Featured

ಕೋವಿಡ್ ಲಸಿಕಾ ಪ್ರಮಾಣ ಪತ್ರದಲ್ಲಿ ಪ್ರಧಾನಿ ಫೋಟೊ ಇದ್ದರೆ ತಪ್ಪೇನಿದೆ ?  ಕೇರಳ ಹೈಕೋರ್ಟ್‌ – Vishwanews24

ಕೋವಿಡ್ ಲಸಿಕಾ ಪ್ರಮಾಣ ಪತ್ರದಲ್ಲಿ ಪ್ರಧಾನಿ ಫೋಟೊ ಇದ್ದರೆ ತಪ್ಪೇನಿದೆ ?  ಕೇರಳ ಹೈಕೋರ್ಟ್‌ – Vishwanews24

ಕೋವಿಡ್-19 ಲಸಿಕಾ ಪ್ರಮಾಣಪತ್ರಗಳಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ಚುನಾಯಿತರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವಿರುವುದರಲ್ಲಿ ತಪ್ಪೇನಿದೆ ಎಂದು ಕೇರಳ ಹೈಕೋರ್ಟ್ ಪ್ರಶ್ನಿಸಿದೆ.

ಪ್ರಮಾಣ ಪತ್ರದಿಂದ ಪ್ರಧಾನಿ ಭಾವಚಿತ್ರವನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಪ್ರಾಪ್ತತೆಯನ್ನು ಪರೀಕ್ಷಿಸಿದ ಹೈಕೋರ್ಟ್‌ನ ನ್ಯಾಯಾಧೀಶ ಪಿವಿ ಕುನ್ಹಿಕೃಷ್ಣನ್, ಪ್ರಧಾನಿಯ ಬಗ್ಗೆ ತಮಗೇನಾದರೂ ನಾಚಿಕೆ ಪಡುವಂಥದ್ದು ಇದೆಯೇ ಎಂದು ಅರ್ಜಿದಾರರನ್ನು ಪ್ರಶ್ನಿಸಿದ್ದಾರೆ.

ದೇಶದ ಜನರಿಂದಲೇ ಚುನಾಯಿತರಾಗಿ ಅಧಿಕಾರಕ್ಕೆ ಬಂದಿರುವ ಪ್ರಧಾನ ಮಂತ್ರಿಯ ಭಾವಚಿತ್ರವನ್ನು ಪ್ರಮಾಣ ಪತ್ರದಲ್ಲಿ ಇಡುವುದು ತಪ್ಪೇನಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಅನ್ಯ ದೇಶಗಳಲ್ಲಿ ಇಂಥ ಅಭ್ಯಾಸವಿಲ್ಲದೇ ಇರುವ ವಿಷಯವನ್ನು ಅರ್ಜಿದಾರರ ಪರ ವಕೀಲರು ಮುಂದಿಟ್ಟ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಅವರಿಗೆ ತಮ್ಮ ಪ್ರಧಾನಿಗಳ ಮೇಲೆ ಹೆಮ್ಮೆ ಇಲ್ಲದೇ ಇರಬಹುದು, ನಮಗೆ ಹೆಮ್ಮೆ ಇದೆ” ಎಂದಿದ್ದಾರೆ.

“ನೀವೇಕೆ ಪ್ರಧಾನಿಯ ಬಗ್ಗೆ ನಾಚಿಕೆ ಪಡುತ್ತಿದ್ದೀರಿ ? ಜನರಿಂದ ಪಡೆದ ಬಹುಮತದಿಂದಲೇ ಅವರು ಅಧಿಕಾರಕ್ಕೆ ಬಂದಿದ್ದಾರೆ.. ನಮಗೆ ಭಿನ್ನವಾದ ರಾಜಕೀಯ ನಿಲುವುಗಳು ಇರಬಹುದು, ಆದರೆ ಅವರು ನಮ್ಮ ಪ್ರಧಾನ ಮಂತ್ರಿ” ಎಂದು ಕೋರ್ಟ್ ಮುಂದುವರೆದು ಹೇಳಿದೆ.

ಪ್ರಮಾಣ ಪತ್ರದಲ್ಲಿ ಪ್ರಧಾನಿಯ ಭಾವಚಿತ್ರವು ವೈಯಕ್ತಿಕ ಸ್ವಾತಂತ್ರ‍್ಯಕ್ಕೆ ಧಕ್ಕೆ ತಂದಿದ್ದು, ಮತದಾರರ ಮನಗಳ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿದ ಅರ್ಜಿದಾರರ ಪರ ವಕೀಲ ಅಜಿತ್‌ ಜೋಯ್, ರಾಜಕೀಯ ಭಿನ್ನಭಿಪ್ರಾಯಗಳಿಗಿಂತಲೂ, ಸಾರ್ವಜನಿಕ ದುಡ್ಡಿನಲ್ಲಿ ಮಾಡುವ ಅಭಿಯಾನಗಳ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳ ದೃಷ್ಟಿಯಿಂದ ನೋಡಬೇಕಾಗಿದೆ ಎಂದಿದ್ದಾರೆ.

ಅರ್ಜಿಯಲ್ಲಿ ಯಾವುದಾದರೂ ಪ್ರಾಪ್ತ ವಾದಗಳಿವೆಯೇ ಎಂದು ಪರಿಶೀಲಿಸಿ ನೋಡುವುದಾಗಿ ನ್ಯಾಯಾಲಯ ತಿಳಿಸಿದೆ.

Vishwa News 24

Recent Posts

ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆ ಭೀಕರ ರಸ್ತೆ ಅಪಘಾತ :  11 ಮಂದಿ ಸಾವು – vishwanews24

ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆಭೀಕರ ರಸ್ತೆ ಅಪಘಾತ :  11 ಮಂದಿ ಸಾವು ಥಾಣೆ: ವ್ಯಾನ್ ಹಾಗೂ…

1 hour ago

ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು – vishwanews24

ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು ಮೀನುಗಳ ಕೊರತೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕರಾವಳಿಯ ಮೀನುಗಾರರು ಮಂಗಳೂರು(ದಕ್ಷಿಣ ಕನ್ನಡ):…

3 hours ago

ಹಿರಿಯ ಶಾಸಕರು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ : ಪರಮೇಶ್ವರ್ – vishwanews24

ಹಿರಿಯ ಶಾಸಕರು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ : ಪರಮೇಶ್ವರ್ ಬೆಂಗಳೂರು: ಅದೇನು ಗ್ಯಾಂಬ್ಲಿಂಗ್ ಅಲ್ಲ, ಹಿರಿಯ ಶಾಸಕರು ಸಚಿವ…

4 hours ago

ಕಾರ್ಕಳ : ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ – 82.37 ಕೋಟಿ ರೂ.ನೆರವಿಗೆ ಸರಕಾರಕ್ಕೆ ಮನವಿ: ಡಾ.ಎಂಎನ್‌ಆರ್ – vishwanews24

ಕಾರ್ಕಳ : ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ: ಡಾ.ಎಂ.ಎನ್.ರಾಜೇಂದ್ರಕುಮಾರ್ 82.37 ಕೋಟಿ ರೂ.ನೆರವಿಗೆ ಸರಕಾರಕ್ಕೆ ಮನವಿ: ಡಾ.ಎಂಎನ್‌ಆರ್ ಕಾರ್ಕಳ: ಕಾರ್ಕಳದ…

4 hours ago

ಮೂಡುಬಿದಿರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ; ಎಂಟು ದನಗಳ ರಕ್ಷಣೆ – vishwanews24

ಮೂಡುಬಿದಿರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ; ಎಂಟು ದನಗಳ ರಕ್ಷಣೆ, ಎರಡು ವಾಹನ ವಶ ಮೂಡುಬಿದಿರೆ: ಅತ್ಯಂತ ಹಿಂಸಾತ್ಮಕವಾಗಿ ಹಾಗೂ…

4 hours ago

ರಾಜ್ಯದ ಹಲವೆಡೆ ಇಂದು, ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ : ಹವಾಮಾನ ಇಲಾಖೆ – vishwanews24

ರಾಜ್ಯದ ಹಲವೆಡೆ ಇಂದು, ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ : ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹಲವೆಡೆ ಇಂದು…

5 hours ago