Featured

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಕೆಜಿಎಫ್​ ಖ್ಯಾತಿಯ ನಟ ಹರೀಶ್​ ರೈ – Vishwanews24

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಕೆಜಿಎಫ್​ ಖ್ಯಾತಿಯ ನಟ ಹರೀಶ್​ ರೈ ; ಸಹಾಯಕ್ಕೆ ಮನವಿ

ಸ್ಯಾಂಡಲ್ ವುಡ್‌ನ ಖ್ಯಾತ ನಟ, ಕೆಜಿಎಫ್-2 ಸಿನಿಮಾದಲ್ಲಿ ನಟಿಸಿದ್ದಿದ್ದ ಹರೀಶ್​ ರೈ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತ್ತೀಚಿಗೆ ಪರೀಕ್ಷೆ ಮಾಡಿಸಿದ ಹರೀಶ್ ರೈ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ.

ಸ್ಯಾಂಡಲ್ ವುಡ್‌ನ ಖ್ಯಾತ ನಟ, ಕೆಜಿಎಫ್-2 ಸಿನಿಮಾದಲ್ಲಿ ನಟಿಸಿದ್ದಿದ್ದ ಹರೀಶ್​ ರೈ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತ್ತೀಚಿಗೆ ಪರೀಕ್ಷೆ ಮಾಡಿಸಿದ ಹರೀಶ್ ರೈ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಸುಮಾರು ಮೂರು ವರ್ಷದಿಂದ ಅವರು ಅನಾರೋಗ್ಯದಿಂದ ನರಳಾಡುತ್ತಿದ್ದರು. ಆದರೆ ಮಕ್ಕಳು ಚಿಕ್ಕವರು ಹಾಗೂ ‘ಕೆಜಿಎಫ್​ 2’ ಚಿತ್ರದ ಶೂಟಿಂಗ್​ ನಲ್ಲಿದ್ದಕಾರಣ ಚಿಕಿತ್ಸೆ ಪಡೆಯಲು ತಡ ಮಾಡಿದ್ದರಂತೆ. ಹಣದ ಕೊರತೆ ಕೂಡ ಇದ್ದಿದ್ದರಿಂದ ಹರೀಶ್ ರೈ ತೀರ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಳಿಕ ವೈದ್ಯರ ಬಳಿ ಹೋಗಿದ ಹರೀಶ್ ರೈ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಕೂಡಲೇ ಆಪರೇಷನ್​ ಸಹ ಮಾಡಿದರು. ಆದರೆ ಆಪರೇಷನ್​ ನಂತರ ಕೂಡ ಒಂದಿಷ್ಟು ಸಮಸ್ಯೆಗಳು ಎದುರಾಗಿದ್ದು ತೀರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಅನೇಕರು ಮಾತನಾಡಿ ಹಣದ ಸಹಾಯ ಮಾಡುವಂತೆ ಹೇಳಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರೀಶ್ ರಾಯ್ ಅವರಿಗೆ ಹೆಲ್ಪ್ ಮಾಡಿ ಮೊಬೈಲ್ ನಂಬರ್ ಸಹ ಹಾಕಿದ್ದರು. ಇದೀಗ ಹರೀಶ್​ ರೈ ಅವರೇ ಯೂ​ಟ್ಯೂಬ್​ ಚಾನೆಲ್​ ಒಂದರಲ್ಲಿ ಮಾತನಾಡಿದ್ದಾರೆ.

ನಾನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ , ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯುತ್ತೇನೆ : ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ – Vishwanews24

ಅನಾರೋಗ್ಯದ ಬಗ್ಗೆ ಮಾತನಾಡಿದ ಹರೀಶ್ ರೈ ‘ವೈದ್ಯರು ನಾಲ್ಕನೇ ಸ್ಟೇಜ್​ ಎಂದರು. ಇನ್ನು ನನಗೆ ಎಷ್ಟು ಟೈಮ್​ ಉಳಿದಿದೆ ಅಂತ ಕೇಳಿದೆ. ಮೂರು ವರ್ಷ ಹೆದರಬೇಡಿ ಅಂತ ಡಾಕ್ಟರ್​ ಹೇಳಿದ್ರು. ರೇಡಿಯೋ ಥೆರಪಿ ವರ್ಕ್​ ಆಗದ ಕಾರಣ ಬೇರೆ ಮಾತ್ರೆ ನೀಡುತ್ತಿದ್ದಾರೆ. ಆ ಮಾತ್ರೆಗಳಿಗೆ ಖರ್ಚು ಜಾಸ್ತಿ. ತಿಂಗಳಿಗೆ 3.5 ಲಕ್ಷ ಖರ್ಚಾಗಬಹುದು. 8-10 ತಿಂಗಳು ಮಾತ್ರೆ ತೆಗೆದುಕೊಳ್ಳಬೇಕು ಅಂತ ವೈದ್ಯರು ಹೇಳಿದ್ದಾರೆ’ ಎಂದು ಹರೀಶ್​ ರೈ ಕಷ್ಟದ ಸ್ಥಿತಿ ಬಿಚ್ಚಿಟ್ಟಿದ್ದಾರೆ.

