ. ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅನುಮೋದನೆ : ಕೋಟ ಶ್ರೀನಿವಾಸ ಪೂಜಾರಿ – vishwanews24

ಕೋಟೇಶ್ವರದಿಂದ ಹೆಜಮಾಡಿಯವರೆಗೆ 26ಕಿ.ಮೀ. ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅನುಮೋದನೆ : ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಕೆಲವು ಜೀವಹಾನಿ ಗಳಾದ ಬಳಿಕ ಜನರ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಕೋಟೇಶ್ವರ ದಿಂದ ಪ್ರಾರಂಭಗೊಂಡು ಹೆಜಮಾಡಿವರೆಗೆ 26 ಕಿ.ಮೀ. ಸರ್ವಿಸ್ ರಸ್ತೆ ಹಾಗೂ ಮೂರು ಫುಟ್ ಓವರ್ಬ್ರಿಡ್ಜ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕೆಲ ಸಮಯದ ಹಿಂದೆ ಬ್ರಹ್ಮಾವರದ ಶಾಲಾ ಪರಿಸರದಲ್ಲಿ ರಸ್ತೆ ದಾಟುತಿದ್ದ ಪುಟ್ಟ ಬಾಲಕ ವೇಗವಾಗಿ ಧಾವಿಸಿ ಬಂದ ಕಾರು ಢಿಕ್ಕಿ ಹೊಡೆದು ಮೃತಪಟ್ಟ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಸಾರ್ವಜನಿಕರ ಪ್ರತಿಭಟನೆ ನಡೆದು ಸರ್ವಿಸ್ ರಸ್ತೆ ಹಾಗೂ ಫ್ಲೈಓವರ್ ನಿರ್ಮಾಣಕ್ಕೆ ಬಲವಾದ ಬೇಡಿಕೆಗಳನ್ನು ಮಂಡಿಸಲಾಗಿತ್ತು. ಆ ಬಳಿಕ ಜಿಲ್ಲೆಯ ಅನೇಕ ಕಡೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಮಂಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರೀಯ ಹೆದ್ದಾರಿ-66ಕ್ಕೆ ಸಂಬಂಧಿಸಿದಂತೆ, ಕುಂದಾಪುರದಿಂದ ನಂತೂರು ವರೆಗಿನ ಭಾಗದಲ್ಲಿ 12 ಕಡೆಗಳಲ್ಲಿ ಸರ್ವಿಸ್ ರಸ್ತೆ ಹಾಗೂ ಒಟ್ಟು ಆರು ಕಡೆಗಳಲ್ಲಿ ಫುಟ್ಓವರ್ ಬ್ರಿಡ್ಜ್ಗಳ ನಿರ್ಮಾಣಕೆಕ ಹಸಿರು ನಿಶಾನೆ ತೋರಿಸಲಾಗಿದೆ ಎಂದು ಸಂಸದ ಕೋಟ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಸರ್ವಿಸ್ ರಸ್ತೆಗಳು:

ಕೋಟೇಶ್ವರ ಬೈಪಾಸ್ನಿಂದ ಬ್ಯಾನ್ಸ್ ಗ್ರಾನೈಟ್ವರೆಗೆ ಮುಂದುವರೆದು ಬೀಜಾಡಿ ಕ್ರಾಸ್ವರೆಗೆ ಒಟ್ಟು 830ಮೀ.

ಬೀಜಾಡಿಯಿಂದ ತೆಕ್ಕಟ್ಟೆ: ಅನ್ನಪೂರ್ಣ ಹೋಟೇಲ್ನಿಂದ ಸಾನ್ವಿ ಏಜೆನ್ಸಿ ಬೀಜಾಡಿ-ಕುಂಭಾಶಿ-ತೆಕ್ಕಟ್ಟೆವರೆಗೆ ಒಟ್ಟು 3.500ಕಿ.ಮೀ. ರಸ್ತೆಯ ಎರಡು ಕಡೆಗೆ

ಸಾಲಿಗ್ರಾಮ: ತೆಕ್ಕಟ್ಟೆ ಸೇವಾಸಂಗಮ ಶಿಶು ಮಂದಿರದಿಂದ ಮುಂದುವರೆದು ಸಾಲಿಗ್ರಾಮದವರೆಗೆ ಒಟ್ಟು 1.020ಕಿ.ಮೀ. ರಸ್ತೆ ಎರಡು ಕಡೆಗೆ

ಬ್ರಹ್ಮಾವರ: ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಎಸ್.ಎಮ್.ಎಸ್ ಜೂನಿಯರ್ ಕಾಲೇಜುವರೆಗೆ ಒಟ್ಟು 400ಮೀ. ರಸ್ತೆ ಎರಡು ಕಡೆಗೆ.

