ಚಿಕ್ಕಮಗಳೂರು : ಚುನಾವಣೆಯಲ್ಲಿ ತಾನು ಗೆದ್ದರೆ ನಿರಂತರವಾಗಿ ಮತದಾರರ ಸುಖ ದುಃಖಗಳಿಗೆ ಸ್ಪಂದಿಸುವುದಾಗಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಹೇಳಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರಿ ಅಮೃತ್ ಶೆಣೈಯವರು ಇಂದು ಶೃಂಗೇರಿಯ ಬಾಳೆಹೊನ್ನೂರು ಬಳಿ ತಮ್ಮ ಚುನಾವಣಾ ಪ್ರಚಾರವಾಗಿ ಮಾತನಾಡುತ್ತಾ, ಈಗಿನ ವಾತವರಣದಲ್ಲಿ ಅಭ್ಯರ್ಥಿಗಳು ಪರಸ್ಪರ ಕೆಸೆರೆಚಾಟದಲ್ಲಿ ತೊಡಗಿಕೊಂಡಿದ್ದಾರೆ. ಅಭಿವೃದ್ದಿಯ ಬಗ್ಗೆ ಮಾತನಾಡದೆ ಕೇವಲ ಟಿಕೆ ಟಿಪ್ಪಣಿಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ತಾನು ಕಾಂಗ್ರೆಸ್ ಪಕ್ಷದಲ್ಲಿ ಒಂದು ದಶಕಕ್ಕೂ ಮಿಕ್ಕಿ ನಿಸ್ವಾರ್ಥದಿಂದ ದುಡಿದು ಕಳೆದ 5 ವರ್ಷದಲ್ಲಿ ಸಿಕ್ಕ ಎಲ್ಲಾ ಅವಕಾಶಗಳಲ್ಲಿ ಪ್ರಸ್ತುತ ಸಂಸದೆ ಶೋಭಾ ಕರಂದ್ಲಾಜೆ ಅವರ ನಿಷ್ಕ್ರೀಯತೆಯನ್ನು ಅದೇ ರೀತಿ ಕೇಂದ್ರ ಸರಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ವಾತಾವರಣವಿದ್ದರೂ ಸಹ ಕ್ಷೇತ್ರವನ್ನು ಜೆಡಿಎಸ್ ನವರಿಗೆ ಕೊಟ್ಟಿರುವುದುನ್ನು ವಿರೋಧಿಸಿ, ಜೆಡಿಎಸ್ ನವರು ತನ್ನ ಬಳಿ ಯಾರೇ ಅಭ್ಯರ್ಥಿ ಇಲ್ಲದೆ ಕಾಂಗ್ರೆಸ್ ಪಕ್ಷದ ಪ್ರಮೋದ್ ಮಧ್ವರಾಜ್ ಅವರಿಗೆ ಟಿಕೇಟ್ ನೀಡಿರುವುದನ್ನು ವಿರೋಧೀಸಿ ಸ್ವತಂತ್ರವಾಗಿ ವಜ್ರದ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.
ವಜ್ರದಂತೆ ಕಠಿಣನಾಗಿ ಸಾಮಾಜಿಕ ಸಾಮರಸ್ಯ ಕೆಡಹುವ ಶಕ್ತಿಗಳ ವಿರುದ್ಧ ಹೋರಾಡಲು ಸಿದ್ಧನಿದ್ದೇನೆ. ಈಗಾಗಲೇ ಕ್ಷೇತ್ರದಾದ್ಯಂತ ಅಭೂತಪೂರ್ವವಾಗಿ ಜನರು ಬೆಂಬಲಿಸುತ್ತಿದ್ದಾರೆ. ಬಾಳೆಹೊನ್ನೂರಿನ ಪ್ರಜ್ಙವಂತ ಮತದಾರರೂ ಕೂಡಾ ಆಶೀರ್ವಧಿಸಬೇಕೆಂದು ಕೇಳಿಕೊಂಡರು.
ಈ ವೇಳೆ ಮನೋಶಾಸ್ತ್ರಜ್ಞೆ ಜಯಶ್ರೀ ಭಟ್, ಇರ್ಫಾನ್, ರಾಜೇಶ್, ದಿನೇಶ್, ಸಫಾನ್ ಉಪಸ್ಥಿತರಿದ್ದರು.
ಉಡುಪಿ:ಮಾದಕ ದ್ರವ್ಯ ಪ್ರಕರಣ : ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…
ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…
ಕುಂದಾಪುರ: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ಕಳವು ಕುಂದಾಪುರ: ಕುಂದಾಪುರದ ಬೊಬ್ಬರ್ಯನಕಟ್ಟೆಯ ಮನೆಯಲ್ಲಿ ಯಾರೂ ಇಲ್ಲದ…
ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ ಬೆಂಗಳೂರು: ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ (ಜಿ.ಎಸ್.ಪಾಟೀಲ್)…
ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಳಗೆ ನುಗ್ಗಿದ ನೀರು .. 7 ಕಾರ್ಮಿಕರ ದಾರುಣ ಸಾವು ; 14ಕ್ಕೂ ಹೆಚ್ಚು ಮಂದಿಗೆ…
ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ ; ಮನವಿಗೆ ಸ್ಪಂದಿಸಿದ ಸಿಎಂ ಚುನಾವಣೆ, ಪಕ್ಷ ಸಂಘಟನೆ ಕಾರಣ…