ದಕ್ಷಿಣ ಕನ್ನಡ

ಚುನಾವಣೆ ಗೆಲುವಿಗಾಗಿ ಯಾಗಕ್ಕೆ ಮೊರೆ ಹೋದ ಮುಖ್ಯಮಂತ್ರಿ ಕುಟುಂಬ

ಮಂಗಳೂರು: ಸಂಕಟ ಬಂದಾಗ ವೆಂಕಟರಮಣ ಎಂಬಂತೆ ‘ಸಮಾಜವಾದಿ’ ಸಿಎಂ ಸಿದ್ದರಾಮಯ್ಯ ಚುನಾವಣೆ ಗೆಲುವಿಗಾಗಿ ಅವರ ಕುಟುಂಬ ಯಜ್ಞ, ಯಾಗದ ಮೊರೆ ಹೋಗಿದೆ. ಮೂಢನಂಬಿಕೆಗಳ ವಿರುದ್ಧ ಮೌಢ್ಯ ನಿಷೇಧ ಕಾಯ್ದೆಯ ಅಸ್ತ್ರ ಬಿಟ್ಟಿದ್ದ ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಕೈನಲ್ಲಿ ನಿಂಬೆಹಣ್ಣು ಹಿಡಿದು ಸುದ್ದಿ ಆಗಿದ್ದರು.

ಇದೀಗ ಅವರು ಸ್ಪರ್ಧಿಸಲಿರುವ ಎರಡೂ ಕ್ಷೇತ್ರಗಳಲ್ಲಿ ಕಠಿಣ ಸವಾಲು ಎದುರಾಗಿರುವುದರಿಂದ ಕೇರಳ ಹಾಗೂ ಉಡುಪಿಯ ಜ್ಯೋತಿಷಿಗಳ ಸಲಹೆ ಪರಿಗಣಿಸಿ ದೇವರ ಮೊರೆ ಹೋಗಿದ್ದಾರೆ. ಕಳೆದ 15 ದಿನಗಳಿಂದ ಮುಖ್ಯಮಂತ್ರಿ ಗೆಲುವಿಗೆ ಹಾಗೂ ದೋಷ ನಿವಾರಣೆಗಾಗಿ ರಾಜ್ಯ ಹಾಗೂ ಕೇರಳದಲ್ಲಿ ವಿವಿಧ ಯಜ್ಞ -ಯಾಗಗಳನ್ನು ಸಿಎಂ ಕುಟುಂಬ ಸದಸ್ಯರು ನಡೆಸಿಕೊಂಡು ಬಂದಿದ್ದಾರೆ.

ಕಾಗೆ ಆತಂಕ: ಸಿಎಂ ಪತ್ನಿ ಕೇರಳ, ನಂಜನಗೂಡು ಹಾಗೂ ಬೆಂಗಳೂರಿನ ವಿವಿಧೆಡೆ ಮೂರು ನಾಲ್ಕು ದಿನದಿಂದ ವಿವಿಧ ಧಾರ್ವಿುಕ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ.ಕಾರಿನ ಮೇಲೆ ಕಾಗೆ ಕುಳಿತ ಬಳಿಕ ಸಿಎಂ ಮನೆಯವರು ಕೇರಳದ ಜ್ಯೋತಿಷ್ಯರನ್ನು ಸಂರ್ಪಸಿದ್ದು, ಅವರು ಹಲವು ದೋಷ ನಿವಾರಣಾ ಕ್ರಮಗಳನ್ನು ಸೂಚಿಸಿ ದ್ದರು. ಇದರಂತೆ ಆಗ ಕೆಲವೊಂದು ಧಾರ್ವಿುಕ ಕ್ರಮಗಳನ್ನು ಮನೆಯ ವರು ನಡೆಸಿದ್ದರು. ಅದಾದ ಬಳಿಕ ಈ ಮತ್ತೆ ಚುನಾವಣೆಯಲ್ಲಿ ಎದುರಾಗಿರುವ ಸಂಕಟ ನಿವಾರಿಸಲು ಉಡುಪಿ, ಕೇರಳ ಮೂಲದ ಜ್ಯೋತಿಷಿಗಳ ಸಲಹೆಯಂತೆ ಮತ್ತಷ್ಟು ಕ್ರಮಗಳನ್ನು ಅನುಸರಿಸಲಾಗಿದೆ. ಶುಕ್ರವಾರ ಬೆಳಗ್ಗೆ ನಂಜನಗೂಡಿನಲ್ಲಿ ಪೂರ್ಣ ನವಗ್ರಹ ಶಾಂತಿ ಹೋಮ ನಡೆಸಲಾಗಿದೆ. ಆದರೆ ಯಾವುದೇ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಉಪಸ್ಥಿತರಿರಲಿಲ್ಲ. ಪತ್ನಿ ಹಾಗೂ ಕುಟುಂಬದ ಕೆಲ ಸದಸ್ಯರು ಭಾಗವಹಿಸಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೃತ್ರಿಮ ದೋಷ ನಿವಾರಣೆಗೆ ಉಡುಪಿ ಮೂಲದ ವೈದಿಕರು ಹೋಮಗಳನ್ನು ನೇರವೇರಿಸಿದ್ದರು.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago