Featured

ಚಾಮುಂಡಿ ಬೆಟ್ಟದಲ್ಲಿರುವ ರಾಕ್ಷಸ ರೂಪದ ಮಹಿಷನ ಪ್ರತಿಮೆ ಕೆಡವಿ: ವಿವದಾತ್ಮಕ ಹೇಳಿಕೆ ನೀಡಿದ ಕೆ.ಎಸ್.ಭಗವಾನ್

ಮೈಸೂರು : ಚಾಮುಂಡಿ  ಬೆಟ್ಟದಲ್ಲಿರುವ ರಾಕ್ಷಸ ರೂಪದ ಮಹಿಷನ ಪ್ರತಿಮೆಯನ್ನು ಕೆಡವಿ, ಬೌದ್ದ   ಬಿಕ್ಕುವಿನ ರೂಪದಲ್ಲಿರುವ ಮಹಿಷನ ಪ್ರತಿಮೆ ಸ್ಥಾಪಿಸಬೇಕು  ಎಂದು ಪ್ರಗತಿಪರ ಚಿಂತಕ ಕೆ ಎಸ್​ ಭಗವಾನ್​ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

ವಿವಾದಿತ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಕೆ.ಎಸ್.ಭಗವಾನ್ ಕಣ್ಣು ಇದೀಗ ಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರನ ಮೇಲೆ ಬಿದ್ದಿದೆ. ದಸರಾಗೆ ಸಂಬಂಧ ಪಟ್ಟಂತ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ ಎಸ್​ ಭಗವಾನ್,​ ‘1950 ರಲ್ಲಿ ಅಂದಿನ ರಾಜರು ಪುರೋಹಿತಶಾಹಿಗಳ ಮಾತು ಕೇಳಿ ರಕ್ಕಸ ರೂಪದಲ್ಲಿ ಇರುವ ಮಹಿಷನ ಪ್ರತಿಮೆ ಮಾಡಿದ್ದಾರೆ. ಮಹಿಷ ಒಬ್ಬ ರಾಕ್ಷಸ ಅನ್ನೊದು ಸುಳ್ಳು. ಪ್ರಸಿದ್ಧ ಪಡೆದಿರುವ ಮೈಸೂರಿಗನನ್ನು ಯಾರಾದ್ರು ಮಹಿಷ ಅಂತಾ ಹೆಸರಿಡ್ತಾರಾ’ ಎಂದು ಪ್ರಶ್ನಿಸಿದ್ದಾರೆ ಪ್ರಗತಿ ಪರ ಚಿಂತಕ ಕೆ.ಎಸ್.ಭಗವಾನ್​ ಹೊಸ ವಿವಾದವನ್ನು ಸೃಷ್ಠಿಸಿದ್ದಾರೆ.

ಸ್ವಾಮಿ ವಿವೇಕಾನಂದರಷ್ಟು ಹಿಂದು ಧರ್ಮವನ್ನ ಯಾರು ಟೀಕಿಸಿಲ್ಲ. ಬ್ಯಾಹ್ಮಣರು ರಾಕ್ಷಸರು ಅಂತಾ ಸ್ವಾಮಿ ವಿವೇಕಾನಂದರು ಹೇಳಿದ್ದರು. ಬುದ್ದರು ಬಂದು ಅಸಮಾನತೆಯನ್ನ ವಿರೋಧಿಸಿದ್ದರು. ಬುದ್ದ ಕಳ್ಳ ಅಂತಾ ರಾಮನ ಬಾಯಲ್ಲಿ ಬುದ್ದನನ್ನ ಬೈಯಿಸಿದ್ದಾರೆ ಬ್ರಾಹ್ಮಣರು. ರಾಮಾಯಣ ಚಾತುರ್ವರ್ಣ ಗ್ರಂಥ ಪ್ರಾಚೀನ ಅಸುರ ರಾಷ್ಟ್ರ ಅನ್ನೊ ಪುಸ್ತಕದಲ್ಲಿ ಮಹಿಷನ ಬಗ್ಗೆ ಉಲ್ಲೇಖ ಇದೆ ಎಂದು ಹೇಳುವ ಮೂಲಕ ದಸರಾ ಸಂದರ್ಭದಲ್ಲಿ ಹೊಸ ವಿವಾದ ಹುಟ್ಟು ಹಾಕಿದ್ದಾರೆ.

 

 

Vishwa News 24

Recent Posts

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ – vishwanews24

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ  ಸಮುದ್ರಪಾಲಾದ ಘಟನೆ ಉತ್ತರ…

8 hours ago

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – vishwanews24

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…

8 hours ago

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ – vishwanews24

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…

8 hours ago

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ – vishwanews24

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…

8 hours ago

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ – vishwanews24

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…

9 hours ago

ಹಿಂದಿ ಕಿರುತೆರೆ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…

9 hours ago