ಕ್ರಿಶ್ಚಿಯನ್‍ನಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವಕ, ಮತಾಂತರವಾದರೆ ಮದುವೆ ಮಾಡಿಸ್ತೀನಿ ಅಂತ ಕೈಕೊಟ್ಟ ಪ್ರೇಯಸಿ ತಂದೆ ,ಪ್ರೇಯಸಿಗಾಗಿ ಮಾನವ ಹಕ್ಕು ಆಯೋಗದ ಮೊರೆ -Vishwanews24

ಹೈದರಾಬಾದ್: 11 ವರ್ಷದ ಪ್ರೀತಿಗಾಗಿ ಕ್ರಿಶ್ಚಿಯನ್‍ನಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವಕನೋರ್ವ ಈಗ ಪ್ರೇಯಸಿಗಾಗಿ ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದಾನೆ.

ಕ್ರಿಶ್ಚಿಯನ್ ಆಗಿದ್ದ ಬಾಬ್ಬಿಲಿ ಭಾಸ್ಕರ್(26) ಮುಸ್ಲಿಂ ಯುವತಿಯನ್ನು ಕಳೆದ 11 ವರ್ಷಗಳಿಂದ ಪ್ರೀತಿಸುತ್ತಿದ್ದಾನೆ. ಆದರೆ ಯುವತಿ ತಂದೆ ನೀನು ಮುಸ್ಲಿಂ ಆಗಿ ಮತಾಂತರಗೊಂಡರೆ ನನ್ನ ಮಗಳನ್ನು ನಿನ್ನ ಜೊತೆ ಮದುವೆ ಮಾಡಿಸುತ್ತೇನೆ ಎಂದು ಷರತ್ತು ಹಾಕಿದ್ದರು. ಆದ್ದರಿಂದ ಬಾಬ್ಬಿಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡನು. ಬಳಿಕ ತನ್ನ ಹೆಸರನ್ನು ಮೊಹ್ಮದ್ ಅಬ್ದುಲ್ ಎಂದು ಬದಲಿಸಿಕೊಂಡನು.

ನಾನು ಮತಾಂತರಗೊಂಡಿದ್ದೇನೆ ಇನ್ನಾದರೂ ನನ್ನ ಪ್ರೇಯಸಿಯನ್ನು ಮದುವೆ ಆಗಿ ಚೆನ್ನಾಗಿರಬಹುದು ಎಂದು ಮೊಹ್ಮದ್ ಖುಷಿಯಾಗಿದ್ದನು. ಇದೇ ಖುಷಿಯಲ್ಲಿ ಪ್ರೇಯಸಿ ಮನೆಗೆ ಮೊಹ್ಮದ್ ಮದುವೆ ಬಗ್ಗೆ ಮಾತನಾಡಲು ಹೋಗಿದ್ದಾನೆ. ಆದರೆ ಯುವತಿ ತಂದೆ ಮಾತ್ರ, ನನ್ನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡಲ್ಲ ಎಂದು ವರಸೆ ಬದಲಿಸಿದ್ದಾರೆ ಎಂದು ಮೊಹ್ಮದ್ ಆರೋಪಿಸಿದ್ದಾನೆ. ಜೊತೆಗೆ ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಕಳೆದ 1 ವರ್ಷದಿಂದ ನನ್ನ ಪ್ರೇಯಸಿಯನ್ನು ನಾನು ನೋಡಿಲ್ಲ. ಆಕೆಯನ್ನು ನಾನು ಭೇಟಿ ಮಾಡೋದಕ್ಕೆ ಬಿಟ್ಟಿಲ್ಲ. ನಮ್ಮಿಬ್ಬರನ್ನು ಆಕೆಯ ತಂದೆ ದೂರ ಮಾಡಿದ್ದಾರೆ. ಅವಳು ಬದುಕ್ಕಿದ್ದಾಳೋ? ಇಲ್ಲವೋ? ಎನ್ನುವುದು ಕೂಡ ನನಗೆ ಗೊತ್ತಿಲ್ಲ. ಇದೇ ಕಾರಣಕ್ಕೆ ನಾನು ಈಗ ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದೇನೆ ಎಂದು ಮೊಹ್ಮದ್ ಹೇಳಿದ್ದಾನೆ.

ನಾನು ಸಾಕಷ್ಟು ಬಾರಿ ಪ್ರೇಯಸಿ ಜೊತೆ ಮಾತನಾಡಲು ಅವಕಾಶ ಕೊಡಿ ಎಂದು ಆಕೆಯ ತಂದೆ ಬಳಿ ಅಂಗಲಾಚಿದ್ದೇನೆ. ಆದರೆ ಅವರು ನನಗೆ ಆಕೆಯನ್ನು ನೋಡಲು ಅಥವಾ ಆಕೆಯೊಂದಿಗೆ ಮತನಾಡಲು ಅವಕಾಶ ನೀಡಿಲ್ಲ. ಒಂದು ವೇಳೆ ನನ್ನ ಪ್ರೀತಿ ನನಗೆ ಸಿಗದಿದ್ದರೂ ನಾನು ಧರ್ಮವನ್ನು ಬಿಡಲ್ಲ. ನನ್ನ ಜೀವ ಇರುವವರೆಗೂ ಮುಸ್ಲಿಂ ಧರ್ಮವನ್ನೇ ಪಾಲಿಸುತ್ತೇನೆ ಎಂದು ತಿಳಿಸಿದ್ದಾನೆ.

