ಉಡುಪಿ

ಕೋಳಿ, ಮೀನಿನ ಬೆಲೆ ದುಬಾರಿ

ಮಂಗಳೂರು : ಸಾಮಾನ್ಯವಾಗಿ ಈ ಹೊತ್ತಿಗೆ ಮೀನು ಅಥವಾ ಕೋಳಿ ಮಾಂಸದ ಬೆಲೆ ಕಡಿಮೆಯಾಗಿರುತ್ತದೆ. ದುರದೃಷ್ಟವೋ ಎಂಬಂತೆ ಪ್ರಸಕ್ತ ಹವಾಮಾನದಿಂದ ಮೀನು ಮತ್ತು ಕೋಳಿ ಮಾಂಸ ಪೂರೈಕೆ ಕುಸಿದಿದ್ದು, ಪರಿಸ್ಥಿತಿ ಮಾಂಸಾಹಾರಿಗಳಿಗೆ ಹಿತಕರವಾಗಿಲ್ಲ. ಬೆಲೆ ಗಗನಕ್ಕೇರಿದೆ.

ಎರಡ್ಮೂರು ತಿಂಗಳ ಹಿಂದೆ ಜೀವಂತ ಕೋಳಿ( ಚಿಕನ್/ಬ್ರೋಯ್ಲರ್) ಕಿಲೋಗೆ 70 ರೂ ಆಗಿದ್ದರೆ, ಈಗ 136 ರೂ ಆಗಿದೆ. ಇದೇ ರೀತಿ ಎರಡು ತಿಂಗಳ ಹಿಂದೆ ಚರ್ಮ ಸುಲಿದ ಕೋಳಿ ಕಿಲೋಗೆ 190 ರೂ ಆಗಿದ್ದರೆ ಈಗ 220 ರೂ ಆಗಿದೆ.

ಕಡಿಮೆ ಉತ್ಪಾದನೆ ಮತ್ತು ಹವಾಮಾನ ಬದಲಾವಣೆಯಿಂದ ಈಗ ಮಾಂಸಕ್ಕೆ ಬೆಲೆ ಹೆಚ್ಚಾಗಿದೆ ಎಂದು ಅನುಪಮ ಫೀಡ್ಸ್ ಮತ್ತು ಐಡಿಯಲ್ ಚಿಕನ್ ಆಡಳಿತ ಪಾಲುದಾರ ವಿನ್ಸೆಂಟ್ ಕುಟಿನ್ಹೋ ತಿಳಿಸಿದರು.

“ಅಧಿಕ ಉಷ್ಟಾಂಶವಿದ್ದಾಗ ಕೋಳಿಗಳು ಕಡಿಮೆ ಆಹಾರ ತಿನ್ನುತ್ತವೆ. ಪರಿಣಾಮ ಅವುಗಳ ತೂಕ ಕಡಿಮೆಯಾಗುತ್ತದೆ. ಎರಡನೇಯದಾಗಿ, ಅಧಿಕ ಉಷ್ಟಾಂಶದಿಂದ ಶೇ 10ರಷ್ಟು ಕೋಳಿಗಳು ಸತ್ತಿವೆ. ಹಾಗಾಗಿ ಈಗ ಕೋಳಿ ಮಾಂಸ ಬೆಲೆ ಜಾಸ್ತಿಯಾಗಿದೆ” ಎಂದವರು ವಿವರಿಸಿದರು.

ಮಂಗಳೂರು ನಗರಕ್ಕೆ ದಿನಕ್ಕೆ 1,00,000 ಕಿಲೋ ಚಿಕನ್ ಅಗತ್ಯವಿದೆ. ಈಗ ಈ ಪ್ರಾಂತ್ಯದಲ್ಲಿ ಕೇವಲ 50,000-60,000 ಕಿಲೋ ಕೋಳಿ ಮಾಂಸ ಲಭ್ಯವಿದೆ. ಇಲ್ಲಿನ ಅಗತ್ಯಕ್ಕೆ ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರಿಂದ ಕೋಳಿ ತರಿಸಲಾಗುತ್ತಿದೆ ಎಂದು ಕುಟಿನ್ಹೋ ತಿಳಿಸಿದರು.

ಅಚ್ಚರಿಯೆಂದರೆ ಕೋಳಿ ಮಾಂಸ ಬೆಲೆ ಹೆಚ್ಚಾಗಿದ್ದರೂ ಮೊಟ್ಟೆ ಬೆಲೆ ನಿಯಂತ್ರಣದಲ್ಲಿದೆ. ಶುಕ್ರವಾರ 100 ಮೊಟ್ಟೆ ಬೆಲೆ 440 ರೂ ಆಗಿತ್ತು. ಎರಡ್ಮೂರು ತಿಂಗಳ ಹಿಂದೆ 100 ಮೊಟ್ಟೆಗೆ 380 ರೂ ಆಗಿತ್ತು. “ಬೇಸಗೆಯಲ್ಲಿ ಹೆಚ್ಚಿನವರು ಮೊಟ್ಟೆ ಬಳಕೆ ಮಾಡುವುದಿಲ್ಲ” ಎಂದು ಮೊಟ್ಟೆ ರಖಂ ವ್ಯಾಪಾರಿಗಳು ಹೇಳಿದ್ದಾರೆ.

ಮೀನು ದುಬಾರಿ : ಬೆಲೆಬಾಳುವ ಮೀನು ಅಲಭ್ಯವಾಗಿದ್ದು, ಮೀನಿನ ಬೆಲೆ ಗಗನಕ್ಕೇರಿದೆ. ಈ ಹೊತ್ತಿಗೆ ಭೂತಾಯಿ, ಬಂಗುಡೆ, ಏಡಿ, ಸಿಗಡಿ, ತಾಟೆ ಮೊದಲಾದ ಮೀನುಗಳು ಯಥೇಚ್ಛ ಸಿಗಬೇಕಿದ್ದರೂ, ದೊಡ್ಡ ಮೀನಿನ ಪ್ರಮಾಣ ಕಡಿಮೆಯಾಗಿದ್ದು, ಮೀನಿನ ಬೆಲೆ ದ್ವಿಗುಣಗೊಂಡಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ. ಈಗ ಪಾಂಫ್ರೆಟ್ ಕಿಲೋಗೆ 1,000 ರೂ ಆಗಿದ್ದರೆ, ಕಿಂಗ್‍ಫಿಶ್/ಅಂಜಲಿಗೆ 600-900 ರೂ ಆಗಿದೆ.

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

2 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago