Featured

ಗಣೇಶ ಹಬ್ಬದಂದು ಚಂದ್ರನ ನೋಡಬಾರದು ಯಾಕೆ?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಒಂದೊಂದು ಹಬ್ಬಗಳ ಹಿಂದೆಯೂ ಅದರದ್ದೇ ಆದ ಕಥೆಗಳಿವೆ. ಅಂತೆಯೇ ಗಣೇಶ ಹಬ್ಬಕ್ಕೂ ರೋಚಕ ಕಥೆಯಿದೆ. ಈ ದಿನದಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ.

ಸಾಮಾನ್ಯವಾಗಿ ಚಂದ್ರನನ್ನು ಪ್ರತಿ ದಿನ ನಾವು ಗಮನಿಸುವುದಿಲ್ಲ. ಆದ್ರೆ ಭಾದ್ರಪದ ಶುಕ್ಲದ ಚೌತಿಯ ದಿನದಂದು ಮಾತ್ರ ನೋಡಬಾರದೆನಿಸಿದರೂ, ಆಕಸ್ಮಿಕವಾಗಿ ಚಂದ್ರನನ್ನು ನೋಡಿಯೇ ಬಿಡುತ್ತೇವೆ. ಅಂದು ಚಂದ್ರನನ್ನು ನೋಡಿದವರಿಗೆ ಅಪವಾದ ಬರುತ್ತದೆ. ಆದ್ರೆ ಕೃಷ್ಣ ಪಕ್ಷದ ಚೌತಿಯ ಚಂದ್ರನನ್ನು ನೋಡಿದರೆ ಆ ಅಪವಾದ ದೂರವಾಗುತ್ತದೆ ಎಂಬ ನಂಬಿಕೆ ಇಂದಿಗೂ ಕೆಲವೆಡೆ ಚಾಲ್ತಿಯಲ್ಲಿದೆ.

ಚಂದ್ರನನ್ನು ಯಾಕೆ ನೋಡಬಾರದು?:
ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂದಿರುಗುತ್ತಾನೆ. ಗಣಪತಿ ತನ್ನ ವಾಹನವಾದ ಇಲಿಯ ಮೇಲೆ ಕುಳಿತುಕೊಂಡು ಚಂದ್ರಲೋಕಕ್ಕೆ ಬಂದನು. ಈ ವೇಳೆ ಚಂದ್ರನು ಗಣೇಶನನ್ನು ನೋಡುತ್ತಾನೆ. ಸರ್ವಾಂಗ ಸುಂದರನಾಗಿರುವ ಚಂದ್ರ, ಗಣಪತಿಯ ಆನೆ ಮುಖು, ಡೊಳ್ಳುಹೊಟ್ಟೆ ಮತ್ತು ವಾಹನ ಇಲಿಯನ್ನು ನೋಡಿ ಹಾಸ್ಯ ಮಾಡಿ ನಕ್ಕು ಬಿಡುತ್ತಾನೆ. ಇದನ್ನು ಕಂಡ ಗಣಪತಿಗೆ ಸಿಟ್ಟು ನೆತ್ತಿಗೇರುತ್ತೆ.

ಅಲ್ಲದೇ `ಎಲೈ ಚಂದ್ರನೇ ನಿನಗೆ ನಿನ್ನ ಸೌಂದರ್ಯದ ಮದ ಹೆಚ್ಚಾಗಿದೆ. ಎಲ್ಲ ಲೋಕಗಳಲ್ಲೂ ಪೂಜಿಸುತ್ತಿರುವ ನನ್ನನ್ನು ನೀನು ಮಾತ್ರ ಹಾಸ್ಯ ಮಾಡಿ ನಗುತ್ತಿರುವೆಯಾ? ಮೂರ್ಖ.. ಇದೋ.. ನಿನ್ನ ಅಹಂಕಾರಕ್ಕೆ ತಕ್ಕ ಪ್ರತಿಫಲ ಅನುಭವಿಸು.. ನಿನ್ನ ಅಹಂಕಾರಕ್ಕೂ ಅಜ್ಞಾನಕ್ಕೂ ಕಾರಣವಾಗಿರುವ ನಿನ್ನ ಸೌಂದರ್ಯ ಕುಗ್ಗಿ ಹೋಗಲಿ. ಇನ್ನು ಮುಂದೆ ನನ್ನ ಹುಟ್ಟಿದ ದಿನವಾದ ಭಾದ್ರಪದ ಚೌತಿಯಂದು ನಿನ್ನನ್ನು ನೋಡುವವರು ಸುಳ್ಳು ಅಪವಾದಾಕ್ಕೆ ಗುರಿಯಾಗಲಿ’ ಅಂತ ಗಣಪತಿ ಚಂದ್ರನಿಗೆ ಶಾಪ ಹಾಕುತ್ತಾನೆ.