ಪ್ರೇಯಸಿಯನ್ನು ತನ್ನಿಂದ ದೂರ ಮಾಡಿ, ತನ್ನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಮೊಹ್ಮದ್ ಮಾನವ ಹಕ್ಕು ಆಯೋಗಕ್ಕೆ ಯುವತಿಯ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾನೆ. ನನಗೆ ಪ್ರೀತಿ ಮಾಡುವ ಹಕ್ಕಿದೆ. ಪ್ರೀತಿಸಿದವಳನ್ನು ಮದುವೆ ಆಗುವ ಹಕ್ಕು ಕೂಡ ಇದೆ ಎಂದು ಮೊಹ್ಮದ್ ಈ ನಿರ್ಧಾರ ತೆಗೆದುಕೊಂಡಿದ್ದಾನೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ಉಡುಪಿ: ಕುಕ್ಕೆಹಳ್ಳಿ ಕೊರಗಜ್ಜ ಕ್ಷೇತ್ರದಿಂದ ನವೆಂಬರ್‌ನಿಂದ ಹೊಸ ಯಕ್ಷಗಾನ ಮೇಳ ಆರಂಭ – vishwanews24

ಉಡುಪಿ: ಕುಕ್ಕೆಹಳ್ಳಿ ಕೊರಗಜ್ಜ ಕ್ಷೇತ್ರದಿಂದ ನವೆಂಬರ್‌ನಿಂದ ಹೊಸ ಯಕ್ಷಗಾನ ಮೇಳ ಆರಂಭ ಉಡುಪಿ: ಕುಕ್ಕೆಹಳ್ಳಿ ಈಶ್ವರನಗರದಲ್ಲಿರುವ ಸ್ವಾಮಿ ಕೊರಗಜ್ಜ ಕ್ಷೇತ್ರದ…

17 hours ago

ಕೋಟ: ಹೆದ್ದಾರಿ ಮಧ್ಯೆ ಟಿವಿ, ಟೇಬಲ್ ಇಟ್ಟು ಯುವಕನ ಹುಚ್ಚಾಟ – ಪೊಲೀಸರ ಮೇಲೆ ಕತ್ತಿ ಬೀಸಿ ಹಲ್ಲೆಗೆ ಯತ್ನ ; ಯುವಕ ವಶಕ್ಕೆ – vishwanews24

ಕೋಟ: ಹೆದ್ದಾರಿ ಮಧ್ಯೆ ಟಿವಿ, ಟೇಬಲ್ ಇಟ್ಟು ಯುವಕನ ಹುಚ್ಚಾಟ - ಪೊಲೀಸರ ಮೇಲೆ ಕತ್ತಿ ಬೀಸಿ ಹಲ್ಲೆಗೆ ಯತ್ನ…

17 hours ago

ಕರಾವಳಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿ: ವಿಶ್ವ ಹಿಂದೂ ಪರಿಷತ್ ಆಗ್ರಹ – vishwanews24

ಕರಾವಳಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿ: ವಿಶ್ವ ಹಿಂದೂ ಪರಿಷತ್ ಆಗ್ರಹ ಮಂಗಳೂರು: ಮಂಗಳೂರು ನಗರ ಪೊಲೀಸ್…

17 hours ago

ಮಂಗಳೂರು : ಜೈಲಿಗೆ ಡ್ರಗ್ಸ್‌, ಮೊಬೈಲ್‌ ಎಸೆತಕ್ಕೆ ಬ್ರೇಕ್ : ಆವರಣ ಗೋಡೆಗೆ 12 ಅಡಿ ಎತ್ತರದ ತಂತಿ ಬೇಲಿ ಅಳವಡಿಕೆ – vishwanews24

ಮಂಗಳೂರು : ಜೈಲಿಗೆ ಡ್ರಗ್ಸ್‌, ಮೊಬೈಲ್‌ ಎಸೆತಕ್ಕೆ ಬ್ರೇಕ್ : ಆವರಣ ಗೋಡೆಗೆ 12 ಅಡಿ ಎತ್ತರದ ತಂತಿ ಬೇಲಿ…

18 hours ago

ಚಿಕನ್ ಪ್ರಿಯರಿಗೆ ಶಾಕ್ : ದಾಖಲೆಯ ಏರಿಕೆ ಕಂಡ ಚಿಕನ್, ಮೊಟ್ಟೆ ದರ – vishwanews24

ಗ್ರಾಹಕರಿಗೆ ಚಿಕನ್ ಮತ್ತು ಮೊಟ್ಟೆ ಬೆಲೆ ಏರಿಕೆ ಶಾಕ್: ದಾಖಲೆ ಬರೆದ ದರ ಬೆಂಗಳೂರು: ಚಿಕನ್ ಮತ್ತು ಮೊಟ್ಟೆ ಪ್ರಿಯರಿಗೆ…

18 hours ago

ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ವಿಚಿತ್ರ ವರ್ತನೆಗೆ ವ್ಯಾಪಕ ಆಕ್ರೋಶ : ಸೂಕ್ತ ಕ್ರಮಕ್ಕೆ ಒತ್ತಾಯ – vishwanews24

ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ವಿಚಿತ್ರ ವರ್ತನೆಗೆ ವ್ಯಾಪಕ ಆಕ್ರೋಶ : ಸೂಕ್ತ ಕ್ರಮಕ್ಕೆ ಒತ್ತಾಯ ಮಂಗಳೂರು:  ಸರ್ಕಾರಿ ಕಾಲೇಜಿನ ಬಿಬಿಎ…

18 hours ago