ಮೈಸೂರು : ಚಾಮುಂಡಿ ಬೆಟ್ಟದಲ್ಲಿರುವ ರಾಕ್ಷಸ ರೂಪದ ಮಹಿಷನ ಪ್ರತಿಮೆಯನ್ನು ಕೆಡವಿ, ಬೌದ್ದ ಬಿಕ್ಕುವಿನ ರೂಪದಲ್ಲಿರುವ ಮಹಿಷನ ಪ್ರತಿಮೆ ಸ್ಥಾಪಿಸಬೇಕು ಎಂದು ಪ್ರಗತಿಪರ ಚಿಂತಕ ಕೆ ಎಸ್ ಭಗವಾನ್ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ವಿವಾದಿತ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಕೆ.ಎಸ್.ಭಗವಾನ್ ಕಣ್ಣು ಇದೀಗ ಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರನ ಮೇಲೆ ಬಿದ್ದಿದೆ. ದಸರಾಗೆ ಸಂಬಂಧ ಪಟ್ಟಂತ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ ಎಸ್ ಭಗವಾನ್, ‘1950 ರಲ್ಲಿ ಅಂದಿನ ರಾಜರು ಪುರೋಹಿತಶಾಹಿಗಳ ಮಾತು ಕೇಳಿ ರಕ್ಕಸ ರೂಪದಲ್ಲಿ ಇರುವ ಮಹಿಷನ ಪ್ರತಿಮೆ ಮಾಡಿದ್ದಾರೆ. ಮಹಿಷ ಒಬ್ಬ ರಾಕ್ಷಸ ಅನ್ನೊದು ಸುಳ್ಳು. ಪ್ರಸಿದ್ಧ ಪಡೆದಿರುವ ಮೈಸೂರಿಗನನ್ನು ಯಾರಾದ್ರು ಮಹಿಷ ಅಂತಾ ಹೆಸರಿಡ್ತಾರಾ’ ಎಂದು ಪ್ರಶ್ನಿಸಿದ್ದಾರೆ ಪ್ರಗತಿ ಪರ ಚಿಂತಕ ಕೆ.ಎಸ್.ಭಗವಾನ್ ಹೊಸ ವಿವಾದವನ್ನು ಸೃಷ್ಠಿಸಿದ್ದಾರೆ.
ಸ್ವಾಮಿ ವಿವೇಕಾನಂದರಷ್ಟು ಹಿಂದು ಧರ್ಮವನ್ನ ಯಾರು ಟೀಕಿಸಿಲ್ಲ. ಬ್ಯಾಹ್ಮಣರು ರಾಕ್ಷಸರು ಅಂತಾ ಸ್ವಾಮಿ ವಿವೇಕಾನಂದರು ಹೇಳಿದ್ದರು. ಬುದ್ದರು ಬಂದು ಅಸಮಾನತೆಯನ್ನ ವಿರೋಧಿಸಿದ್ದರು. ಬುದ್ದ ಕಳ್ಳ ಅಂತಾ ರಾಮನ ಬಾಯಲ್ಲಿ ಬುದ್ದನನ್ನ ಬೈಯಿಸಿದ್ದಾರೆ ಬ್ರಾಹ್ಮಣರು. ರಾಮಾಯಣ ಚಾತುರ್ವರ್ಣ ಗ್ರಂಥ ಪ್ರಾಚೀನ ಅಸುರ ರಾಷ್ಟ್ರ ಅನ್ನೊ ಪುಸ್ತಕದಲ್ಲಿ ಮಹಿಷನ ಬಗ್ಗೆ ಉಲ್ಲೇಖ ಇದೆ ಎಂದು ಹೇಳುವ ಮೂಲಕ ದಸರಾ ಸಂದರ್ಭದಲ್ಲಿ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…