ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ಸಿನಿಮಾ ರಂಗ ಬಿಟ್ಟು ವ್ಯವಸಾಯ ಮಾಡಲು ತೀರ್ಮಾನಿಸಿದ್ದು, `ನಟಭಯಂಕರ’ ನನ್ನ ಕೊನೆಯ ಸಿನಿಮಾ. ಮುಂದೇ ಸ್ವಗ್ರಾಮಕ್ಕೆ ತೆರಳಿ ವ್ಯವಸಾಯ ಮಾಡಲು ನಿರ್ಧಾರಿಸಿರುವುದ್ದಾಗಿ ತಿಳಿಸಿದ್ದಾರೆ.
ಕನ್ನಡದ ಬಿಗ್ ಬಾಸ್ ನಲ್ಲಿ ಪ್ರಥಮ ಸ್ಥಾನ ಪಡೆದು ಹಲವಾರು ಅಭಿಮಾನಿಗಳನ್ನು ಗಳಿಸಿದ್ದ ಒಳ್ಳೆ ಹುಡುಗ ಪ್ರಥಮ್ ಆ ಬಳಿಕ ಕೆಲವು ಸಿನಿಮಾಗಳಲ್ಲೂ ನಟಿಸಿದ್ದರು. ಈ ನಡುವೆ ಹಲವಾರು ವಿವಾದಗಳನ್ನು ಕೂಡಾ ಮೈಗೆಳೆದುಕೊಂಡಿದ್ದರು. ಇದೀಗ ಇನ್ನು ಮುಂದೆ ಚಿತ್ರರಂಗದ ಕಡೆ ತಲೆ ಹಾಕುವುದಿಲ್ಲ, ನಾನು ಊರಲ್ಲಿ ಕೃಷಿ ಮಾಡಿಕೊಂಡಿರುತ್ತೇನೆ ಎಂದು ಪ್ರಥಮ್ ಹೇಳಿದ್ದಾರೆ.
ಜೀವನದಲ್ಲಿ ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ. ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ. ಸಿನಿಮಾದಲ್ಲೂ ನಟಿಸಿದ್ದೇನೆ. ಅಪಾರ ಅಭಿಮಾನಿಗಳು ಇದ್ದಾರೆ. ಆದರೆ ಒತ್ತಡದ ಬದುಕು ನನಗೆ ಸೆಟ್ ಆಗಲ್ಲ ಎಂದು ತಿಳಿಸಿದ್ದಾರೆ. ಮಂದಿನ ದಿನದಲ್ಲಿ ಯಾವುದೇ ಸಿನಿಮಾ ಮಾಡದಿರುವಂತೆ ನಿರ್ಧರಿಸಿದ್ದೇನೆ. ನಮ್ಮೂರೇ ನನಗೆ ಸರಿ. ಇಲ್ಲಿ ನಾನಿರಲ್ಲ. ಸ್ವಂತ ಊರಿನಲ್ಲಿ ತೆಂಗಿನ ಸಸಿ ನೆಟ್ಟು ತೋಟ ಮಾಡುತ್ತೇನೆ. ಇಲ್ಲಿಗಿಂತ ಊರಿನಲ್ಲಿ ಕುರಿ ಸಾಕಣೆ, ಕೃಷಿ ಕೆಲಸವೇ ಮೇಲು ಎಂದಿದ್ದಾರೆ.
ದೇಶದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪಠ್ಯ ಪರಿಷ್ಕರಣೆ.. ಮೊದಲ ಬಾರಿಗೆ NCERT 9ನೇ ಕ್ಲಾಸ್‌ನಲ್ಲಿ ತುರ್ತು ಪರಿಸ್ಥಿತಿ ಪಠ್ಯ…
ಮಂಗಳೂರು: ಜೂ.29ರಿಂದ ಜು.6ರವರೆಗೆ ದೇಶದಾದ್ಯಂತ ವಿಶೇಷ ಸಹಕಾರ ಸಪ್ತಾಹ ಆಚರಣೆ ಮಂಗಳೂರು: ಸುಮಾರು 122 ವರ್ಷಗಳ ಇತಿಹಾಸವಿರುವ ರಾಷ್ಟ್ರದ ಸಹಕಾರ…
ಉಡುಪಿ: ಬಡಗುಬೆಟ್ಟು ಸೊಸೈಟಿಯಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ; 15 ಲಕ್ಷ ಮೌಲ್ಯದ ಪರಿಕರ ವಿತರಣೆ ಉಡುಪಿ: ಸಹಕಾರ…
ಇಂದು ಮಂಗಳೂರಿಗೆ ಶಾರುಕ್ ಖಾನ್ ಆಗಮನ : ಸಾರ್ವಜನಿಕರಿಗೆ ಪೋಲಿಸರ ಮಾರ್ಗಸೂಚಿ ಪ್ರಕಟ ಮಂಗಳೂರು: ನಗರದಲ್ಲಿ ಗುರುವಾರ ಆಯೋಜಿಸಲಾಗಿರುವ ಬಹುನಿರೀಕ್ಷಿತ…
ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಬೆಂಗಳೂರು: ನಟಿ ಕೃಷಿ ತಾಪಂಡ ಅವರ ಆರ್‌ಆರ್ ನಗರದ …
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ ; ಸಿನಿಮಾಗಳಿಂದ ತಾತ್ಕಾಲಿಕ ಬ್ರೇಕ್ ನಟಿ ಸಮಂತಾ ರುತ್ ಪ್ರಭು ತಾವು ಮೊದಲ…