ಮಥುರಾ: ಹಸುವಿನ ಮೂತ್ರ, ಸಗಣಿಯಿಂದ ತಯಾರಿಸಿದ ಸೋಪು, ಫೇಸ್ಪ್ಯಾಕ್, ಶಾಂಪೂ ಹಾಗೂ ಔಷಧೀಯ ವಸ್ತುಗಳನ್ನು ಶೀಘ್ರವೇ ಅಮೆಜಾನ್ನಲ್ಲಿ ಸಿಗಲಿದೆ ಎಂದು ಆರ್ಎಸ್ಎಸ್ ಬೆಂಬಲಿತ ಕೇಂದ್ರವೊಂದು ತಿಳಿಸಿದೆ.
ಮಥುರಾದ ಫರಾಹ್ ಪಟ್ಟಣದಲ್ಲಿ ಆರ್ಎಸ್ಎಸ್ನಿಂದ ನಡೆಸಲಾಗುತ್ತಿರುವ ದೀನ್ ದಯಾಳ್ ದಾಮ ಕೇಂದ್ರ ಗೋಮೂತ್ರ, ಸಗಣಿಯಿಂದ ತಯಾರಿಸಲಾದ ಉತ್ಪನ್ನಗಳು, ವಿವಿಧ ತರಹದ ಬಟ್ಟೆಗಳನ್ನು ಬೇರೆ ವೆಬ್ಸೈಟ್ ಮೂಲಕ ಮಾರಾಟ ಮಾಡುತ್ತಿತ್ತು.
ನಾವು ಅಮೇಜಾನ್ ಸಂಸ್ಥೆಯೊಂದಿಗೆ ಕೆಲವು ದಿನಗಳ ಹಿಂದೆ ಚರ್ಚೆ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ನಮ್ಮ ಉತ್ಪನ್ನಗಳು ಅಮೆಜಾನ್ ಆನ್ಲೈನ್ ಸಂಸ್ಥೆಯಲ್ಲಿ ಸಿಗಲಿದೆ. ಜನರು ಅದನ್ನು ಸುಲಭವಾಗಿ ಪಡೆಯಬಹುದು ಎಂದು ಮ್ಯಾನೇಜರ್ ಘನಾಶ್ಯಾಮ್ ಗುಪ್ತಾ ತಿಳಿಸಿದ್ದಾರೆ. ಯಾವಾಗ ನಮ್ಮ ಕೇಂದ್ರದ ಉತ್ಪನ್ನಗಳ ಮಾರಾಟ ಶುರುವಾಗುತ್ತದೆ ಎಂಬುದನ್ನು ಅಮೆಜಾನ್ನವರು ತಿಳಿಸುತ್ತಾರೆ ಎಂದಿದ್ದಾರೆ.
ಗುಪ್ತಾ ಅವರು 20 ವರ್ಷಗಳಿಂದ ದೀನ್ ದಯಾಳ್ ಧಾಮದಲ್ಲಿ ಇದ್ದಾರೆ. ಇಲ್ಲಿನ ಸುತ್ತಮುತ್ತಲ ಹಳ್ಳಿಗಳ ಮಹಿಳೆಯರು ಧಾಮದಲ್ಲಿ ಕೆಲಸ ಮಾಡುತ್ತಾರೆ. ಹಾಗೇ ಇಲ್ಲಿ ದೀನ ದಯಾಳ್ ಕಾಮಧೇನು ಗೋಶಾಲಾ ಫಾರ್ಮಸಿಯೂ ಇದೆ. ವೈರಲ್ ಫಿವರ್ , ರೋಗನಿರೋಧಕ ಶಕ್ತಿ ಹೆಚ್ಚಿಸುವ, ಪಂಚಗವ್ಯ ಚೂರ್ಣ, ಚ್ಯವನಪ್ರಾಶ ಮತ್ತಿತರ ಔಷಧಗಳು ಇಲ್ಲಿ ಸಿಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…