ನವದೆಹಲಿ,: “ಜಗತ್ತಿನಲ್ಲಿ ಔಷಧ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸಾಧನೆ ಹಾಗೂ ಕೊಡುಗೆ ಶ್ಲಾಘನೀಯ. ಇದು ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಟ್ವೀಟ್ ಮೂಲಕ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ದೇಶದ ಎಲ್ಲಾ ವೈದ್ಯರಿಗೆ ಶುಭ ಕೋರಿರುವ ಪ್ರಧಾನಿ ಮೋದಿ ಅವರು, “ವೈದ್ಯರ ದಿನದಂದು ಎಲ್ಲಾ ವೈದ್ಯರಿಗೆ ನನ್ನ ಶುಭಾಶಯಗಳು. ಜಗತ್ತಿನಲ್ಲಿ ಔಷಧ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸಾಧನೆ ಹಾಗೂ ಕೊಡುಗೆ ಶ್ಲಾಘನೀಯ. ಇದು ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸುವಲ್ಲಿ ಸಹಕಾರಿ” ಎಂದಿದ್ದಾರೆ.
ಟ್ವೀಟ್‌ನಲ್ಲಿ ಕಳೆದ ಭಾನುವಾರ ಮನ್ ಕೀ ಬಾತ್‌ನಲ್ಲಿ ವೈದ್ಯರ ಬಗ್ಗೆ ಆಡಿರುವ ಮಾತುಗಳನ್ನು ಪ್ರಧಾನಿ ಮೋದಿ ಅವರು ಪೋಸ್ಟ್ ಮಾಡಿದ್ದಾರೆ.
“ಕೊರೊನಾ ಸಾಂಕ್ರಾಮಿಕದ ಸಂದರ್ಭ ವೈದ್ಯರು ಸಮಾಜಕ್ಕೆ ನೀಡಿರುವ ಸೇವೆಗೆ ನಾವೆಲ್ಲರೂ ಕೃತಜ್ಞರು. ತಮ್ಮ ಜೀವನದ ಬಗ್ಗೆ ವೈದ್ಯರು ಕಾಳಜಿವಹಿಸದೇ, ನಮ್ಮ ಆರೈಕೆ ಮಾಡಿದ್ದಾರೆ. ಹಾಗಾಗಿ ಈ ಬಾರಿಯ ರಾಷ್ಟ್ರೀಯ ವೈದ್ರ ದಿನವು ಅತ್ಯಂತ ವಿಶೇಷವಾಗಿದೆ” ಎಂದು ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ತಿಳಿಸಿದ್ದರು.
ಖ್ಯಾತ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬಿ.ಸಿ ರಾಯ್ ಅವರು ಜನ್ಮದಿನದ ನೆನಪಿಗಾಗಿ ಜು.1 ಅನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.
ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…
ಕಾರವಾರ - ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…
ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…
ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ; ₹23.67 ಲಕ್ಷ ಮೌಲ್ಯದ ಸೊತ್ತು ವಶ…
ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…
ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…