ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಭಕ್ತಿಯನ್ನು ಬೆಳೆಸುವ ಉದ್ದೇಶದಿಂದ ಗುಜರಾತ್ ಶಾಲೆಯಲ್ಲಿ ಹಾಜರಾತಿ ವೇಳೆ ಮಕ್ಕಳು ಜೈಹಿಂದ್, ಜೈಭಾರತ್ ಹೇಳುತ್ತಾರೆ
ಅಹ್ಮದಾಬಾದ್ : ಗುಜರಾತ್ ಶಾಲಾ ಮಕ್ಕಳು ಇಂದು ಜನವರಿ 1 ರಿಂದ ತರಗತಿ ಶಿಕ್ಷಕರು ಹಾಜರಿ ಕರೆಯುವಾಗ ‘ಪ್ರಸೆಂಟ್ ‘ ಎನ್ನುವಂತಿಲ್ಲ. ಅವರು ‘ಜೈಹಿಂದ್’ ಅಥವಾ ‘ಜೈ ಭಾರತ್’ ಎನ್ನಬೇಕಾಗುತ್ತದೆ.
ಗುಜರಾತಿನ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣದ ನಿರ್ದೇಶನಾಲಯ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಆ ಪ್ರಕಾರ 1ರಿಂದ 12ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಇಂದಿನಿಂದ ತರಗತಿಯಲ್ಲಿ ಹಾಜರಿ ಕರೆಯುವಾಗ ಜೈಹಿಂದ್ ಅಥವಾ ಜೈ ಭಾರತ್ ಎಂದು ಹೇಳುತ್ತಾರೆ.
ಗುಜರಾತಿನ ಅನುದಾನಿತ ಶಾಲೆಗಳು, ಸ್ವಂತ ಹಣಕಾಸಿನ ಶಾಲೆಗಳು ಕೂಡ ಸರಕಾರದ ಈ ಅಧಿಸೂಚನೆಯಂತೆ ನಡೆದುಕೊಳ್ಳಬೇಕಾಗಿದೆ.
ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಹೈಸ್ಕೂಲ್ ಗಳಲ್ಲಿ ಈ ಹೊಸ ಪದ್ಧತಿಯನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರುವಂತೆ ಶಿಕ್ಷಕರಿಗೆ, ಶಿಕ್ಷಣಾಧಿಕಾರಿಗಳು ಆದೇಶಿಸಲಾಗಿದೆ.
ಸೋಮವಾರ ನಡೆದ ಸಭೆಯಲ್ಲಿ ಗುಜರಾತ್ ಶಿಕ್ಷಣ ಸಚಿವ ಭೂಪೇಂದ್ರಸಿನ್ ಚುದಾಸಮ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಭಕ್ತಿಯನ್ನು ಬೆಳೆಸಲೆಂದು ಈ ಕ್ರಮವನ್ನು ಪರಿಚಯಿಸಲಾಗಿದೆ.
ನೂತನ ಅಧಿಸೂಚನೆಯನ್ನು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಜ. 1ರಿಂದಲೇ ಜಾರಿಗೆ ಬರುವಂತೆ ನೋಡಿಕೊಳ್ಳಲು ತಿಳಿಸಲಾಗಿದೆ.
ಉಡುಪಿ: ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ ಉಡುಪಿ: ಆದಿಉಡುಪಿಯ ಮಧ್ವನಗರದ ರಿಕ್ಷಾ ಚಾಲಕ ತನ್ನ ಮನೆಯಲ್ಲಿ ನೇಣು ಬಿಗಿದು…
ಕೊಂಕಣ ರೈಲ್ವೆಯಲ್ಲಿ ಕಳ್ಳರ ಜಾಲ : ಮತ್ಸ್ಯಗಂಧ, ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಸರಣಿ ಕಳ್ಳತನ ಹಾಗೂ ದರೋಡೆ ಪ್ರಕರಣ ಉಡುಪಿ: ಮಂಗಳೂರಿನಿಂದ…
ಆಳ್ವಾಸ್ ಪ್ರಗತಿ - 2026 : ಆ.7 ಮತ್ತು 8ರಂದು ಬೃಹತ್ ಉದ್ಯೋಗ ಮೇಳ ಉಡುಪಿ: ದೇಶದ ಯುವಜನರ ಉದ್ಯೋಗ…
ಯುವಕರ ಭವಿಷ್ಯಕ್ಕೆ ಅತಿ ಹೆಚ್ಚು ಹಾನಿ ಮಾಡಿರುವುದು ಪ್ರಧಾನಿ ಮೋದಿ : ರಾಹುಲ್ ಗಾಂಧಿ ಆರೋಪ ಹೊಸದಿಲ್ಲಿ: ಪ್ರಶ್ನೆಪತ್ರಿಕೆ ಸೋರಿಕೆ…
ಪಡುಬಿದ್ರಿ: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಮಾರಾಟ : ಆರೋಪಿ ಅರೆಸ್ಟ್ ಪಡುಬಿದ್ರಿ: ಪಾನ್ ಸ್ಟಾಲ್ ಅಂಗಡಿಯಲ್ಲೇ ಅಕ್ರಮವಾಗಿ ಗಾಂಜಾ ಮಾರಾಟ…
ಸುಳ್ಯ : ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣ ; ಅತ್ತೆ, ಮಾವ, ನಾದಿನಿ ಬಂಧನ ಸುಳ್ಯ : ಕೌಟುಂಬಿಕ…