ಕಾಪು: ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರದ ಆದೇಶದಂತೆ ಸೋಮವಾರ ಫ್ರಂಟ್ ಲೈನ್ ವರ್ಕರ್ ಹಾಗೂ ವಿದೇಶ ಪ್ರವಾಸ ಮಾಡುವವರಿಗೆ ಮಾತ್ರ ವ್ಯಾಕ್ಸಿನೇಷನ್ ಬಗ್ಗೆ ತಿಳಿಯಪಡಿಸಿತ್ತು ಆದರೇ ವ್ಯಾಕ್ಸಿನೇಷನ್ ಇದೆ ಎಂಬ ಸುಳ್ಳು ವಾಟ್ಸಪ್ ಮೆಸೇಜ್ ಹರಿದಾಡಿದ ಪರಿಣಾಮದಿಂದ ಆಸ್ಪತ್ರೆಗೆ ಬೆಳಗ್ಗೆಯ ಜನ ಧಾವಿಸಿದ್ದರು ಇದರ ನಡುವೆ ಪುರಸಭೆಯ ಮಾಜಿ ಸದಸ್ಯರು ಕೆಲವರು ಆಸ್ಪತ್ರೆಯ ಒಳಗಡೆ ತೆರಳಿ ನರ್ಸ್ ಹಾಗೂ ಸಿಬ್ಬಂದಿಗಳ ಜತೆ ಪುರಸಭೆ ಸದಸ್ಯರ ಆಪ್ತರಿಗೆ ವ್ಯಾಕ್ಸಿನೇಷನ್ ಮಾಡುವ ಬಗ್ಗೆ ಒತ್ತಡ ಮಾಡಿದ ಪರಿಣಾಮ ಅದಕ್ಕೆ ಒಪ್ಪದ ವೈದ್ಯಾಧಿಕಾರಿ ಸುಬ್ರಯಾ ಕಾಮತ್ ವಿರುದ್ಧ ಮಾಜಿ ಸದಸ್ಯರು ಕಿಡಿಕಾರಿದ ಘಟನೆ ನಡೆಯಿತು ಇವರೊಂದಿಗೆ ಸೇರಿದ ಜನಸ್ತೋಮ ಕೂಡ ಧ್ವನಿಗೂಡಿಸಿತು.
ಈ ಬಗ್ಗೆ ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಮಾತಾನಾಡಿ” ವ್ಯಾಕ್ಸಿನೇಷನ್ ಇದೆ ಎಂಬ ಸುಳ್ಳು ಸುದ್ದಿ ಹರಿದಾಡಿದ ಪರಿಣಾಮ ಈ ರೀತಿಯ ಗೊಂದಲ ಉಂಟಾಗಿದೆ ಮುಂದಿನ ದಿನ ಈ ರೀತಿಯಾಗದಂತೆ ಕಾರ್ಯಪ್ರವೃತರಾಗಲಿದೆ ಎಂದರು”.
“ನಾವು ಸರ್ಕಾರದ ಆದೇಶದ ಪ್ರಕಾರ ಕಾರ್ಯನಿರ್ವಹಿಸುವುದು ವಿನಹ ಜನಪ್ರತಿನಿಧಿಗಳು ನಮಗೆ ಯಾವುದೇ ಒತ್ತಡ ಹಾಕಿದರೂ ನೀಡಲು ಸಾಧ್ಯವಾಗುವುದಿಲ್ಲ ಏಕೆಂದರೆ ವ್ಯಾಕ್ಸಿನ್ ಇಂಡೆಟ್ ಪ್ರಕಾರ ಬರುತ್ತೆ ಬಂದಿರುವುದನ್ನು ಸರ್ಕಾರದ ಆದೇಶದಂತೆ ನೀಡಲಾಗುತ್ತದೆ”
ಡಾ.ಸುಬ್ರಾಯ ಕಾಮತ್
ವೈಧ್ಯಧಿಕಾರಿ-ಕಾಪು ಪಿ.ಎಚ್.ಸಿ
ಸ್ಥಳಕ್ಕಾಗಮಿಸಿದ ಕಾಪು ಪೋಲಿಸರು ಪರಿಸ್ಥಿತಿಯನ್ನು ಸುಧಾರಿಸಿ ಬಂದಿರುವ ಜನರಿಗೆ ಸಮಸ್ಯೆಯ ಬಗ್ಗೆ ತಿಳುವಳಿಕೆ ಮೂಡಿಸಿ ಗೊಂದಲ ಬಗೆಹರಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…