Featured

ಗೋ ಹತ್ಯೆ-ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆದರೆ ಹೋರಾಟ : ಕರಾವಳಿ ಸ್ವಾಮೀಜಿಗಳು – Vishwanews24

ಗೋ ಹತ್ಯೆ-ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸರ್ಕಾರದ ನಿಲುವಿಗೆ ಕರಾವಳಿ ಸಂತರ ಖಂಡನೆ..

ಮಂಗಳೂರು : ರಾಜ್ಯದಲ್ಲಿ ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯಿದೆಯನ್ನು ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು. ಒಂದು ವೇಳೆ ವಾಪಸ್‌ ಪಡೆಯುವ ನಿರ್ಧಾರ ತೆಗೆದುಕೊಂಡರೆ ಸರಕಾರದ ವಿರುದ್ಧ ಸ್ವಾಮೀಜಿಗಳು, ಸಾಧುಸಂತರು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಕರಾವಳಿಯ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.

ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯಿದೆ ವಾಪಸ್‌ ಕುರಿತಂತೆ ನಾವು ಮಾತುಕತೆ ನಡೆಸಿ ಠರಾವು ಮಂಡಿಸಿದ್ದು, ಒಂದು ವೇಳೆ ಇವುಗಳನ್ನು ಸರಕಾರ ರದ್ದುಗೊಳಿಸಿದರೆ ಸಾಮಾಜದಲ್ಲಿ ಸಾಮರಸ್ಯಕ್ಕೆ ತೊಂದರೆ ಉಂಟಾಗಲಿದೆ. ಇದಕ್ಕೆ ಸರಕಾರ ಖಂಡಿತಾ ಅವಕಾಶ ನೀಡದಿರಲಿ. ಗೋಹತ್ಯೆ, ಮತಾಂತರ ಕಾಯಿದೆ ನಿಷೇಧ ಬಳಿಕ ಸಮಾಜದಲ್ಲಿ ಶಾಂತಿ-ನೆಮ್ಮದಿಯಿದೆ. ರಾಜ್ಯ ಸರಕಾರವು ಅದಕ್ಕೆ ಪೂರಕ ವಾತಾವರಣ ನಿರ್ಮಿಸಲಿ ಎಂದರು.

ಕರಾವಳಿ ಸ್ವಾಮೀಜಿಗಳು ಒಟ್ಟು ಸೇರಿ ಸಾಮೂಹಿಕ ನಿರ್ಣಯ ಮಾಡಿದ್ದು, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020ನ್ನು ರದ್ದುಗೊಳಿಸುವ ಪ್ರಸ್ತಾಪವ ಸಾಮೂಹಿಕವಾಗಿ ವಿರೋಧಿಸುವುದಾಗಿ ಹೇಳಿದರು.

Vishwa News 24

Recent Posts

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ – vishwanews24

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ…

12 minutes ago

ನಾಗುರಿ ದುರಂತ – ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ – vishwanews24

ನಾಗುರಿ ದುರಂತ - ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ಮಂಗಳೂರು: ನಾಗುರಿಯಲ್ಲಿ ಮನೆ…

35 minutes ago

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ – vishwanews24

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ ಬೆಂಗಳೂರು: ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ…

42 minutes ago

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ – vishwanews24

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ…

2 hours ago

ಆಟೋ ಎಲ್‌ಪಿಜಿ ದರ 10 ರೂ. ಇಳಿಕೆ – vishwanews24

ಆಟೋ ಚಾಲಕರಿಗೆ ಸಿಹಿ ಸುದ್ದಿ: ಎಲ್‌ಪಿಜಿ ದರ 10 ರೂ. ಇಳಿಕೆ ಬೆಂಗಳೂರು: ನಿರಂತರ ಎಲ್‌ಪಿಜಿ  ದರ ಏರಿಕೆಯಿಂದ ಕಂಗಾಲಾಗಿದ್ದ ಆಟೋ…

2 hours ago

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ – ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ – vishwanews24

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ - ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ ಬೆಂಗಳೂರು:…

3 hours ago