 

ಗಣಪತಿಯ ಶಾಪದಿಂದ ಚಂದ್ರನ ಅಹಂಕಾರವೆಲ್ಲ ಕೆಲವೇ ಕ್ಷಣಗಳಲ್ಲಿ ಇಳಿದು ಹೋಯಿತು. ತನ್ನ ತಪ್ಪಿನ ಅರಿವಾಗಿ ಪಶ್ಚತ್ತಾಪ ಪಡುತ್ತಾ ಗಣಪತಿ ಮುಂದೆ ಕೈ ಮುಗಿದು ಕ್ಷಮೆ ಕೇಳುತ್ತಾನೆ. `ಸ್ವಾಮಿ ನನ್ನ ಅಜ್ಞಾನವನ್ನು ಮನ್ನಿಸು. ನನಗೆ ಕೊಟ್ಟ ಶಾಪವನನ್ನು ವಾಪಸ್ ತೆಗೆದುಕೊ’ ಅಂತ ಗಣಪತಿ ಮುಂದೆ ಚಂದ್ರ ಅಂಗಲಾಚಿಕೊಳ್ಳುತ್ತಾನೆ.

ಚಂದ್ರನ ಮೊರೆಗೆ ಗಣಪತಿ ಮನಸ್ಸು ಕರಗಿ ಶಾಂತನಾಗುತ್ತಾನೆ. ಹೀಗಾಗಿ ಚಂದ್ರನನ್ನು ಸಂತೈಸಿ `ನಿನಗೆ ನಿನ್ನ ತಪ್ಪಿನ ಅರಿವಾಗಿದೆ. ನಿನ್ನ ಅಹಂಕಾರ ಇಳಿಸುವುದೇ ನನಗೆ ಮುಖ್ಯವಾಗಿತ್ತು. ಆದ್ರೆ ಈವಾಗ ಏನ್ ಮಾಡಿದ್ರೂ ನನ್ನ ಶಾಪ ಯಾವತ್ತಿಗೂ ಸುಳ್ಳಾಗದು. ಆದ್ರೆ ಚೌತಿಯಂದು ನಿನ್ನನ್ನು ನೋಡಿ ಅಪವಾದಕ್ಕೆ ಗುರಿಯಾದವರು ಇತರ ತಿಂಗಳುಗಳ ಕೃಷ್ಣಪಕ್ಷದ ಚತುರ್ಥಿಯಂದು ನಿನ್ನನ್ನು ನೋಡಿದ ನಂತರವೇ ಎಲ್ಲರೂ ಊಟಮಾಡಲಿ. ಸಂಕಷ್ಟ ಚತುರ್ಥಿಯಂದು ನಿನ್ನ ದರ್ಶನವಾಗದೆ ಯಾರೂ ಭೋಜನವನ್ನು ಸ್ವೀಕರಿಸುವುದಿಲ್ಲ’ ಅಂತ ಗಣಪತಿ ಹೇಳುತ್ತಾನೆ. ಗಣಪತಿಯ ಮಾತು ಕೇಳಿ ಚಂದ್ರ ಸಂತಸ ವ್ಯಕ್ತಪಡುತ್ತಾನೆ.

ಈ ಕಾರಣದಿಂದ ಚೌತಿಯಂದು ಚಂದ್ರನನ್ನು ನೋಡಬಾರದು ಅಂತ ಹಿರಿಯರು ಹೇಳುತ್ತಾರೆ. ಈ ನಂಬಿಕೆ ಇಂದಿಗೂ ಕೆಲವು ಕಡೆಗಳಲ್ಲಿ ಇದ್ದು, ರಾತ್ರಿಯಾಗುತ್ತಿದ್ದಂತೆಯೇ ಹೊರಗಡೆ ತೆರಳುವ ತಮ್ಮ ಮಕ್ಕಳಿಗೆ ಹಿರಿಯರು ತಪ್ಪಿಯೂ ಇಂದು ಆಕಾಶ ನೋಡಬೇಡ ಅಂತ ಹೇಳುತ್ತಾರೆ. ಒಟ್ಟಿನಲ್ಲಿ ದೇಶದಾದ್ಯಂತ ಗಣೇಶ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಬೆಳ್ಳಿ ಅಥವಾ ಮಣ್ಣನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವೃತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಮೊದಲಾದ ಸಿಹಿತಿಂಡಿ ಮಾಡಿ ಗಣಪತಿಗೆ ನೈವೇದ್ಯ ಮಾಡಲಾಗುತ್ತದೆ. ಅಲ್ಲದೇ ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.

 

ಜಾಹಿರಾತು : ಪಂಡಿತ್ ಸುದರ್ಶನ್ ಭಟ್: 9663542672

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

2 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago