ಮಂಗಳೂರು/ಉಡುಪಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕರಾವಳಿಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮುಂಬಯಿ ಸೆಂಟ್ರಲ್-ತೋಕೂರ್-ಮುಂಬಯಿ ಸೆಂಟ್ರಲ್ (ಸಾಪ್ತಾಹಿಕ) ವಿಶೇಷ ಸಂಚಾರಕ್ಕೆ ಕೊಂಕಣ ರೈಲ್ವೇ ನಿರ್ಧರಿಸಿದೆ.
ರೈಲು ಸಂಖ್ಯೆ 09011 ಮುಂಬಯಿ ಸೆಂಟ್ರಲ್-ತೋಕೂರ್ ಸಾಪ್ತಾಹಿಕ ವಿಶೇಷ ರೈಲು ಆ. 26 ಮತ್ತು ಸೆ. 2ರ ಬೆಳಗ್ಗೆ 11.30ಕ್ಕೆ ಮುಂಬಯಿ ಸೆಂಟ್ರಲ್‌ನಿಂದ ಹೊರಡಲಿದೆ. ರೈಲು ಸಂಖ್ಯೆ 09012 ತೋಕೂರ್-ಮುಂಬಯಿ ಸೆಂಟ್ರಲ್ ಸಾಪ್ತಾಹಿಕ ವಿಶೇಷ ರೈಲು ಆ. 27 ಮತ್ತು ಸೆ. 3ರಂದು ಬೆಳಗ್ಗೆ 11 ಗಂಟೆಗೆ ತೋಕೂರಿನಿಂದ ಹೊರಡಲಿದೆ. ಒಟ್ಟು 24 ಕೋಚ್‌ಗಳಲ್ಲಿ 2 ಹಾಗೂ 3 ಟೈಯರ್ ಎಸಿಯ ತಲಾ 1 ಕೋಚ್, 16 ಸ್ಲೀಪರ್, 4 ಸಾಮಾನ್ಯ ಕೋಚ್ ಮತ್ತು 2 ಎಸ್‌ಎಲ್‌ಆರ್ ಕೋಚ್‌ಗಳಿರಲಿವೆ.
ಈ ರೈಲು ಬೋರಿವಲಿ, ವಸಾಯಿ ರಸ್ತೆ, ಭಿವಂಡಿ ರಸ್ತೆ, ಪನ್ವೇಲ್, ಪೆನ್, ರೋಹಾ, ಮಂಗಾಂವ್, ವೀರ್, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಾಗಿರಿ, ರಾಜಾಪುರ ರಸ್ತೆ, ವೈಭವವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಂ, ಕರ್ಮಾಲಿ, ಮಡ್ಗಾಂವ್, ಕಾರವಾರ, ಗೋಕಣ ರಸ್ತೆ, ಕುಮಟಾ, ಮುರುಡೇಶ್ವರ, ಮೂಕಾಂಬಿಕಾ ರಸ್ತೆ (ಬೈಂದೂರು), ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್ ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ಪ್ರಕಟನೆ ತಿಳಿಸಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…