Featured

ಗಣೇಶೋತ್ಸವಕ್ಕೆ ಹೇರಿರುವ ನಿರ್ಬಂಧ ಆದೇಶ ಹಿಂಪಡೆಯಲು ಆಗ್ರಹ,ತಪ್ಪಿದಲ್ಲಿ ಕಾಪು ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ !!

“ಗಣೇಶೋತ್ಸವಕ್ಕೆ ನಿರ್ಬಂಧ ಹಾಗೂ ನಿಷೇಧ, ಹಿಂದುಗಳ ಧಾರ್ಮಿಕ ಹಕ್ಕಿನ ಮೇಲೆ ದಬ್ಬಾಳಿಕೆ, ಇವುಗಳನ್ನು ಹಿಂದು ಸಮಾಜ ಸಹಿಸುವುದಿಲ್ಲ. ಆದೇಶವನ್ನು ಹಿಂಪಡೆಯಲು ಹಿಂದು ಜಾಗರಣ ವೇದಿಕೆ ಆಗ್ರಹ.”

ಕಾಪು : ರಾಜ್ಯ ಸರ್ಕಾರ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಷರತ್ತು ಹಾಗೂ ನಿಬಂಧನೆಗಳನ್ನು ಹೇರಿ ನಿರ್ಬಂಧಿಸುವ ಹಾಗೂ ನಿಷೇಧಿಸುವ ಯತ್ನಕ್ಕೆ ಮುಂದಾಗಿರುವ ಕ್ರಮವನ್ನು ಕರ್ನಾಟಕ ಹಿ೦ದು ಜಾಗರಣ ವೇದಿಕೆಯು ಬಲವಾಗಿ ಖಂಡಿಸುತ್ತದೆ. ಎಡಿಜಿಪಿ ಆದೇಶವನ್ನು ಹಿಂಪಡೆಯಬೇಕು.

ನೂರಾರು ವರ್ಷಗಳಿ೦ದ ಗಣೇಶೋತ್ಸವವು ಸಾರ್ವಜನಿಕ ರೂಪವನ್ನು ಪಡೆದು ನಿರಾತಂಕವಾಗಿ ನಡೆದುಕೊಂಡು ಬರುತ್ತಿದೆ.ಈ ಧಾರ್ಮಿಕ ಉತ್ಸವವನ್ನು ರಾಷ್ಟೀಯ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿದೆ. ಇದರ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಯೊಗ್ಯತೆ ಇಲ್ಲದ ಕೆಲವು ಹಿಂದು ವಿರೋಧಿ ಅಧಿಕಾರಶಾಹಿಗಳು, ಈ ಹಬ್ಬವನ್ನು ಹತ್ತಿಕ್ಕಲು ಇಲ್ಲಸಲ್ಲದಅಡಚಣೆಗಳನ್ನು ಹೇರುತ್ತಿದ್ದು ರಾಜ್ಯದ ಎಡಿಜಿಪಿಯವರು ಈ ರಾಷ್ಟ್ರೀಯ ಹಿಂದು ಹಬ್ಬದ ವೈಭವವನ್ನು ಹಾಳುಮಾಡಲು ಹೊರಟಿರುವುದು ಖಂಡನೀಯ. ಮೆರವಣಿಗೆಗೆ ನಿಷೇಧ. ನಿರ್ದಿಷ್ಠವಾಗಿ ಮಸೀದಿಯನ್ನು ಹೆಸರಿಸಿ ವಿಧಿಸಿರುವ ನಿರ್ಬಂಧಕಾನೂನು ಬಾಹಿರ ಹಾಗೂ ದುರುದ್ಧೇಶದಿ೦ದ ಕೂಡಿರುವುದಾಗಿದೆ. ಈ ಎಲ್ಲಾ ನಿರ್ಬಧಗಳನ್ನು ತಕ್ಷಣ ಹಿಂಪಡೆದುಸಾರ್ವಜನಿಕ ಶ್ರೀಗಣೇಶೋತ್ಸವದ ಮೆರವಣಿಗೆಗೆ ಮುಕ್ತ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ವೇದಿಕೆಯು ಆಗಹಿಸುತ್ತದೆ.

“ಹಿಂದು ಬಾಹುಳ್ಯ ಪ್ರದೇಶ ಹಾಗೂ ಮಂದಿರಗಳ ಎದುರಿನಲ್ಲಿ ಅಲ್ಪಸಂಖ್ಯಾತರಿಗೆ ನಿರ್ಬಂಧ ಸಾಧ್ಯವೇ?”

ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹಿಂದು ಧಾರ್ಮಿಕ ಹಬ್ಬಗಳ ಮೆರವಣಿಗೆಗಳು, ಉತ್ಸವಗಳು ಮಸೀದಿಗಳಎದುರಿನಲ್ಲಿ ಚಿಕ್ಕಪುಟ್ಟ ಗಲ್ಲಿಗಳಲ್ಲಿ, ಸೂಕ್ಷಾ ತಿಸೂಕ್ಷ್ಮ ಪ್ರದೇಶಗಳೆಂದು ಹೆಸರಿಸುವಲ್ಲಿ ನಿರಾತಂಕವಾಗಿ ನಡೆದುಕೊಂಡುಬರುತ್ತಿದೆ. ಗಲಭೆ ಗಲಾಟೆಗಳು ನಡೆಯಬೇಕು ಎನ್ನುವುದಾದರೆ ಇಂತಹ ಪ್ರದೇಶಗಳಲ್ಲಿಯೇ ನಡೆಯಬೇಕು ಎಂದೇನಿಲ್ಲ.ಕಿಡಿಗೇಡಿಗಳು ಎಲ್ಲಿ ಬೇಕಾದರೂ ಗಲಭೆಗಳನ್ನು ಎಬ್ಬಿಸಬಹುದು. ಇದನ್ನು ಅರ್ಥ ಮಾಡಿಕೊಳ್ಳದೆ ಮಸೀದಿ. ಮುಸ್ಲಿಂಬಾಹುಳ್ಯ ಪ್ರದೇಶಗಳು ಎ೦ದು ಹೆಸರಿಸಿ ಒಂದು ಕೋಮಿನ ವಿರುದ್ದ ಮತ್ತೊಂದು ಕೋಮುನ್ನು ಎತ್ತಿಕಟ್ಟುವ ಕೃತ್ಯಅಧಿಕಾರಿಗಳಿಂದ ನಡೆಯಬಾರದು. ಇಂತಹ ನಿರ್ಬಂಧಗಳು ನಾಳೆ ಮುಸ್ಲಿಂ ಮತ್ತು ಕ್ರೈಸ್ತರ ಧಾರ್ಮಿಕ ಉತ್ಸವ ಹಾಗೂಮೆರವಣಿಗೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವುದಕ್ಕೆ ಕಾರಣವಾದೀತು ಎ೦ದು *ವೇದಿಕೆ’ಯು ‘ಎಚ್ಚರಿಕೆಯನ್ನುನೀಡುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಇಂತಹ ಹುಚ್ಚು ತುಘ್ಲಕ್‌ ಆದೇಶಗಳು ಕರ್ನಾಟಕದಲ್ಲಿ ಜಾರಿಯಾಗದ೦ತೆ ಆ ಮೂಲಕ ಹಿಂದು ಸಮಾಜದ ವಿರೋಧವನ್ನು ಕಟ್ಟಿಕೊಳ್ಳದಂತೆ ಎಚ್ಚರವಹಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಚರಣೆಗೆವಿಧಿಸುತ್ತಿರುವ ನಿಬಂಧನೆಗಳು, ಷರತ್ತುಗಳನ್ನು. ಹಿಂಪಡೆದು ಹಿಂದುಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕೆಂದು“ವೇದಿಕೆಯು ಆಗಹಿಸುತ್ತದೆ.

ಸರ್ಕಾರದ ಈ ಅನಾವಶ್ಯಕ ಹಿ೦ದು ವಿರೋಧಿ ಆದೇಶವನ್ನು ಮುಂದುವರಿಸಿದಲ್ಲಿ ಹಿಂದು ಜಾಗರಣ ವೇದಿಕೆ ಕಾಪು ತಾಲೂಕುವತಿಯಿಂದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಕಾಪು ತಾಲೂಕು ಅಧ್ಯಕ್ಷರಾದ ರಾಜೇಶ್‌ ಉಚ್ಚಿಲ, ಕಾಪು ತಾಲೂಕು ಕಾರ್ಯದರ್ಶಿ ಯುವರಾಜ್‌ ಕುಲಾಲ್‌,   ಪಡುಬಿದ್ರಿ ವಲಯ ಅಧ್ಯಕ್ಷರಾದ  ಪ್ರತೀಕ್‌ ಕೋಟ್ಯಾನ್‌, ಹಾಗೂ ಪಡುಬಿದ್ರಿ ವಲಯ ಉಪಾಧ್ಯಕ್ಷರಾದ  ಸುಹಾಸ್‌ ಶೆಟ್ಟಿ ನಟವರ್ಯ ತಿಳಿಸಿದರು.

 

 

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago