Featured

ಕೋವಿಡ್ ಸಂಕಷ್ಟ: ಉದ್ಯೋಗ ವಂಚಿತರಿಗೆ ಇ-ರಿಕ್ಷಾ ಒದಗಿಸುವ ನೂತನ ಕಾರ್ಯಕ್ರಮಕ್ಕೆ ನಟ ಸೋನು ಸೊದ್ ಚಾಲನೆ -Vishwanews24

ಕೋವಿಡ್ ಸಂಕಷ್ಟ: ಉದ್ಯೋಗ ವಂಚಿತರಿಗೆ ಇ-ರಿಕ್ಷಾ ಒದಗಿಸುವ ನೂತನ ಕಾರ್ಯಕ್ರಮಕ್ಕೆ ನಟ ಸೋನು ಸೊದ್ ಚಾಲನೆ -Vishwanews24

ಮುಂಬೈ: ಕೊರೋನಾ ವೈರಸ್ ಸಾಂಕ್ರಾಮಿಕದ ವೇಳೆ ಬದುಕಿನ ಮೂಲವನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ದುರ್ಬಲ ಜನರಿಗೆ ಇ- ರಿಕ್ಷಾ ಒದಗಿಸುವ ನೂತನ ಕಾರ್ಯಕ್ರಮವೊಂದನ್ನು ಬಾಲಿವುಡ್ ನಟ ಸೋನು ಸೊದ್  ಚಾಲನೆ ನೀಡಿದ್ದಾರೆ.

‘ದಬಾಂಗ್’  ‘ಜೋಧಾ ಅಕ್ಬರ್’ ಮತ್ತು ‘ಸಿಂಬಾ’ ಚಿತ್ರಗಳ ಮೂಲಕ ಹೆಸರಾಗಿರುವ ಸೋನು ಸೋದ್, ಈ ವರ್ಷದ ಆರಂಭದಲ್ಲಿ ಕೊರೋನಾವೈರಸ್  ಕಾಣಿಸಿಕೊಂಡ ನಂತರ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ತಲುಪಲು ಪರಿತಪಿಸುತ್ತಿದ್ದ ವಲಸೆ ಜನರು ತಮ್ಮೂರಿಗೆ ಮರಳಲು ಸೋನ್ ಸೊದ್ ತಮ್ಮ ಸ್ವಂತ ಹಣದಲ್ಲಿ  ಬಸ್ ಗಳ ವ್ಯವಸ್ಥೆ ಮಾಡಿದ್ದರು.

‘ಖುದ್ ಕಮಾವೊ ಘರ್ ಚಲಾವೊ’ ಎಂಬ ಹೆಸರಿನ ಈ ಕಾರ್ಯಕ್ರಮ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು
ಸೋನ್ ಸೊದ್ ಹೇಳಿದ್ದಾರೆ.

ಏನನ್ನಾದರೂ ನೀಡುವುದಕ್ಕಿಂತಲೂ ಉದ್ಯೋಗ ಒದಗಿಸುವುದು ಪ್ರಮುಖವಾದದ್ದು ಎಂಬುದರಲ್ಲಿ ನಂಬಿಕೆ ಹೊಂದಿದ್ದು, ಈ ಕಾರ್ಯಕ್ರಮ ಅವರನ್ನು ಸ್ವಾವಲಂಬಿಗಳನ್ನಾ ಮಾಡುವ ಮೂಲಕ ಮತ್ತೆ ತ್ಮ ಕಾಲುಗಳ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ಇರುವುದಾಗಿ ಸೊದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಂಕ್ರಾಮಿಕದ ವೇಳೆ ಉದ್ಯೋಗ ಕಳೆದುಕೊಂಡವರನ್ನು ಕಂಪನಿಗಳಿಗೆ ಸಂಪರ್ಕಿಸುವುದು ಮತ್ತು ಅವರ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಈ ಹಿಂದೆ ಪ್ರವಾಸಿ ರೋಜ್ಗಾರ್ ಆ್ಯಪ್ ನ್ನು ಸಹ ಸೋನು ಸೊದ್ ಪ್ರಾರಂಭಿಸಿದ್ದರು.

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

2 days ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

3 days ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

3 days ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

3 days ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

3 days ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

3 days ago