Featured

ಚಂದ್ರಶೇಖರ್ ಗುರೂಜಿ ಹತ್ಯೆಗೆ ಸ್ಫೋಟಕ ಟ್ವಿಸ್ಟ್ – ಗುರೂಜಿ ಅಣ್ಣನ ಮಕ್ಕಳೇ ಮುಖ್ಯ ಕಾರಣ ಮಾಹಿತಿ ಬಹಿರಂಗ – Vishwanews24

ಚಂದ್ರಶೇಖರ್ ಗುರೂಜಿ ಹತ್ಯೆಗೆ ಸ್ಫೋಟಕ ಟ್ವಿಸ್ಟ್ – ಗುರೂಜಿ ಅಣ್ಣನ ಮಕ್ಕಳೇ ಮುಖ್ಯ ಕಾರಣ ಮಾಹಿತಿ ಬಹಿರಂಗ

ಹುಬ್ಬಳ್ಳಿ: ಸರಳವಾಸ್ತು ಕೊಲೆಯಾದ ಚಂದ್ರಶೇಖರ್ ಗುರೂಜಿ ಕೇಸ್‌ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಒಂದೇ ಕುಟುಂಬದಂತಿದ್ದ ಗುರೂಜಿ ಪರಿವಾರ ಗ್ರೂಪ್‌ಗೆ ಅವರ ಅಣ್ಣನ ಮಕ್ಕಳೇ ಮುಖ್ಯ ಕಾರಣ ಅನ್ನೋದು ಮಾಹಿತಿ ಬಹಿರಂಗವಾಗಿದೆ.

ಸರಳವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಿದೆ. ಇದಕ್ಕೆ ಪ್ರಮುಖ ಕಾರಣ ಆಪ್ತರಲ್ಲಿ ಮೂಡಿದ ಮನಸ್ತಾಪ. ಯಾವಾಗ ಅವರ ಅಣ್ಣನ ಮಕ್ಕಳು, ಗುರೂಜಿ ಕಂಪನಿಗೆ ಎಂಟ್ರಿ ಆದ್ರೋ ಅಲ್ಲಿಂದ ಸಮಸ್ಯೆ ಶುರುವಾಗಿದೆ.

2014ರ ನಂತರ ಗುರೂಜಿ ಸರಳವಾಸ್ತು ಕಂಪನಿಯಲ್ಲಿ ಮಹತ್ತರ ಬೆಳವಣಿಗೆ ಆಗಿದೆ. ಚಂದ್ರಶೇಖರ ಗುರೂಜಿ, ಸಿಬ್ಬಂದಿ ನಡುವೆ ಅಣ್ಣನ ಮಕ್ಕಳು ವಿಲನ್‌ಗಳಾಗುತ್ತಿದ್ದಾರೆ ಅಂತ ಹತ್ಯೆ ಆರೋಪಿ ಮಂಜುನಾಥ ಸ್ವತಃ ಗುರೂಜಿ ಮುಂದೆ ನೋವು ತೋಡಿಕೊಂಡಿದ್ದರು.

ಬೆಳ್ತಂಗಡಿ : ನಾನು ಬದುಕಿದ್ದು ಮಂಜುನಾಥ ಸ್ವಾಮಿಯ ಪವಾಡದಿಂದ.. ಧರ್ಮಸ್ಥಳ ಕಾಡಿಗೆ ಬಂದು ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿದ್ದ ವಿವಾಹಿತ ಯುವಕ – Vishwanews24

ಇನ್ನು 2019 ಜೂನ್ 24ರಂದು ಮಂಜುನಾಥ ಮರೆವಾಡ, ಚಂದ್ರಶೇಖರ್ ಗುರೂಜಿಗೆ ಮಾಡಿದ್ದ ವಾಟ್ಸಾಪ್ ಮೆಸೇಜ್‌ ಮಾಧ್ಯಮಗಳಿಗೆ ಲಭ್ಯವಾಗಿದೆ. ವಾಟ್ಸ್ ಮೆಸೇಜ್‌ನಲ್ಲಿರುವ ಪ್ರಮುಖ ಅಂಶಗಳು ಹೀಗಿವೆ.

