ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಪೊಲೀಸ್ ಇಲಾಖೆ ಮಾರ್ಗಸೂಚಿ ರೂಪಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸಲು ವಿವಿಧ ಇಲಾಖೆಯಿಂದ ಅನುಮತಿ ಕಡ್ಡಾಯ ಮಾಡಿದ್ದು, ಕೆಲ ಅಂಶಗಳು ಗೊಂದಲಕ್ಕೆ ಎಡೆಮಾಡಿವೆ.
ಸೆ.13ರಂದು ಗಣೇಶ ಮೂರ್ತಿ ಕೂರಿಸುವ ಸ್ಥಳಗಳನ್ನು ಗುರುತಿಸಿ ಶಾಂತಿ ಸಭೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂತ್ ಸೂಚಿಸಿದ್ದಾರೆ. ಇದೇ ರೀತಿ ಸಂಘ-ಸಂಸ್ಥೆಗಳು ಪಾಲಿಸಬೇಕಾದ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಗಣೇಶ ಮೂರ್ತಿ ಕೂರಿಸುವ ಸಂಘ-ಸಂಸ್ಥೆಗಳ ಮುಖಂಡರು ಆಯಾ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು. ವಿವಾದಾತ್ಮಕ ಸ್ಥಳಗಳಲ್ಲಿ ಗಣೇಶ ಕೂರಿಸಲು ಅವಕಾಶವಿಲ್ಲ. ವಾಹನಗಳ ಸಂಚಾರಕ್ಕೆ ಅಡ್ಡಿ ಆಗಬಾರದು. ರಾತ್ರಿ-ಹಗಲು ಕಾವಲಿಗೆ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಪೆಂಡಲ್ ಸಂಪೂರ್ಣ ಸೆರೆಯಾಗುವಂತೆ ಸಿಸಿ ಕ್ಯಾಮರಾ ಅಳವಡಿಸಬೇಕು. ಪೆಂಡಲ್ ಒಳಗೆ ಅಡುಗೆ ತಯಾರಿಗೆ ಅವಕಾಶವಿಲ್ಲ. ಪೆಂಡಲ್ ಪ್ರವೇಶ, ನಿರ್ಗಮ ದ್ವಾರ ಸುಗಮ ವಾಗಿರಬೇಕು. ಅಗತ್ಯ ಇದ್ದರೆ ಬ್ಯಾರಿಕೇಡ್ ಅಳವಡಿಸ ಬೇಕು. ಧ್ವನಿವರ್ಧಕದ ಸೌಂಡ್ ಹೆಚ್ಚಿಸಬಾರದು, ಸಾಂಸ್ಕೃತಿ ಕಾರ್ಯಕ್ರಮ ಆಯೋಜನೆಗೂ ಮೊದಲು ಪೊಲೀಸರ ಗಮನಕ್ಕೆ ತಂದು ಭದ್ರತೆ ಪಡೆಯುವಂತೆ ಸೂಚಿಸಿದ್ದಾರೆ.
ಮಸೀದಿ ಎದುರು ನಿಶ್ಯಬ್ದ
ಮೆರವಣಿಗೆ ಅನುಮತಿ ಕೊಡುವ ಮೊದಲು ಠಾಣಾಧಿಕಾರಿ ಮಾರ್ಗ ಪರಿಶೀಲಿಸಬೇಕು. ಪ್ರತಿವರ್ಷ ಸಾಗುವ ಮಾರ್ಗದಲ್ಲೇ ಮೆರವಣಿಗೆ ತೆರಳಬೇಕು. ಆ ಮಾರ್ಗದಲ್ಲಿ ಗುಂಡಿ, ಇನ್ನಿತರ ತೊಂದರೆ ಇದ್ದರೆ ಬದಲಾಯಿಸಬೇಕು. ಸಣ್ಣ ಮಾರ್ಗ, ವಿದ್ಯುತ್ ಕಂಬ ಇದ್ದರೆ ಮಾರ್ಗ ಬದಲಾಯಿಸಬೇಕು. ಸೂಕ್ಷ್ಮ ಪ್ರದೇಶದಲ್ಲಿ ತೆರಳುವಾಗ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಮಸೀದಿ ಮುಂಭಾಗ ಮೆರವಣಿಗೆ ತೆರಳುವಾಗ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಸಂಗೀತ ಹಾಕುವುದು, ಬಣ್ಣ ಎರಚುವುದು ಮಾಡಬಾರದು. ವಿದ್ಯುತ್ ಸಂಪರ್ಕಕ್ಕೆ ಜನರೇಟ್ ವ್ಯವಸ್ಥೆ ಮಾಡಬೇಕು. ಒಂದೇ ಬಣ್ಣದ ಟಿ-ಶರ್ಟ್ ಧರಿಸುವುದು ಅನುಕೂಲಕರ.
ಹಲವು ಅನುಮತಿ ಕಡ್ಡಾಯ
ಗಣೇಶ ಮೂರ್ತಿ ಕೂರಿಸುವವರು ಮೊದಲು ಆಯಾ ಠಾಣಾಧಿಕಾರಿ ಯಿಂದ ಅನುಮತಿ ಪಡೆಯಬೇಕು. ಆ ನಂತರ ಪೆಂಡಲ್ ಹಾಕಿದ ಮೇಲೆ ವಿದ್ಯುತ್ ಸಂಪರ್ಕ ಪಡೆಯಲು ಹೆಸ್ಕಾಂಗೆ ಅರ್ಜಿ ಕೊಟ್ಟಾಗ ಅವರು ಸ್ಥಳ ಪರಿಶೀಲಿಸುತ್ತಾರೆ. ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಅನುಮತಿ ಕಡ್ಡಾಯ
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…