Featured

ಕ್ರೈಸ್ತರು ಪೂಜಿಸುವ ಪವಿತ್ರ ಶಿಲುಬೆಯನ್ನು ನಿಷೇಧ ಮಾಡಬೇಕು ಎಂದು ಪ್ರತಿಭಟನೆಯ ಪೋಸ್ಟರ್ ಮಾಡಿರುವುದು ತಪ್ಪು : ಅಮೃತ್ ಶೆಣೈ -Vishwanews24

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಪ್ರಾರ್ಥನಾ ಮಂದಿರವೊಂದರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಾರೆ ಎಂಬ ಆರೋಪ ಹೊರಿಸಿ ಅದರ ಕ್ರೈಸ್ತರು ಪೂಜಿಸುವ ಪವಿತ್ರ ಶಿಲುಬೆಯನ್ನು ನಿಷೇಧ ಮಾಡಬೇಕು ಎಂದು ಪೋಸ್ಟರ್ ಮಾಡಿರುವ ವರ್ತನೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಮಂಗಳೂರಿನ ಮುಲ್ಕಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಾರೆ ಎಂದು ಒಂದು ಸಂಸ್ಥೆಯ ವಿರುದ್ಧ ಪ್ರತಿಭಟನೆ ಇದೇ ಬರುವ26 ಕ್ಕೆ ಇದ್ದು, ಬಲವಂತದ ಮತಾಂತರ ತಪ್ಪು ,ಹಾಗೆ ಮಾಡಿದವರ ವಿರುದ್ಧ ಪ್ರತಿಭಟನೆ ಮಾಡುವುದು ಅದನ್ನು ಮಾಡುವ ಸಂಘಟನೆಯ ಹಕ್ಕಿನ ವ್ಯಾಪ್ರಿಯಲ್ಲಿ ಬರುತ್ತದೆ. ಆದರೆ ಕೆಲವರು ಮಾಡಿದ ತಪ್ಪಿಗೆ(ಮಾಡಿದ್ದರೆ) ಇಡೀ ಸಮುದಾಯದವರು ಪೂಜಿಸುವ ಪವಿತ್ರ ಶಿಲುಬೆಯನ್ನು ನಿಷೇಧ ಮಾಡಬೇಕು ಎಂದು ಪೋಸ್ಟರ್ ಮಾಡಿರುವುದು ಅವುಗಳನ್ನು ಹಂಚುವುದು ಸರ್ವಥಾ ತಪ್ಪು .

ಒಳ್ಳೆಯವರು ಕೆಟ್ಟವರು ಎಲ್ಲಾ ಕುಟುಂಬದಲ್ಲಿಯೂ ,ಊರಿನಲ್ಲಿಯೂ ,ಸಮುದಾಯದಲ್ಲಿಯೂ ,ದೇಶದಲ್ಲೂ ಇರುತ್ತಾರೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕ್ರೈಸ್ತ ಸಮುದಾಯದವರು ಇತರ ಧರ್ಮೀಯರಿಗೆ ಸರಿಸಮಾನವಾಗಿ ಶೈಕ್ಷಣಿಕ ಸಂಸ್ಥೆಗಳನ್ನು ,ಆಸ್ಪತ್ರೆಗಳನ್ನು ನೂರಾರು ವರ್ಷಗಳಿಂದ ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಸಾಮಾಜಿಕ ಸಾಂಸ್ಕೃತಿಕ ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡಲೆ ಮಧ್ಯ ಪ್ರವೇಶಿಸಿ ಇಂತಹ ಪ್ರತಿಭಟನೆಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ ವಿಚಾರಗಳಿಗೆ ಅವಕಾಶ ನೀಡಬಾರದಂತೆ ಅವರು ಆಗ್ರಹಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago