ಚಿಕ್ಕಮಗಳೂರು,: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವರ್ಸಸ್ ಮಾಜಿ ಶಾಸಕ ಸಿ.ಟಿ ರವಿ ನಡುವೆ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಟಿಕೆಟ್ ಫೈಟ್ ಜೋರಾಗಿದೆ. ಗೋ ಬ್ಯಾಕ್, ಶೋಭಾ ಹಾಠಾವೋ ಎಂದು ಸಿ,ಟಿ.ರವಿ ಬೆಂಬಲಿಗರು ಅಭಿಯಾನ ನಡೆಸಿದ್ದಾರೆ. ಸದ್ಯ ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ ವಿಚಾರ ಸಂಬಂಧ ಪೋಸ್ಟರ್ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲಾಗಿದೆ.
ಕಳೆದ ಜನವರಿ 01ರಿಂದ ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದ ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ದಂಗಲ್ ಆರಂಭ ಮಾಡಿದ್ದಾರೆ. ಶೋಭಾ ವಿರುದ್ಧ ಗೋ ಬ್ಯಾಕ್ ಶೋಭಾ ,ಶೋಭಾ ಹಠಾವೋ ಬಿಜೆಪಿ ಬಚಾವೋ ಅಭಿಯಾನ ನಡೆಯುತ್ತಿದೆ. ಟಿಕೆಟ್ ನೀಡದಂತೆ ಕ್ಯಾಂಪೇನ್ ನಡೆಸಲಾಗಿದೆ. ಇದು ಬಿಜೆಪಿ ಹೈ ಕಮಾಂಡ್ ಕೋಪಕ್ಕೂ ಕಾರಣವಾಗಿದೆ. ಇದೆಲ್ಲದರ ನಡುವೆ ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ ವಿಚಾರ ಸಂಬಂಧ ಪೋಸ್ಟರ್ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲಾಗಿದೆ. ಬಸವನಹಳ್ಳಿ ಪೊಲೀಸರಿಂದ ಪೋಸ್ಟರ್ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಶೋಭಕ್ಕ ಎಲ್ಲಿದ್ದೀರ?, ಶೋಭಕ್ಕ ಕಾಣೆ ಎಂದು ತರೀಕೆರೆಯಿಂದ ಚಿಕ್ಕಮಗಳೂರುವರೆಗೂ ರಾತ್ರೋರಾತ್ರಿ ಪೋಸ್ಟರ್ಗಳನ್ನು ಅಂಟಿಸಿದ್ದ ನಾಲ್ವರು ಯುವಕರಾದ ಸಂಜು, ಸಂಜಯ್, ವಿಷ್ಣು, ಚಂದ್ರಶೇಖರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಯುವಕರು ತರೀಕೆರೆ ಮೂಲದವರು. ತರೀಕೆರೆ ಪಟ್ಟಣದಿಂದ ಚಿಕ್ಕಮಗಳೂರು ನಗರದ ವರೆಗೂ ಪೋಸ್ಟರ್ ಅಂಟಿಸಿದ್ದರು. ನಗರ ಸಭೆ ಪೌರ ಕಾರ್ಮಿಕ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಇನ್ನು ಯುವಕರು ಹಣ ನೀಡಿ ಪೋಸ್ಟರ್ ಅಂಟಿಸಲು ಹೇಳಿದ್ರು ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಬಸವನಹಳ್ಳಿ ಪೊಲೀಸರು ಪೋಸ್ಟರ್ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…
ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…
ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ; ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…
ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…
246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…