Featured

ಚಿಕ್ಕಮಗಳೂರು: ವೃದ್ಧ ದಂಪತಿಯ ಜೋಡಿ ಕೊಲೆ  ಕೇಸ್‌ಗೆ ಬಿಗ್‌ ಟ್ವಿಸ್ಟ್‌ ; ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದ ಮೊಮ್ಮಗ – vishwanews24

ಚಿಕ್ಕಮಗಳೂರು: ವೃದ್ಧ ದಂಪತಿಯ ಜೋಡಿ ಕೊಲೆ  ಕೇಸ್‌ಗೆ ಬಿಗ್‌ ಟ್ವಿಸ್ಟ್‌ ..

ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದ ಮೊಮ್ಮಗ.

ಚಿಕ್ಕಮಗಳೂರು: ತಾಲೂಕಿನ  ಕೊಳಗಾಮೆ ಗ್ರಾಮದಲ್ಲಿ ನಡೆದಿದ್ದ ವೃದ್ಧ ದಂಪತಿಯ ಜೋಡಿ ಕೊಲೆ  ಕೇಸ್‌ಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ತನಗಿರುವ ಕಾಯಿಲೆ ಹುಷಾರಾಗಲಿ ಎಂದು ತನ್ನ ಅಜ್ಜಿಯ ಮೇಲೆ ಮೊಮ್ಮಗನೇ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದಿದ್ದಾನೆ. ಇನ್ನೂ ಅತ್ಯಾಚಾರಕ್ಕೆ ಯತ್ನಿಸುವ ಮುನ್ನವೇ ಆರೋಪಿ ತನ್ನ ಅಜ್ಜನನ್ನು ಕೊಲೆಗೈದಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.

ನ.21 ರಂದು ಕೊಳಗಾಮೆ ಗ್ರಾಮದಲ್ಲಿ ಡಬಲ್ ಮರ್ಡರ್ ನಡೆದಿತ್ತು. ಕರಿಬಸವಯ್ಯ (65) ಅವರ ಪತ್ನಿ ಲಲೀತಮ್ಮ (60) ಎಂಬವರ ಕೊಲೆಯಾಗಿತ್ತು. ಪ್ರಕರಣ ನಡೆದ 48 ಗಂಟೆಯಲ್ಲಿ ಮಲ್ಲಂದೂರು ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಇದೀಗ ಆರೋಪಿಯ ಬಾಯಿಯಿಂದ ಕೊಲೆಗೆ ಕಾರಣ ಏನು ಎಂಬುದನ್ನು ಬಾಯಿ ಬಿಡಿಸಿದ್ದಾರೆ.

ನಿಶಾಂತ್ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಮಹಿಳೆಯರ ಬಳಿ ಹೋಗುವ ಅಭ್ಯಾಸ ಇತ್ತಂತೆ. ಇತ್ತೀಚೆಗೆ ಆತನ ಮೈನಲ್ಲಿ ಸಾಕಷ್ಟು ಕಜ್ಜಿಗಳಾಗಿದ್ದವು. ಆತನ ಸ್ನೇಹಿತರು, ನೀನು ಮಹಿಳೆಯರ ಬಳಿ ಹೋದಾಗ ಕಾಂಡೋಮ್ ಬಳಸಬೇಡ. ಆಗ ಕಜ್ಜಿ ಹೋಗುತ್ತೆ ಎಂದು ಹೇಳಿದ್ದರಂತೆ. ಅದಕ್ಕೆ ಬೆಂಗಳೂರಿನಲ್ಲಿ ಯಾರು ಒಪ್ಪದ ಕಾರಣ ಅಜ್ಜ-ಅಜ್ಜಿಯ ಮನೆಗೆ ಬಂದಿದ್ದನು. ಅಜ್ಜಿಯ ಮೇಲೆ ಅತ್ಯಾಚಾರ ಮಾಡುವುದು ಆತನ ಮೂಲ ಉದ್ದೇಶವಾಗಿತ್ತು. ಹಾಗಾಗಿ, ಮೊದಲಿಗೆ ಅಜ್ಜನನ್ನ ಕಲ್ಲಿನಿಂದ ಚಚ್ಚಿ, ಕೊಲೆ ಮಾಡಿ ನಂತರ ಅಜ್ಜಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅಜ್ಜಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಬಾಯಿಯನ್ನು ಬಿಗಿಯಾಗಿ ಹಿಡಿದಿದ್ದರಿಂದ ಆಕೆಯು ಸಾವನ್ನಪ್ಪಿದ್ದಳು ಎಂದು ತಿಳಿದು ಬಂದಿದೆ.

ಕೊಲೆಯಾದ ದಂಪತಿಗೆ ಮಕ್ಕಳಿರಲಿಲ್ಲ. ಮೃತ ಲಲಿತಮ್ಮನ ತಂಗಿಯ ಮೊಮ್ಮಗ ನಿಶಾಂತ್ (21) ಎಂಬ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆತ ಅಜ್ಜ ಅಜ್ಜಿಯ ಬಳಿ ಒಡವೆ ಹಾಗೂ ಹಣವನ್ನೂ ಪಡೆದುಕೊಂಡು ಅಡವಿಟ್ಟಿದ್ದ. ಒಡವೆ ಬಿಡಿಸಿಕೊಡದ ಹಿನ್ನೆಲೆ ಆಗಾಗ ಗಲಾಟೆ ಕೂಡ ನಡೆಯುತ್ತಿತ್ತು. ಹಣಕ್ಕಾಗಿ ಅಜ್ಜ ಅಜ್ಜಿಯನ್ನು ಕೊಲೆ ಮಾಡಿದ್ದಾನೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಪೊಲೀಸರು ಕೂಡ ಅದೇ ದೃಷ್ಟಿಕೋನದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೀಗ ಕೊಲೆಗೆ ಅಸಲಿ ಕಾರಣ ತಿಳಿದು ಪೊಲೀಸರು ಸಹ ಕಂಗಾಲಾಗಿದ್ದಾರೆ.

Vishwa News 24

Recent Posts

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

18 minutes ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

29 minutes ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

33 minutes ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

4 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

4 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

5 hours ago