ಪಣಜಿ : ನಿನ್ನೆ ಪಂಜಾಬ್ ವಿಧಾನಸಭೆಯ ಸಿಎಂ ಅಭ್ಯರ್ಥಿಯನ್ನ ಘೋಷಿಸಿದ್ದ ಆಮ್ ಆದ್ಮಿ ಪಾರ್ಟಿ ಇಂದು ಗೋವಾ ಚುನಾವಣೆಗೆ ಸಿಎಂ ಅಭ್ಯರ್ಥಿಯನ್ನ ಘೋಷಿಸಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಆಪ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಅಮಿತ್ ಪಾಲೇಕರ್ ಗೋವಾ ರಾಜ್ಯದ ಸಿಎಂ ಅಭ್ಯರ್ಥಿ ಎಂದು ಅರವಿಂದ್ ಕೇಜ್ರಿವಾಲ್ ಪಣಜಿಯಲ್ಲಿ ತಿಳಿಸಿದ್ದಾರೆ.
ಎಎಪಿ ಈ ಬಾರಿ ಗೋವಾದ ಎಲ್ಲಾ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಭಂಡಾರಿ ಸಮುದಾಯದ ಅಮಿತ್ ಸೆಂಟ್ ಕ್ರಜ಼್ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲಿದ್ದಾರೆ.
ಅಮಿತ್ ಪಾಲೇಕರ್ ಅವರು, ಇತ್ತೀಚೆಗಷ್ಟೇ ಹಳೆ ಗೋವಾದ ಯುನೆಸ್ಕೊ ಸಂರಕ್ಷಿತ ನಿವೇಶನದಲ್ಲಿ ನಿರ್ಮಿಸಿರುವ ಶೈನಾ ಎನ್‌ಸಿ ಅಕ್ರಮ ಬಂಗಲೆ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಬಂಡಾರಿ ಸಮುದಾಯದವರನ್ನ (ಒಬಿಸಿ ಸಮುದಾಯ) ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವುದಾಗಿ ಇತ್ತೀಚೆಗೆ ಆಪ್ ನಾಯಕರು ಭರವಸೆ ನೀಡಿದ್ದರು. ಪಾಲೇಕರ್ ಅವರ ಹೆಸರನ್ನು ಘೋಷಿಸುವ ಮೊದಲು, ಗೋವಾ ರಾಜ್ಯಕ್ಕೆ ಆಪ್ ಪಕ್ಷವು ಪ್ರಾಮಾಣಿಕ ವ್ಯಕ್ತಿಯನ್ನ ಆಯ್ಕೆ ಮಾಡಿದೆ. ಸಮುದಾಯದ ಕಲ್ಯಾಣ ಕಾರ್ಯಗಳಿಗೆ ಹೆಸರು ವಾಸಿಯಾದ ವ್ಯಕ್ತಿ ಅಮಿತ್. ಗೋವಾದ ಜನಸಂಖ್ಯೆಯಲ್ಲಿ ಭಂಡಾರಿ ಸಮುದಾಯವು ಶೇಕಡ 35% ಇದೆ. ಆದರೆ ರವಿನಾಯಕ್ ಬಿಟ್ಟರೆ ಇದುವರೆಗೂ ಯಾರೂ ಸಿಎಂ ಆಗಿಲ್ಲ. ನಾವು ಜಾತಿ ರಾಜಕಾರಣ ಮಾಡುತ್ತಿಲ್ಲ, ಇತರ ಪಕ್ಷಗಳು ಸಮುದಾಯದ ವಿರುದ್ಧ ರಾಜಕೀಯ ಮಾಡಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…