ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಾದ ಕೂಡ್ಲೇ ಚುನಾವಣಾಧಿಕಾರಿಗಳೇ ಸರ್ವಾಧಿಕಾರಿಯಾಗಿದ್ದಾರೆ ಎಂಬ ಭಾವನೆ ಇದೀಗ ಉಡುಪಿ ನಿವಾಸಿಗಳಲ್ಲಿ ಮೂಡಿದೆ.ಇದಕ್ಕೆ ಕಾರಣ ಉಡುಪಿಯ ಸ್ಥಳೀಯ ಬಿಜೆಪಿ ನಾಯಕ ರಾಘವೇಂದ್ರ ಕಿಣಿಯವರ ಮನೆಗೆ ಚುನಾವಣಾಧಿಕಾರಿಗಳು ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿ ಭಯದ ವಾತಾವರಣ ಮೂಡಿಸಿರುವುದು. ಹೌದು ರಾಘವೇಂದ್ರ ಕಿಣಿ ಸ್ಥಳೀಯ ಬಿಜೆಪಿ ನಾಯಕರಾಗಿ ಹಲವು ಸಾಮಾಜಿಕ ಕಾರ್ಯ ನಡೆಸಿಕೊಂಡು ಬಂದಿದ್ದಾರೆ. ಹೀಗಾಗಿ ತನ್ನ ಮಗ ರಿತ್ವಿಕ್ ಕಿಣಿ ಜೊತೆಗೆ ಇತರ 21 ವಿವಿಧ ಜಾತಿಯ ಮಕ್ಕಳಿಗೆ ಸಾಮೂಹಿಕ ಉಪನಯನ ಮಾಡಲು ಹೊರಟಿದ್ದರು. ಇದಕ್ಕೆ 21ಮಕ್ಕಳ ತಾಯಂದಿರಿಗೆ,ತನ್ನ ಮನೆಯ ಮಹಿಳೆಯರಿಗೆ ಸೀರೆ ವಿತರಿಸಲು ಬೆಂಗಳೂರಿನಿಂದ ಬಸ್ಸಿನಲ್ಲಿ ಒಟ್ಟು 50ಸೀರೆಗಳನ್ನು ತರಿಸಿದ್ದರು. ಈ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲಾಧಿಕಾರಿಗಳು ಖಾಸಗಿ ಮನೆಯ ಕಾರ್ಯಕ್ರಮಗಳಿಗೆ ಅನುಮತಿ ಇದ್ದರೆ ತೊಂದರೆ ಕೊಡಬಾರದು ಎಂದು ಆದೇಶ ನೀಡಿದ್ದರು ಆದರೆ ಉಡುಪಿಯ ಚುನಾವಣಾಧಿಕಾರಿಗಳು ದೂರಿನ ಹಿನ್ನಲೆಯಲ್ಲಿ ಸಂಜೆ ರಾಘವೇಂದ್ರ ಕಿಣಿಯವರ ಮನೆಗೆ ಹಾಗೂ ಕನ್ಸಲ್ಟೆನ್ಸಿ ಕಚೇರಿಗೆ ದಾಳಿ ನಡೆಸಿದ್ದಾರೆ. ಇಲ್ಲಿ ಕಚೇರಿಗೆ ನಾಲ್ಕು ಅಧಿಕಾರಿಗಳು ತಪಾಸಣೆ ನಡೆಸಿದರೆ, ಮನೆಯಲ್ಲಿ ಸುಮಾರು 40ಮಂದಿ ದಾಳಿ ನಡೆಸಿದ್ದಾರೆ. ಸುಮಾರು 18ಮಂದಿ ಪೊಲೀಸರು ಮನೆಯನ್ನು ಸುತ್ತುವರೆದು ಕಾಂಪೌಂಡ್ ಕೂಡ ಹತ್ತಿ ಮನೆಮಂದಿಯನ್ನು ಗುರಿಯಾಗಿಡಿಸಿ ಮನೆಯನ್ನು ಸರ್ಚ್ ವಾರೆಂಟ್ ಮೂಲಕ ತಪಾಸಣೆ ನಡೆಸಿ ಮನೆಯೊಳಗೆ ವೀಡಿಯೋ ಚಿತ್ರೀಕರಣ ನಡೆಸಿದ್ದಾರೆ.
ಈ ದಾಳಿ ನಡೆದಿರುವುದು ಸಾವಿರಾರು ಸೀರೆ, ಕೋಟ್ಯಾಂತರ ಹಣ ವಿದೆ ಅನ್ನೋ ರೀತಿಯಿತ್ತು ಆದರೆ ದಾಳಿ ವೇಳೆ ಸಿಕ್ಕಿರುವುದು ಕೇವಲ 38 ನೀಲಿ ಬಣ್ಣದ ಸೀರೆ, ಲಡ್ಡು ಪ್ಯಾಕೆಟ್, ಪಂಚೆ, ಬ್ರಹ್ಮೋಪದೇಶ ಮಕ್ಕಳಿಗೆ ನೀಡುವ ವಸ್ತ್ರ ಮಾತ್ರ. ರಾಘವೇಂದ್ರ ಕಿಣಿಯವರು 6ತಿಂಗಳ ಹಿಂದೆ ಪತ್ರಿಕೆಯಲ್ಲಿ ಜಾಹುರಾತು, ಅನುಮತಿ ಪತ್ರ, ಪೊಲೀಸ್ ಅನುಮತಿ, ಹೀಗೆ ಎಲ್ಲಾ ಕಾನೂನು ರೀತಿಯ ಅನುಮತಿ ಪತ್ರ, ರಿಸಿಪ್ಟ್ ತೋರಿಸಿಯೂ ಸಾಮೂಹಿಕ ಬ್ರಹ್ಮೋಪದೇಶ ಎಂದರೂ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ. ಇಲ್ಲಿ ಮುಖ್ಯಾಧಿಕಾರಿಗಳು ಹಿಂದಿ ಭಾಷಿಗರಾದ ಕಾರಣ ಕನ್ನಡದಲ್ಲಿ ಬರೆದ ಆಮಂತ್ರಣ ಓದಲು ಬಾರದೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ಪೂವಿತ ಎಂಬ ಮುಖ್ಯಾಧಿಕಾರಿ ಇಲ್ಲಿನ ಧಾರ್ಮಿಕ ಆಚರಣೆ ಅರಿವಿಲ್ಲದೆ ಉತ್ತರಿಸಲಾಗದ ಪ್ರಶ್ನೆಗಳೊಂದಿಗೆ ಸಾಮೂಹಿಕ ಉಪನಯನದಲ್ಲಿ ಬರೋ ಮಕ್ಕಳಿಗೂ ತಮಗೂ ಸಂಬಂಧವೇನು ಎಂಬ ಅಸಂಬಂಧ ಪ್ರಶ್ನೆ ಕೇಳುವ ಮೂಲಕ ಹಿಂಸೆ ನೀಡಿದ್ದಾರೆ ಎಂದು ರಾಘವೇಂದ್ರ ಕಿಣಿಯವರು ಅಸಮಧಾನ ಹೊರಹಾಕಿದ್ದಾರೆ.
ಚುನಾವಣಾಧಿಕಾರಿಗಳ ನಡೆ ಉಡುಪಿಯ ಜನರಲ್ಲಿ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.
ವಿಟ್ಲ: ಕಾರು ಮತ್ತು ದ್ವಿಚಕ್ರ ವಾಹನ ಭೀಕರ ಅಪಘಾತ; ಸವಾರ ಮೃತ್ಯು ವಿಟ್ಲ: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಸಂಭವಿಸಿದ…
ಉಡುಪಿ: ಸೆ. 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ; ಸೆ.5ರಂದು ವಿಟ್ಲಪಿಂಡಿ ಉತ್ಸವ ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಶಿರೂರು ಮಠದ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ…
ಜವಾಬ್ದಾರಿಗಳನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ : ನಿತಿನ್ ಗಡ್ಕರಿ ಮುಂಬೈ: ಈ ಹಿಂದೆ ಮಾಡುತ್ತಿದ್ದಷ್ಟು ಕೆಲಸವನ್ನು ಇನ್ನು…
ಹಬ್ಬಗಳ ಹಿನ್ನೆಲೆ : ದಕ್ಷಿಣ ಕನ್ನಡ ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ರಾತ್ರಿ 11:30 ಗಂಟೆಯ ನಂತರ ಮೆರವಣಿಗೆ ,…
ಸೆ. 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರು : ರಾಜ್ಯ ಸರ್ಕಾರದ…