ರಾಮನಗರ: ಚಲಿಸುತ್ತಿದ್ದ ಸ್ಕೂಲ್ ಬಸ್ಸಿನಿಂದ ಕೆಳಗೆ ಬಿದ್ದು ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಪಿಚ್ಚನಕೆರೆ ಬಳಿ ಜ.09ರ ಸಂಜೆ ನಡೆದಿದೆ. ಚಾಲಕ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ.
ಮೃತ ಬಾಲಕಿ ಸಿದ್ದೇನಹಳ್ಳಿ ಗ್ರಾಮದ ನಿವಾಸಿ ಸ್ವಾಮಿ ಎಂಬವರ ಮಗಳು, ರಕ್ಷಿತಾ (6) ಎಂದು ಗುರುತಿಸಲಾಗಿದೆ.
ರಕ್ಷಿತಾ ಬಿಡದಿ ಬಳಿಯ ರಾಮನಹಳ್ಳಿ ಗೇಟ್‌ನ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯುಕೆಜಿ ತರಗತಿಯಲ್ಲಿ ಓದುತ್ತಿದ್ದಳು. ಸಂಜೆ ಶಾಲೆ ಮುಗಿಸಿ ಬಸ್‌ನಲ್ಲಿ ಮನೆಗೆ ಹಿಂತಿರುಗುವ ವೇಳೆ ಪಿಚ್ಚನಕೆರೆ ಬಳಿ ವಿದ್ಯಾರ್ಥಿಗಳನ್ನು ಇಳಿಸಿ ಮುಂದೆ ಸಾಗಬೇಕಾದರೆ ಶಾಲಾ ಸಿಬ್ಬಂದಿಯು ಬಸ್ಸಿನ ಬಾಗಿಲು ಹಾಕಿರಲಿಲ್ಲ. ಚಾಲಕ ತಿರುವಿನಲ್ಲಿ ಬ್ರೇಕ್ ಹಾಕಿದ ಸಂದರ್ಭದಲ್ಲಿ ಸೀಟಿನ ಮೇಲೆ ಕುಳಿತಿದ್ದ ವಿದ್ಯಾರ್ಥಿನಿ ರಕ್ಷಿತಾ ಜಾರಿ ಕೆಳಗಿ ಬಿದ್ದು ಹಿಂದಿನ ಚಕ್ರ ತಲೆಯ ಮೇಲೆ ಹತ್ತಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಬಸ್‌ನಿಂದ ವಿದ್ಯಾರ್ಥಿನಿ ಬಿದ್ದು ಮರಣ ಹೊಂದಿದ ಸುದ್ದಿ ತಿಳಿದ ಕೂಡಲೇ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದು ಬಸ್ ಸಿಬ್ಬಂದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲಿಮುಟ್ಟಿದ್ದು, ಶಾಲೆಯ ವಿರುದ್ದ ಹಾಗೂ ಸಿಬ್ಬಂದಿ ವಿರುದ್ದ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…