ರಾಜಸ್ಥಾನ : ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತ ಪಡಿಸಿದನ್ನು ಅಖಿಲ ಭಾರತೀಯ ಅಖಾರ ಪರಿಷತ್ (ಎ ಬಿ ಎ ಪಿ )ನ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗಿರಿ, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ಹೇಳಿರುವುದು ಸೂಕ್ತವಾಗಿದೆ. ಕೇಂದ್ರ ಸರ್ಕಾರ ಈ ಸಂಬಂಧಿ ಕಾನೂನನ್ನು ಅತಿ ಶೀಘ್ರದಲ್ಲಿ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಕೇಂದ್ರ ಸರ್ಕಾರವು ಕಾನೂನನ್ನು ರೂಪಿಸಲು, ಸಂಸತ್ತಿನಲ್ಲಿ ಈ ವಿಚಾರದ ಕುರಿತು ಮಂಡಿಸಲು ಮತ್ತು ಇದನ್ನು ಅಂಗೀಕರಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ಸಂಬಂಧಿಸಂದೆ ಕೇಂದ್ರ ಸರ್ಕಾರ ಒಂದು ಕಾನೂನನ್ನು ಜಾರಿಗೊಳಿಸುವುದರಿಂದ ಹಾಗೂ ಹಸುಗಳು ರಾಷ್ಟ್ರೀಯ ಪ್ರಾಣಿಯಾದಾಗ ಜನರು ಗೋವುಗಳ ಮೇಲೆ ಹೆಚ್ಚು ಗೌರವ ಹಾಗೂ ಭಕ್ತಿ ಭಾವ ಬರುತ್ತದೆ” ಎಂದು ಅವರು ಹೇಳಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಗೋವು ಪ್ರಮುಖವಾದ ಭಾಗವಾಗಿದೆ ಎಂದು ತಿಳಿಸಿರುವ ಅಲಹಬಾದ್ ಹೈಕೋರ್ಟ್ ಪೀಠ, ಗೋ ಮಾಂಸ ಭಕ್ಷಣೆ ಮಾಡುವವರಿಗಷ್ಟೇ ಅದು ಮೂಲಭೂತ ಹಕ್ಕಲ್ಲ. ಆದರೆ ಗೋವುಗಳನ್ನು ಯಾರು ಪೂಜಿಸುತ್ತಾರೋ ಹಾಗೂ ಗೋವಿನ ಮೇಲೆ ಆರ್ಥಿಕವಾಗಿ ಅವಲಂಬಿತ ರಾಗಿರುವವರ ಮೂಲಭೂತ ಹಕ್ಕಾಗಿದೆ ಎಂದು ಅಲಹಾಬಾದ್ ಹೈ ಕೋರ್ಟ್ ಹೇಳಿರುವುದಕ್ಕೆ ಗಿರಿ ಸಂತೋಷ ವ್ಯಕ್ತ ಪಡಿಸಿದ್ದಲ್ಲದೇ, ಗೋವು ಕೇವಲ ಪ್ರಾಣಿ ಮಾತ್ರವಲ್ಲ. ಗೋವು ನಮ್ಮ ಮಾತೆ. ಹಸುಗಳನ್ನು ಪೂಜಿಸುವುದು ಮತ್ತು ಅವುಗಳ ಸೇವೆ ಮಾಡುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.
ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…
ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…
ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…
ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್ ಕುಮಾರ್ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…
ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…
ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…