ಬೆಂಗಳೂರು, : “ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ ಆರ್‌ಎಸ್‌ಎಸ್‌ನ ಹುನ್ನಾರ. ಯಾಂತ್ರೀಕೃತ ಕೃಷಿ ಅನಿವಾರ್ಯವಾಗಿರುವ ಕಾಲದಲ್ಲಿ ಪಶು ಸಂಗೋಪನೆ ರೈತರ ಪಾಲಿನ ಹೊರೆ” ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ ಆರ್‌ಎಸ್‌ಎಸ್‌ನ ಹುನ್ನಾರ. ಯಾಂತ್ರೀಕೃತ ಕೃಷಿ ಅನಿವಾರ್ಯವಾಗಿರುವ ಕಾಲದಲ್ಲಿ ಪಶು ಸಂಗೋಪನೆ ರೈತರ ಪಾಲಿನ ಹೊರೆ. ಇಂದು ದೇಶದಲ್ಲಿ ನಾಟಿ ದನಗಳನ್ನು ಸಾಕುವ ರೈತರೆಷ್ಟಿದ್ದಾರೆ?. ಹೊಸ ಕಾಯ್ದೆ ಪ್ರಕಾರ ಹಾಲಿಗಾಗಿ, ಉಳುಮೆಗಾಗಿ ಗೋಸಾಗಾಣಿಕೆ ಮಾಡಬೇಕೆಂದರೂ ಅನುಮತಿ ಬೇಕು. ಹೀಗಿರುವಾಗ ರೈತ ಗೋವು ಸಾಕುವುದ್ದೇಗೆ?” ಎಂದು ಪ್ರಶ್ನಿಸಿದ್ದಾರೆ.
“ಗೋ ಹತ್ಯೆ ನಿಷೇಧ ಕಾನೂನಿನಿಂದ ಬಿಡಾಡಿ ದನಗಳ ಸಂಖ್ಯೆ ಜಾಸ್ತಿಯಾಗಲಿವೆ. ಉ.ಪ್ರ.ದಲ್ಲಿ ರೈತರು ಹಸು ಸಾಕುವುದನ್ನು ನಿಲ್ಲಿಸಿದರಿಂದ 6 ವರ್ಷದಲ್ಲಿ 10 ಲಕ್ಷ ಗೋವುಗಳ ಸಂಖ್ಯೆ ಕಡಿಮೆಯಾಗಿದೆ. ವಿಪರ್ಯಾಸವೆಂದರೆ ಇದೇ ಅವಧಿಯಲ್ಲಿ 25ಸಾವಿರ ಕೋಟಿ ಗೋ ಮಾಂಸ ರಫ್ತಾಗಿದೆ. ಗೋ ಹತ್ಯೆ ತಡೆಯುವುದಾದರೆ ಗೋ ಮಾಂಸ ರಫ್ತಿಗೂ ನಿಷೇಧ ಹೇರಬೇಕಲ್ಲವೆ?” ಎಂದು ಕೇಳಿದ್ದಾರೆ.
“ಬಿಜೆಪಿ ಸರ್ಕಾರ ರೈತರಿಗೆ ಮಾರಕ ಕಾಯ್ದೆಗಳ ಮೂಲಕ ಹಂತ ಹಂತವಾಗಿ ವಿಶಪ್ರಾಸನ ಮಾಡುತ್ತಿದೆ. ಗೋಹತ್ಯೆ ನಿಷೇಧ ಕಾನೂನು ಕೂಡ ರೈತರ ಕತ್ತು ಹಿಸುಕುವುದು ಖಚಿತ. ನಾಟಿ ದನಗಳಂತೆ ಮುರ್ರಾ, ಜೆರ್ಸಿ ಹಾಗೂ ಮಿಶ್ರತಳಿಯ ದನಗಳಿಗೆ ರೋಗ ನಿರೋಧಕ ಶಕ್ತಿಯಿಲ್ಲ. 13 ವರ್ಷದೊಳಗಿನ ರೋಗಗ್ರಸ್ತ ದನಗಳನ್ನು ಬಿಜೆಪಿ ನಾಯಕರ ಮನೆ ಮುಂದೆ ಕಟ್ಟಿ ಹಾಕಿ ಬರಬೇಕೆ?” ಎಂದು ಪ್ರಶ್ನಿಸಿದ್ದಾರೆ.
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…