ಬೆಂಗಳೂರು : ರಾಜ್ಯ ಸರಕಾರ ತಂದಿರುವ ಗೋಹತ್ಯೆ ನಿಷೇಧ ಮಸೂದೆಯಿಂದ ಅದನ್ನೇ ನಂಬಿಕೊಂಡಿರುವ ಕುಟುಂಬಗಳು ಬೀದಿಗೆ ಬಿಳಲಿವೆ ಅಲ್ಲದೆ ಚರ್ಮೋದ್ಯಮದಲ್ಲಿ ಇರುವಂತಹ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡು ನಿರುದ್ಯೋಗಿಗಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಕಾಯ್ದೆಯ ವಿರುದ್ಧ ಕಿಡಿಕಾರಿದ್ದಾರೆ.
ಗೋಹತ್ಯೆ ನಿಷೇಧ ಕುರಿತು ಮಾತನಾಡಿದ ಅವರು ಈಗಾಗಲೇ ಗೋಹತ್ಯೆ ನಿಷೇಧ ವಿಧೇಯಕ್ಕೆ ಈಗಾಗಲೇ ಹಲವು ತಿದ್ದುಪಡಿ ತಂದಿದ್ದಾರೆ. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಈಗಾಗಲೇ ಕಾನೂನುಗಳಿವೆಯಾವ ಪ್ರಾಣಿಗಳನ್ನು ವಧೆ ಮಾಡಬಹುದು ಅಂತ 1964 ರ ಗೋಹತ್ಯೆ ನಿಷೇಧ ವಿಧೇಯಕದಲ್ಲಿ ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ಗೋಶಾಲೆಗಳಿವೆ, ಇಷ್ಟು ದೊಡ್ಡ ಸಂಖ್ಯೆಯ ರಾಸುಗಳಿಗೆ ವಯಸ್ಸಾದರೆ, ರೋಗ ಬಂದರೆ, ಗಂಡು ಕರು ಹುಟ್ಟಿದರೆ ಏನು ಮಾಡಬೇಕು..?ಈ ಹಸುಗಳನ್ನು ಸಾಕಲು ಸರ್ಕಾರ ರೈತರಿಗೆ ಏನು ಕೊಡುತ್ತದೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಎಂಟು ಲಕ್ಷ ಪರಿಶಿಷ್ಟ ಜಾತಿಯ ಜನ ಪ್ರಾಣಿಗಳ ಚರ್ಮ ಸುಲಿಯುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಅಲ್ಲದೆ ಅದರಿಂದಲೇ ಬದುಕುತ್ತಿದ್ದಾರೆ ಇನ್ನು ಮುಂದೆ ಅವರ ಬದುಕಿನ ದಾರಿ ಹೇಗೆ ಎಂದರು.
ಮೋದಿ ಸರ್ಕಾರ ಬಂದ ಮೇಲೆ ಮಾಂಸದ ರಫ್ತು ಹೆಚ್ಚಾಗಿದೆ ಎಂದಿದ್ದಾರೆ ಆದರೆ ನೀವು ಅದನ್ನು ನಿಯಂತ್ರಣ ಮಾಡಿದ್ದೀರಾ..?
ದೇಶದಲ್ಲಿ ಹೆಚ್ಚಿನ ಜನ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ, ಅಲ್ಲದೆ ನಮ್ಮ ದೇಶ ಚರ್ಮೋದ್ಯಮದಲ್ಲಿ ಎರಡನೇ ಸ್ಥಾನದಲ್ಲಿದೆ, ಆ ಇಂಡಸ್ಟ್ರಿ ಮೇಲೆ ಬಹಳಷ್ಟು ಜನ ಅವಲಂಬಿತರಾಗಿದ್ದಾರೆ, ಈಗ ಈ ಉದ್ಯಮ ನಿಂತು ಹೋದರೆ ಚರ್ಮದ ಉದ್ಯಮದಿಂದ 5.5 ಬಿಲಿಯನ್ ಡಾಲರ್ ಆದಾಯ ದೇಶಕ್ಕೆ ನಷ್ಟವಾಗಲಿದೆ ಎಂದು ಗುಡುಗಿದರು.
ನಿರುದ್ಯೋಗ ದೇಶದಲ್ಲಿ ಹೆಚ್ಚಾಗುತ್ತೆಇಡೀ ದೇಶಕ್ಕೇ ಅನ್ವಯವಾಗುವಂತಹ ಒಂದು ಪಾಲಿಸಿ ತಯಾರು ಮಾಡಿ, ಅದಕ್ಕಾಗಿ ಕೇಂದ್ರದ ಸರ್ಕಾರವೇ ಒಂದು ತಜ್ಞರ ಸಮಿತಿ ರಚಿಸಲಿ ಆ ವರದಿಯನ್ನು ಜನರ ಮುಂದಿಡಲಿ ಜೊತೆಗೆ ಆ ವಿಷಯದ ಬಗ್ಗೆ ಚರ್ಚೆ ಆಗಲೀ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು. ಅನುತ್ಪಾದಕ ಹಸುಗಳನ್ನು ಸರ್ಕಾರವೇ ಕೊಂಡುಕೊಳ್ಳಲಿ ರೈತರ ಮೇಲೆ ಯಾಕೆ ಹೊರೆ ಹಾಕುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…