ಚಿಕ್ಕಮಗಳೂರು: ತಾಲೂಕಿನ ಕೊಳಗಾಮೆ ಗ್ರಾಮದಲ್ಲಿ ನಡೆದಿದ್ದ ವೃದ್ಧ ದಂಪತಿಯ ಜೋಡಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನಗಿರುವ ಕಾಯಿಲೆ ಹುಷಾರಾಗಲಿ ಎಂದು ತನ್ನ ಅಜ್ಜಿಯ ಮೇಲೆ ಮೊಮ್ಮಗನೇ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದಿದ್ದಾನೆ. ಇನ್ನೂ ಅತ್ಯಾಚಾರಕ್ಕೆ ಯತ್ನಿಸುವ ಮುನ್ನವೇ ಆರೋಪಿ ತನ್ನ ಅಜ್ಜನನ್ನು ಕೊಲೆಗೈದಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.
ನ.21 ರಂದು ಕೊಳಗಾಮೆ ಗ್ರಾಮದಲ್ಲಿ ಡಬಲ್ ಮರ್ಡರ್ ನಡೆದಿತ್ತು. ಕರಿಬಸವಯ್ಯ (65) ಅವರ ಪತ್ನಿ ಲಲೀತಮ್ಮ (60) ಎಂಬವರ ಕೊಲೆಯಾಗಿತ್ತು. ಪ್ರಕರಣ ನಡೆದ 48 ಗಂಟೆಯಲ್ಲಿ ಮಲ್ಲಂದೂರು ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಇದೀಗ ಆರೋಪಿಯ ಬಾಯಿಯಿಂದ ಕೊಲೆಗೆ ಕಾರಣ ಏನು ಎಂಬುದನ್ನು ಬಾಯಿ ಬಿಡಿಸಿದ್ದಾರೆ.
ನಿಶಾಂತ್ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಮಹಿಳೆಯರ ಬಳಿ ಹೋಗುವ ಅಭ್ಯಾಸ ಇತ್ತಂತೆ. ಇತ್ತೀಚೆಗೆ ಆತನ ಮೈನಲ್ಲಿ ಸಾಕಷ್ಟು ಕಜ್ಜಿಗಳಾಗಿದ್ದವು. ಆತನ ಸ್ನೇಹಿತರು, ನೀನು ಮಹಿಳೆಯರ ಬಳಿ ಹೋದಾಗ ಕಾಂಡೋಮ್ ಬಳಸಬೇಡ. ಆಗ ಕಜ್ಜಿ ಹೋಗುತ್ತೆ ಎಂದು ಹೇಳಿದ್ದರಂತೆ. ಅದಕ್ಕೆ ಬೆಂಗಳೂರಿನಲ್ಲಿ ಯಾರು ಒಪ್ಪದ ಕಾರಣ ಅಜ್ಜ-ಅಜ್ಜಿಯ ಮನೆಗೆ ಬಂದಿದ್ದನು. ಅಜ್ಜಿಯ ಮೇಲೆ ಅತ್ಯಾಚಾರ ಮಾಡುವುದು ಆತನ ಮೂಲ ಉದ್ದೇಶವಾಗಿತ್ತು. ಹಾಗಾಗಿ, ಮೊದಲಿಗೆ ಅಜ್ಜನನ್ನ ಕಲ್ಲಿನಿಂದ ಚಚ್ಚಿ, ಕೊಲೆ ಮಾಡಿ ನಂತರ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅಜ್ಜಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಬಾಯಿಯನ್ನು ಬಿಗಿಯಾಗಿ ಹಿಡಿದಿದ್ದರಿಂದ ಆಕೆಯು ಸಾವನ್ನಪ್ಪಿದ್ದಳು ಎಂದು ತಿಳಿದು ಬಂದಿದೆ.
ಕೊಲೆಯಾದ ದಂಪತಿಗೆ ಮಕ್ಕಳಿರಲಿಲ್ಲ. ಮೃತ ಲಲಿತಮ್ಮನ ತಂಗಿಯ ಮೊಮ್ಮಗ ನಿಶಾಂತ್ (21) ಎಂಬ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆತ ಅಜ್ಜ ಅಜ್ಜಿಯ ಬಳಿ ಒಡವೆ ಹಾಗೂ ಹಣವನ್ನೂ ಪಡೆದುಕೊಂಡು ಅಡವಿಟ್ಟಿದ್ದ. ಒಡವೆ ಬಿಡಿಸಿಕೊಡದ ಹಿನ್ನೆಲೆ ಆಗಾಗ ಗಲಾಟೆ ಕೂಡ ನಡೆಯುತ್ತಿತ್ತು. ಹಣಕ್ಕಾಗಿ ಅಜ್ಜ ಅಜ್ಜಿಯನ್ನು ಕೊಲೆ ಮಾಡಿದ್ದಾನೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಪೊಲೀಸರು ಕೂಡ ಅದೇ ದೃಷ್ಟಿಕೋನದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೀಗ ಕೊಲೆಗೆ ಅಸಲಿ ಕಾರಣ ತಿಳಿದು ಪೊಲೀಸರು ಸಹ ಕಂಗಾಲಾಗಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…