ಮಂಜುನಾಥ್ ವಾಟ್ಸಾಪ್ ಸಂದೇಶದಲ್ಲಿ ಏನಿದೆ?
ನೀವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೆ 2ನೇ ತಂದೆಯಾಗಿದ್ದೀರಿ. ನಿಮ್ಮ ಏಳಿಗೆಗಾಗಿ ನಾವು ಕಷ್ಟಪಟ್ಟು ದುಡಿದೆವು. ಆದ್ರೆ ಯಾವಾಗ ನಿಮ್ಮ ಅಣ್ಣನ ಮಕ್ಕಳು ಕಂಪನಿಗೆ ಎಂಟ್ರಿ ಕೊಟ್ರೋ ಆಗ ಎಲ್ಲವೂ ಬದಲಾಯಿತು. ನೀವು ಸಿಬ್ಬಂದಿಯನ್ನು ಮಕ್ಕಳಂತೆ ಕಾಣುತ್ತಿದ್ದೀರಿ. ಆದರೆ ನಿಮ್ಮ ಅಣ್ಣನ ಮಕ್ಕಳು ನಿಮ್ಮನ್ನು ಮತ್ತು ನಮ್ಮನ್ನು ಬೇರೆ ಮಾಡಲು ಶುರು ಪ್ರಯತ್ನಿಸಿದ್ದಾರೆ.

ಪುತ್ತೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂಮಾಪಕನಿಗೆ ಜೈಲು ಶಿಕ್ಷೆ – Vishwanews24

ನಿಮ್ಮ ಅಣ್ಣನ ಮಕ್ಕಳು ಯಾವಾಗ ಕಂಪನಿಗೆ ಬಂದರೋ ಆಗ ನಿಮ್ಮ ಅವನತಿ ಆರಂಭವಾಯಿತು. ನೀವು ನಮ್ಮ ಪಾಲಿನ ದೇವರು ಅಂತ ತಿಳಿದುಕೊಂಡಿದ್ದೆವು. ಆದರೆ ನೀವು ನಮ್ಮ ಪಾಲಿನ ಯಮ ಆದಿರಿ. ನಿಮಗೆ ನಾವು ಏನು ಮಾಡಿದ್ವಿ? ನಮ್ಮ ಕಣ್ಣೀರು ನಿಮ್ಮನ್ನ ಕ್ಷಮಿಸೋದಿಲ್ಲ. 400 ಜನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ರಿ. ಅವರ ಕಣ್ಣೀರು ಸುಮ್ಮನೆ ಬಿಡೋದಿಲ್ಲ. ಆದರೂ ನಿಮಗೆ ನಾವು ಒಳ್ಳೆಯದನ್ನೇ ಬಯಸುತ್ತೇವೆ ಎಂದು ಸಂದೇಶದಲ್ಲಿದೆ.

ಇಷ್ಟು ಮಾತ್ರವಲ್ಲ ಇನ್ನೂ ಸಾಕಷ್ಟು ಮೆಸೇಜ್‌ಗಳು ಆರೋಪಿಗಳಿಂದ ಗುರೂಜಿಗೆ ಹೋಗಿವೆ. ಆದರೆ ಚಂದ್ರಶೇಖರ ಗುರೂಜಿ ಮಾತ್ರ ಇವುಗಳಿಗೆ ತಲೆಕೆಡಿಸಿಕೊಂಡಿಲ್ಲ. ಗುರೂಜಿ, ಸಿಬ್ಬಂದಿ ಮೇಲಿಟ್ಟಿದ್ದ ಕಾಳಜಿಯು ಅಣ್ಣನ ಮಕ್ಕಳು ಎಂಟ್ರಿ ಬಳಿಕ ಕಡಿಮೆಯಾಗಿದೆ. ಇದರಿಂದ ಹುಟ್ಟಿಕೊಂಡ ಮನಸ್ತಾಪ ಗುರೂಜಿ ಅಂತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Vishwa News 24

Recent Posts

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

18 minutes ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

52 minutes ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

1 hour ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

1 hour ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

1 hour ago

ಉಡುಪಿ ನಗರಸಭೆ ವ್ಯಾಪ್ತಿಯ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ಅನುದಾನ ಮಂಜೂರು ಮಾಡುವಂತೆ  ಶಾಸಕ ಯಶ್ ಪಾಲ್ ಮನವಿ – vishwanews24

ಉಡುಪಿ ನಗರಸಭೆ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ…

4 hours ago