Featured

ಗೌರಿ ಗಣೇಶ ಉತ್ಸವಕ್ಕೆ ಸಾರ್ವಜನಿಕರಿಗೆ ಪೊಲೀಸರ ಮಾರ್ಗಸೂಚಿ ; ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸಲು ಅನುಮತಿ ಕಡ್ಡಾಯ ..!!

ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಪೊಲೀಸ್ ಇಲಾಖೆ ಮಾರ್ಗಸೂಚಿ ರೂಪಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸಲು ವಿವಿಧ ಇಲಾಖೆಯಿಂದ ಅನುಮತಿ ಕಡ್ಡಾಯ ಮಾಡಿದ್ದು, ಕೆಲ ಅಂಶಗಳು ಗೊಂದಲಕ್ಕೆ ಎಡೆಮಾಡಿವೆ.

ಸೆ.13ರಂದು ಗಣೇಶ ಮೂರ್ತಿ ಕೂರಿಸುವ ಸ್ಥಳಗಳನ್ನು ಗುರುತಿಸಿ ಶಾಂತಿ ಸಭೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂತ್ ಸೂಚಿಸಿದ್ದಾರೆ. ಇದೇ ರೀತಿ ಸಂಘ-ಸಂಸ್ಥೆಗಳು ಪಾಲಿಸಬೇಕಾದ ಅಂಶಗಳನ್ನು ಉಲ್ಲೇಖಿಸಿದ್ದಾರೆ.

ಗಣೇಶ ಮೂರ್ತಿ ಕೂರಿಸುವ ಸಂಘ-ಸಂಸ್ಥೆಗಳ ಮುಖಂಡರು ಆಯಾ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು. ವಿವಾದಾತ್ಮಕ ಸ್ಥಳಗಳಲ್ಲಿ ಗಣೇಶ ಕೂರಿಸಲು ಅವಕಾಶವಿಲ್ಲ. ವಾಹನಗಳ ಸಂಚಾರಕ್ಕೆ ಅಡ್ಡಿ ಆಗಬಾರದು. ರಾತ್ರಿ-ಹಗಲು ಕಾವಲಿಗೆ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಪೆಂಡಲ್ ಸಂಪೂರ್ಣ ಸೆರೆಯಾಗುವಂತೆ ಸಿಸಿ ಕ್ಯಾಮರಾ ಅಳವಡಿಸಬೇಕು. ಪೆಂಡಲ್ ಒಳಗೆ ಅಡುಗೆ ತಯಾರಿಗೆ ಅವಕಾಶವಿಲ್ಲ. ಪೆಂಡಲ್ ಪ್ರವೇಶ, ನಿರ್ಗಮ ದ್ವಾರ ಸುಗಮ ವಾಗಿರಬೇಕು. ಅಗತ್ಯ ಇದ್ದರೆ ಬ್ಯಾರಿಕೇಡ್ ಅಳವಡಿಸ ಬೇಕು. ಧ್ವನಿವರ್ಧಕದ ಸೌಂಡ್ ಹೆಚ್ಚಿಸಬಾರದು, ಸಾಂಸ್ಕೃತಿ ಕಾರ್ಯಕ್ರಮ ಆಯೋಜನೆಗೂ ಮೊದಲು ಪೊಲೀಸರ ಗಮನಕ್ಕೆ ತಂದು ಭದ್ರತೆ ಪಡೆಯುವಂತೆ ಸೂಚಿಸಿದ್ದಾರೆ.

ಮಸೀದಿ ಎದುರು ನಿಶ್ಯಬ್ದ

ಮೆರವಣಿಗೆ ಅನುಮತಿ ಕೊಡುವ ಮೊದಲು ಠಾಣಾಧಿಕಾರಿ ಮಾರ್ಗ ಪರಿಶೀಲಿಸಬೇಕು. ಪ್ರತಿವರ್ಷ ಸಾಗುವ ಮಾರ್ಗದಲ್ಲೇ ಮೆರವಣಿಗೆ ತೆರಳಬೇಕು. ಆ ಮಾರ್ಗದಲ್ಲಿ ಗುಂಡಿ, ಇನ್ನಿತರ ತೊಂದರೆ ಇದ್ದರೆ ಬದಲಾಯಿಸಬೇಕು. ಸಣ್ಣ ಮಾರ್ಗ, ವಿದ್ಯುತ್ ಕಂಬ ಇದ್ದರೆ ಮಾರ್ಗ ಬದಲಾಯಿಸಬೇಕು. ಸೂಕ್ಷ್ಮ ಪ್ರದೇಶದಲ್ಲಿ ತೆರಳುವಾಗ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಮಸೀದಿ ಮುಂಭಾಗ ಮೆರವಣಿಗೆ ತೆರಳುವಾಗ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಸಂಗೀತ ಹಾಕುವುದು, ಬಣ್ಣ ಎರಚುವುದು ಮಾಡಬಾರದು. ವಿದ್ಯುತ್ ಸಂಪರ್ಕಕ್ಕೆ ಜನರೇಟ್ ವ್ಯವಸ್ಥೆ ಮಾಡಬೇಕು. ಒಂದೇ ಬಣ್ಣದ ಟಿ-ಶರ್ಟ್ ಧರಿಸುವುದು ಅನುಕೂಲಕರ.

ಹಲವು ಅನುಮತಿ ಕಡ್ಡಾಯ

ಗಣೇಶ ಮೂರ್ತಿ ಕೂರಿಸುವವರು ಮೊದಲು ಆಯಾ ಠಾಣಾಧಿಕಾರಿ ಯಿಂದ ಅನುಮತಿ ಪಡೆಯಬೇಕು. ಆ ನಂತರ ಪೆಂಡಲ್ ಹಾಕಿದ ಮೇಲೆ ವಿದ್ಯುತ್ ಸಂಪರ್ಕ ಪಡೆಯಲು ಹೆಸ್ಕಾಂಗೆ ಅರ್ಜಿ ಕೊಟ್ಟಾಗ ಅವರು ಸ್ಥಳ ಪರಿಶೀಲಿಸುತ್ತಾರೆ. ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಅನುಮತಿ ಕಡ್ಡಾಯ

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

13 hours ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

13 hours ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

14 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

14 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

15 hours ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

15 hours ago