ಹಣದ ಅವಶ್ಯಕತೆ ತುಂಬಾ ಇದೆ ಎಂದು ಹರೀಶ್​ ರೈ ಹೇಳಿದ್ದಾರೆ. ಫ್ಯಾಮಿಲಿ ಯಾರೂ ಬರಲ್ಲ. ಕಷ್ಟದಲ್ಲಿ ಅವರು ಸಹಾಯಕೂಡ ಮಾಡಲ್ಲ. ಜನರು ಬರುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ಸದ್ಯ ಹರೀಶ್ ರೈ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ‘ಕೆಜಿಎಫ್​ 2 ಸಿನಿಮಾ ಶೂಟಿಂಗ್​ ಸಂದರ್ಭದಲ್ಲೂ ನನಗೆ ಗಂಟಲಲ್ಲಿ ಗಡ್ಡೆ ಇತ್ತು. ಆದರೂ ಕೂಡ ನಾನು ಶೂಟಿಂಗ್​ ಮಾಡಿದೆ. ಫೈಟಿಂಗ್​ ಸೀನ್​ ಸಹ ಮಾಡಿದೆ. ಗಡ್ಡೆ ಯಾರಿಗೂ ಕಾಣಿಸುತ್ತಿರಲಿಲ್ಲ. ನಾನು ಯಾರಿಗೂ ಹೇಳಲಿಲ್ಲ. ನಾನೇ ಮುಚ್ಚುಮರೆ ಮಾಡಿದೆ’ ಎಂದು ಹರೀಶ್​ ರೈ ಹೇಳಿದ್ದಾರೆ. ಒಂದು ವೇಳೆ ಈ ಸಮಸ್ಯೆ ಗೊತ್ತಾದರೆ ಆಫರ್ ಬರುವುದಿಲ್ಲ ಅಂತ ಭಯ ಆಯ್ತು. ಹಾಗಾಗಿ ಕೆಜಿಎಫ್-2 ಚಿತ್ರ ರಿಲೀಸ್ ಆದ ಬಳಿಕ ನಾನು ಸಂದರ್ಶನ ಕೂಡ ಕೊಟ್ಟಿಲ್ಲ. ಅವರೆಲ್ಲಾ ತಪ್ಪು ತಿಳಿದುಕಂಡಿದ್ದಾರಾ ಏನೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಸಹಾಯ ಮಾಡಿದ್ದಾರೆ ಅಂತ ಬಹಿರಂಗ ಪಡಿಸಿದ್ದಾರೆ.

ಉಡುಪಿ: ನನ್ನ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ತೋರಿಸಿ , ವಿನಾಕಾರಣ ಆರೋಪಿಸಬೇಡಿ : ಕೋಟ ಶ್ರೀನಿವಾಸ ಪೂಜಾರಿ – Vishwanews24

ಈಗ ಕನ್ನಡ ಚಿತ್ರರಂಗದ ಕೆಲವು ಸ್ಟಾರ್​ ಕಲಾವಿದರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಹೆಸರು ಹೇಳಲು ಇಷ್ಟಪದೆ ಚಿಕಿತ್ಸೆಗೆ ಬೇಕಾಗುವ ಹಣವನ್ನು ನೀಡಲು ಕನ್ನಡದ ಹೀರೋ ಒಬ್ಬರು ಮುಂದೆ ಬಂದಿದ್ದಾರೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹರೀಶ್​ ರೈ ಅವರು ಮಾಹಿತಿ ನೀಡಿದ್ದಾರೆ.

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

3 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

3 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

23 hours ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

1 day ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

1 day ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 day ago