ಚಿಕ್ಕಮಗಳೂರು: ತಾಲ್ಲೂಕಿನ ಬಾಬಾಬುಡನ್ಗಿರಿಯಲ್ಲಿರುವ ಇನಾಂ ದತ್ತಾತ್ರೇಯ ಪೀಠದಲ್ಲಿ ನವೆಂಬರ್ 13ರ ಒಳಗೆ ಹಿಂದೂ ಅರ್ಚಕರ ನೇಮಕವಾಗಬೇಕು. ಇಲ್ಲದಿದ್ದರೆ ಹಿಂದೂಗಳ ಆಕ್ರೋಶ ಎದುರಿಸಲು ಸರ್ಕಾರವು ಸಿದ್ಧವಾಗಬೇಕು ಎಂದು ಶ್ರೀರಾಮಸೇನೆಯ ರಾಜ್ಯ ಸಂಚಾಲಕ ಗಂಗಾಧರ ಕುಲಕರ್ಣಿ ಎಚ್ಚರಿಸಿದರು.
ದತ್ತಪೀಠದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ. ಈಗ್ಯಾಕೆ ಸುಮ್ಮನಿದ್ದೀರಿ. ಹಿಂದೂ ಅರ್ಚಕರನ್ನು ನೇಮಿಸದಿದ್ದರೆ ಹಿಂದೂಗಳು ನಿಮ್ಮನ್ನು ತಿರಸ್ಕರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮುಸ್ಲಿಮರು ಏನು ಮಾಡಿದರೂ ಸುಮ್ಮನಿರುವ ಸರ್ಕಾರವು ನಮಗೆ ನಮಗೆ ಮಾತ್ರ ಎಲ್ಲದಕ್ಕೂ ಕಿರಿಕಿರಿ ಮಾಡುತ್ತದೆ. ನ 13ರ ಒಳಗೆ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಬೇಕು. ಇಲ್ಲದಿದ್ದರೆ ಪ್ರವೀಣ್ ನೆಟ್ಟಾರ್ ಹತ್ಯೆಯಾದಾಗ ಸಮಾಜದಲ್ಲಿ ವ್ಯಕ್ತವಾಗಿದ್ದ ಮಾದರಿಯ ಆಕ್ರೋಶವು ನ 13ರಂದು ಮತ್ತೊಮ್ಮೆ ಭುಗಿಲೇಳುತ್ತದೆ ಎಂದರು.
ಇದನ್ನೂ ಓದಿ: ನಾನು ಉದ್ದೇಶ ಪೂರ್ವಕವಾಗಿಯೇ ಟಿಪ್ಪು ರೈಲಿನ ಹೆಸರು ಬದಲಾಯಿಸಿದ್ದೇನೆ: ಸಂಸದ ಪ್ರತಾಪ ಸಿಂಹ – Vishwanews24
ಮಾಲೆ ಹಾಕಿ ದತ್ತಪೀಠಕ್ಕೆ ಬಾರದಿದ್ದರೆ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದೆ. ಅದೇ ರೀತಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ. ದತ್ತಪೀಠದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಈಗ ಸುಮ್ಮನಿದ್ದಾರೆ. ಹಿಂದೂ ಅರ್ಚಕರನ್ನು ನೇಮಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಹಿಂದೂಗಳು ನಿಮ್ಮನ್ನು ತಿರಸ್ಕರಿಸುತ್ತಾರೆ ಎಂದು ಎಚ್ಚರಿಸಿದರು.
ದತ್ತಪೀಠದಲ್ಲಿರು ಗಂಧದ ಬಾವಿ ಪೂರ್ತಿ ಕುಸಿಯುವ ಸ್ಥಿತಿ ತಲುಪಿದೆ. ಅಲ್ಲಿರುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಸರ್ಕಾರದ ಕೈಲಿ ಅಲ್ಲಿನ ಮಣ್ಣು ರಕ್ಷಣೆ ಮಾಡಲು ಆಗುತ್ತಿಲ್ಲ. ಮುಜರಾಯಿ ಇಲಾಖೆಯು ಗಾಂಧಿಜೀಯ ಮೂರು ಮಂಗಗಳಂತೆ ವರ್ತಿಸುತ್ತಿದೆ. ಮುಸ್ಲಿಮರು ಏನೇ ಮಾಡಿದರೂ ಸುಮ್ಮನಿರುತ್ತದೆ. ನೀವು ಸರ್ಕಾರದ ಅಧೀನಲ್ಲಿದ್ದೀರಾ, ಮುಸ್ಲಿಮರ ಅಧೀನದಲ್ಲಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…
ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…
ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…
ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್ ಕುಮಾರ್ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…
ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…
ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…