ಅಂಬಾಗಿಲು: ಸಂತೆಕಟ್ಟೆಯ ಇಂದ್ರ ಸರ್ವಿಸ್ ಸ್ಟೇಷನ್ನಿಂದ ಮಂದಾರ ವುಡ್ ಇಂಡಸ್ಟ್ರೀಸ್ವರೆಗೆ ಒಟ್ಟು ಒಂದು ಕಿ.ಮೀ.. ರಸ್ತೆಯ ಎರಡು ಕಡೆಗೆ.

ಬಲಾಯಿಪಾದೆ: ಉದ್ಯಾವರ ಜಂಕ್ಷನ್ನಿಂದ ದೇಶ್ನ ಬ್ಯಾಂಕಿನವರೆಗೆ ರಸ್ತೆಯ ಬಲಬದಿ ಮಾತ್ರ ಒಟ್ಟು 325ಮೀ.

ಉದ್ಯಾವರ: ಬಲಾಯಿಪಾದೆಯಿಂದ ಉದ್ಯಾವರ ಕಿಯಾ ಶೋರೂಂ ವರೆಗೆ ಒಟ್ಟು 1.64ಕಿ.ಮೀ. ರಸ್ತೆಯ ಎರಡು ಕಡೆಗೆ.

ಬಡಾ ಎರ್ಮಾಳ್:ಎರ್ಮಾಳ್ ಮಸೀದಿ ಹತ್ತಿರ ಒಟ್ಟು 2ಕಿ.ಮೀ. ರಸ್ತೆಯ ಎರಡು ಕಡೆಗೆ.

ಹೆಜಮಾಡಿ: ಪಡುಬಿದ್ರಿಯ ಬೋಸ್ಕೋ ಕಂಪೆನಿಯಿಂದ ಕಣ್ಣಾಂಗರ್ ಬೇಕರಿ ಸಮೀಪದವರೆಗೆ ಒಟ್ಟು 750ಮೀ. ರಸೆಯ್ತ ಬಲಬದಿಗೆ ಮಾತ್ರ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವಿಸ್ ರಸ್ತೆ: ಮುಲ್ಕಿಯಲ್ಲಿ 500ಮೀ, *ಪಡುಪಣಂಬೂರಿನಲ್ಲಿ 310ಮೀ., ಹಳೆಯಂಗಡಿಯಲ್ಲಿ 550ಮೀ. ಹಾಗೂ ಬೀರಿಯಲ್ಲಿ 700ಮೀ.

ಹೊಸ ಫುಟ್ ಓವರ್ಬ್ರಿಡ್ಜ್ಗಳು: 1.ಮಹೇಶ್ ಆಸ್ಪತ್ರೆ ಎದುರು ಬ್ರಹ್ಮಾವರ, 2.ಉಡುಪಿಯ ನಿಟ್ಟೂರು, 3.ತೆಂಕ ಎರ್ಮಾಳ್, 4.ಬಪ್ಪನಾಡು ದೇವಸ್ಥಾನ ಮೂಲ್ಕಿ, 5.ಶ್ರೀನಿವಾಸ ಕಾಲೇಜು ಮುಕ್ಕ, 6.ಗೋರೆಗುಡ್ಡೆ.

ಈ ಎಲ್ಲಾ ಕಾಮಗಾರಿಗಳಿಗೆ ಸಾರಿಗೆ ಸಚಿವಾಲಯದ ಅನುಮೋದನೆ ದೊರೆತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕಟಪಾಡಿಯಲ್ಲಿ ಓವರ್ಪಾಸ್
ಇದರೊಂದಿಗೆ ಕಟಪಾಡಿಯಲ್ಲಿ ಸುಮಾರು 500 ಮೀ. ಉದ್ದದ ವೆಹಿಕ್ಯುಲರ್ ಓವರ್ ಪಾಸ್ ನಿರ್ಮಾ ಣಕ್ಕೂ ಹೆದ್ದಾರಿ ಪ್ರಾಧಿಕಾರ ತನ್ನ ಅನುಮೋದನೆಯನ್ನು ನೀಡಿದೆ ಎಂದು ಸಂಸದರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

7 hours ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

1 day ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

1 day ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

1 day ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

1 day ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

1 day ago