ಚಿಕ್ಕಮಗಳೂರು:– ನಗರದ ರತ್ನಗಿರಿ ರಸ್ತೆಯಲ್ಲಿರುವ ಮೆಸ್ಕಾಂ ಕಟ್ಟಡದ ಆವರಣದಲ್ಲಿ ೭೩ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಇಂದು ಮೆಸ್ಕಾಂ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಟಿ.ಸಿ.ಮಂಜುನಾಥ್ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಎಂ.ಕುಮಾರ್, ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಅಣ್ಣಪ್ಪ, ಚಿದಾನಂದ್, ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯ ಸತೀಶ್, ಲೋಕೇಶ್, ಎಸ್ಸಿಎಸ್ಟಿ ಅಸೋಸಿಯೇಷನ್‌ನ ಜಯಣ್ಣ, ಲೆಕ್ಕಾಧಿಕಾರಿ ವೆಂಕಟೇಶ್, ರಾಜಶೇಖರ್, ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿದ್ದರು.
ಸುದ್ದಿ-2
ನಗರದ ಹನುಮಂತಪ್ಪ ವೃತ್ತದಲ್ಲಿರುವ ಜಾತ್ಯಾತೀತ ಜನತಾದಳ ಕಛೇರಿಯಲ್ಲಿ ಇಂದು ೭೩ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಪಕ್ಷದ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮಾಜಿ ಅಧ್ಯಕ್ಷ ಹೆಚ್.ಎಸ್.ಮಂಜಪ್ಪ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಪಕ್ಷದ ವಿಧಾನಸಭಾ ಆಕಾಂಕ್ಷಿ ಬಿ.ಎಂ.ತಿಮ್ಮಶೆಟ್ಟಿ, ನಗರಸಭಾ ಸದಸ್ಯರುಗಳಾದ ಎ.ಸಿ.ಕುಮಾರ್, ಗೋಪಿ, ಮಾಜಿ ಸದಸ್ಯ್ಷ ದಿನೇಶ್, ಮುಖಂಡರಾದ ಸಿ.ಕೆ.ಮೂರ್ತಿ, ಇರ್ಷಾದ್, ದೇವರಾಜ್ ಅರಸ್ ಉಪಸ್ಥಿತರಿದ್ದರು.
ಸುದ್ದಿ-3
ನಗರದ ತೊಗರಿ ಹಂಕಲ್ ಸರ್ಕಲ್‌ನಲ್ಲಿ ಮಹಾನಾಯಕ ಆಟೋ ನಿಲ್ದಾಣ ಹಾಗೂ ೭೩ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನೂರಾರು ಕನ್ನಡಾಭಿಮಾನಿಗಳೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನವ ಹಕ್ಕು ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹೊನ್ನೇಶ್ ಗಣರಾಜ್ಯೋತ್ಸವ ಆಚರಣೆ ನಮ್ಮ ಹೆಮ್ಮೆ, ಈ ದಿನ ನಮ್ಮ ಸಂವಿಧಾನವನ್ನು ನಾವು ನಮಗೆ ಅರ್ಪಣೆ ಮಾಡಿಕೊಂಡ ದಿನ ಎಂದರು.ಈ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ, ಸಹಬಾಳ್ವೆ, ಸಾಮಾಜಿಕ ಆರ್ಥಿಕ, ರಾಜಕೀಯ ಹಕ್ಕುಗಳನ್ನು ಸಮಾನವಾಗಿ ನೀಡಲಾಗಿದೆ. ಸಮಾಜದಲ್ಲಿದ್ದ ಅಸಮಾನತೆ, ಲಿಂಗ ತಾರತಮ್ಯ, ಜಾತಿ ತಾರತಮ್ಯ, ಪ್ರಾದೇಶಿಕ ತಾರತಮ್ಯ ಹೋಗಲಾಡಿಸಿ ಎಲ್ಲಾರಿಗೂ ಸಮಾನ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ರಾಷ್ಟçಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪುಷ್ಪಗುಚ್ಛ ಅರ್ಪಿಸಿ ರಾಷ್ಟçಗೀತೆ ಹಾಡಿ ಗೌರವ ವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಇಂದಾವಾರ ಗ್ರಾಮ ಪಂಚಾಯಿತಿ ಸದಸ್ಯೆ ಆಶಾ ವಸಂತ್‌ಕುಮಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ನಗರಸಭಾ ಸದಸ್ಯೆ ರೂಪ, ವಕೀಲ ಅನಿಲ್, ಕನ್ನಡಸೇನೆಯ ಜಯಪ್ರಕಾಶ್, ಸ್ಥಳೀಯರಾದ ಕೃಷ್ಣಮೂರ್ತಿ, ಸತೀಶ್, ನವೀನ್, ಕುಮಾರ್, ಆಟೋ ಸೋಮಣ್ಣ, ಧರ್ಮೇಶ್, ರವಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ-4
ನಗರದ ಶಾಂತಿನಗರದ ಕಲ್ಲುದೊಡ್ಡಿಯ ಹೆಚ್.ಕೆ.ಜೆ.ಎಂ. ಮಸೀದಿಯಲ್ಲಿ ೭೩ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಇಂದು ಮಸೀದಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಮುನೀರ್ ಅಹ್ಮದ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಸೀದಿಯ ಉಪಾಧ್ಯಕ್ಷ ಶಬ್ಬೀರ್, ಗುರುಗಳಾದ ಸಾವೂಲ್ ಹಮೀದ್ ಸಖಾಫಿ, ಸಿದ್ದಿಕ್ ಜೋರಿ, ಸ್ಥಳೀಯರಾದ ಉಸ್ಮಾನ್, ಯೂಸೂಫ್ ಮತ್ತಿತರರು ಹಾಜರಿದ್ದರು.
ಸುದ್ದಿ-5
ನಗರದ ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿಯಲ್ಲಿ ೭೩ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಸೊಸೈಟಿಯ ಅಧ್ಯಕ್ಷ ಸಿ.ಎಸ್.ಕೇಶವಮೂರ್ತಿ (ಮೊಗಣ್ಣ) ನೆರವೇರಿಸಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷ ಸಿ.ಆರ್.ಗಂಗಾಧರ್, ಸಿ.ಆರ್.ಕೇಶವಮೂರ್ತಿ, ಗಿರಿಧರ್ ಯತೀಶ್, ಜಯಂತಿ, ಕಾರ್ಯದರ್ಶಿ ಗಾಯತ್ರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಸುದ್ದಿ-6
ನಗರದ ಗೌರಿಕಾಲುವೆಯಲ್ಲಿ ೭೩ನೇ ಗಣರಾಜ್ಯೋತ್ಸವ ಪ್ರಯುಕ್ತ ವಾರ್ಡಿನ ಬಡವರ್ಗದ ಕುಟುಂಬಗಳಿಗೆ ಆಹಾರ ಕಿಟ್‌ನ್ನು ವಿತರಿಸಲಾಯಿತು.
ಕಾರ್ಯಕ್ರಮದ ಧ್ವಜಾರೋಹಣವನ್ನು ನಗರಸಭಾ ಸದಸ್ಯೆ ಗೌಸಿಯಾ ಖಾನಂ ನೆರವೇರಿ ಸಿದರು. ಈ ಸಂದರ್ಭದಲ್ಲಿ ನೂರ್ ಮಹಮ್ಮದ್, ರಿಜ್ವಾನ್, ಸಲೀಂ, ಸಾದಿಕ್, ಶಕೀಲ್, ಇರ್ಷಾನ್, ನವೀದ್, ಅಪ್ಸರ್, ಅಪೀಜ್ ಮತ್ತಿತರರಿದ್ದರು.
೧೮ ವರ್ಷದ ಪ್ರತಿಯೊಬ್ಬರಿಗೂ ಮತದಾನ ನೀಡಿದ ದಿನ, ಪ್ರತಿಯೊಬ್ಬರೂ ಮತದಾನವನ್ನು ಮಾಡುವಾಗ ಅಶೆ ಅಕಾಂಕ್ಷೆಗೆ ಒಳಗಾಗದೆ ಉತ್ತಮರಿಗೆ ಮತ ನೀಡಿದರೆ ಸಂವಿಧಾನ ರಚನಕಾರರಿಗೆ ಗೌರವ ನೀಡಿದಂತೆ ಆಗುತ್ತದೆ.
ಸಂವಿಧಾನ ರಚನೆ ಸಮಿತಿಯ ಅಧ್ಯಕ್ಷತೆ ಡಾ.ಬಾಬಾ ರಾಜೆಂದ್ರ ಪ್ರಸಾದರಿಗೆ ನೀಡಿದರೆ ಕರಡು ಸಮಿತಿಯ ಅಧ್ಯಕ್ಷತೆಯನ್ನು ಡಾ.ಬಿ.ಆರ್.ಅಂಬೇಡ್ಕರವರಿಗೆ ನೀಡಿ ಉತ್ತಮ ಸಂವಿಧಾನ ರಚನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿ.ವಿ.ವಿ.ಡಿ.ಎಸ್ ಪ್ರೌಢಶಾಲೆಯ ಧ್ವಜಾರೋಹಣವನ್ನು ಎ.ಹೆಚ್.ಪಂಪಣ್ಣ ನೇರವೇರಿಸಿದರು. ಈ ಸಂದರ್ಭದಲ್ಲಿ ಶಾಲೆ ದಾನಿಗಳಾದ ವೆಂಕೋಬಶೆಟ್ರು, ವೆಂಕಟೇಶ್ ಶೆಟ್ರು, ವಿ.ಮಲ್ಲೇಶ್, ಚಾಮರಾಜಶೆಟ್ಟಿ, ಡಾ.ಎಂ.ಸುರೇಶ್, ಕೆ.ಮಹೇಶ್, ಮುಖ್ಯಗುರುಗಳು ಹಾಗೂ ಸಹಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ :
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…